ಹೊಳಲುವಿನ ಸುಂದರ ಶಿಲ್ಪ ಯೋಗ ನರಸಿಂಹ

*ಶ್ರೀನಿವಾಸ ಮೂರ್ತಿ ಎನ್ ಎಸ್

ನಾಡಿನ ದೇವಾಲಯ ಪರಂಪರೆಯಲ್ಲಿ ಹೊಯ್ಸಳರು ತಮ್ಮ ವಿಭಿನ್ನ ಕೆತ್ತನೆಯಿಂದ ಗಮನ ಸೆಳೆದವರು.
ಅವರ ಹಲವು ದೇವಾಲಯಗಳು ತಮ್ಮ ಹೊರ ಭಿತ್ತಿಯ ಕೆತ್ತನೆಯಿಂದ ಪ್ರಸಿದ್ದಿ ಪಡೆದಿದ್ದರೆ ಹಲವು
ದೇವಾಲಯಗಳು ಅಲ್ಲಿನ ಸುಂದರ ಮೂರ್ತಿ ಶಿಲ್ಪಗಳಿಂದ ಗಮನ ಸೆಳೆಯುತ್ತದೆ. ಆದರೆ ಎಲ್ಲಾ
ದೇವಾಲಯಗಳು ಸುಸ್ಥಿಯ ಹಂತದಲ್ಲಿ ಇಲ್ಲ.

ಕೆಲವು ದೇವಾಲಯಗಳು ನವೀಕರಣದ ಸ್ಪರ್ಶ ಪಡೆದಿದ್ದರೆ, ಕೆಲವು ದೇವಾಲಯಗಳು ಸ್ಥಳೀಯ ನಿರ್ವಹಣೆ ಹಾಗೂ ಸರ್ಕಾರದ ಸಹಾಯದ ಕೊರೆತೆಯಲ್ಲಿ ನರಳುತ್ತಿವೆ.
ಹೊಯ್ಸಳರ ಕಾಲದಲ್ಲಿ ನಿರ್ಮಾಣವಾದ ಹಲವು ವೈಷ್ಣವ ದೇವಾಲಯಗಳಲ್ಲಿ ಪ್ರಮುಖವಾಗಿ ನರಸಿಂಹ
ಹಾಗೂ ವೇಣುಗೊಪಾಲ ಮಾತು ಚನ್ನಕೇಶವನ ಮೂರ್ತಿಗಳು ಸಾಮಾನ್ಯವಾಗಿ ಕಾಣ ಸಿಗುತ್ತದೆ. ಅವರ
ಹಲವು ದೇವಾಲಯಗಳಲ್ಲಿ ಸುಂದರವಾದ ನರಸಿಂಹನ ಶಿಲ್ಪ ಹೊಂದಿದ್ದರೂ, ಕೆಲವು ದೇವಾಲಯಗಳಲ್ಲಿ ನಿರ್ವಹಣೆ ಕೊರೆತೆಯಿಂದ ಅವನತಿಯ ಸಾಗಿರುವ ದೇವಾಲಯವಗಳಿವೆ. ಅಂತಹ ಸಾಲಿನಲ್ಲಿ ಕಾಣ ಬರುವ ಅಪರೂಪದ ಶಿಲ್ಪ ಇದ್ದು ಅವನತಿಯತ್ತ ಸಾಗಿದ ದೇವಾಲಯವಿರುವುದು ಹಾಸನ ಜಿಲ್ಲೆಯಲ್ಲಿನ ಶಾಂತಿಗ್ರಾಮದ ಬಳಿ ದುದ್ದ ಹೋಬಳಿಯಲ್ಲಿ ಇರುವ ಹೊಳಲು ಗ್ರಾಮದಲ್ಲಿ.
ದೇವಾಲಯದ ನಿರ್ಮಾಣದ ಬಗ್ಗೆ ಖಚಿತ ಮಾಹಿತಿ ಇಲ್ಲದಿದ್ದರೂ ಹೊಯ್ಸಳರ ಕಾಲದಲ್ಲಿ
ನಿರ್ಮಾಣವಾದ ಈ ದೇವಾಲಯ ಗರ್ಭಗುಡಿ, ಅಂತರಾಳ ಹಾಗೂ ನವರಂಗ ಹೊಂದಿದ್ದು ಮುಂದಿನ
ಮುಖಮಂಟಪ ನಂತರ ಕಾಲದ ವಿಸ್ತರಣೆ. ಗರ್ಭಗುಡಿಯಲ್ಲಿ ಎರಡಿ ಎತ್ತರದ ಪಾಣಿ ಪೀಠದ ಮೇಲೆ
ಸುಮಾರು ಅರು ಅಡಿ ಎತ್ತರದ ನರಸಿಂಹ ಶಿಲ್ಪವಿದೆ.

ಯೋಗ ಆಸೀನ ಭಂಗಿಯಲ್ಲಿನ ಈ ಶಿಲ್ಪ ಎರಡೂ ಕಾಲನ್ನು ಒಂದರ ಒಳಗೆ ಒಂದು ಸೇರಿದಂತೆ ಇರುವುದು ವಿಷೇಶ. ಮೇಲಿನ ಕೈನಲ್ಲಿ ಶಂಖ ಮತ್ತು ಚಕ್ರ ಇದ್ದು ಕೆಳಗಿನ ಎರಡು ಕೈಗಳು ಕಾಲಿನ ಮೇಲೆ ಇದ್ದು ಯೋಗಾಸಿನ ಭಂಗಿಯಲ್ಲಿ ಇರುವದರಿಂದ ಯೋಗ ನರಸಿಂಹ ಎಂಬ ಹೆಸರು ಇದೆ. ಶಿಲ್ಪದ ಪ್ರಭಾವಳಿಯಲ್ಲಿ ಸುಂದರ ದಶಾವಾತರದ ಕೆತ್ತನೆ ಇದೆ.

ಸುಂದರ ಕಿರೀಟದ ಕೆತ್ತನೆ ಇದ್ದು ಕೈನಲ್ಲಿನ ಕಲಾತ್ಮಕ ಉಗುರಿನ ಕೆತ್ತನೆ ಗಮನ ಸೆಳೆಯುತ್ತದೆ.
ನವರಂಗದಲ್ಲಿ ಹೊಯ್ಸಳ ಶೈಲಿಯ ಕಂಭಗಳಿದ್ದು ವಿತಾನದಲ್ಲಿ ಕಮಲದ ಕೆತ್ತನೆ ಇದೆ. ಮುಂದಿನ
ಮಂಟಪವನ್ನು ನಂತರದ ಕಾಲದಲ್ಲಿ ದೇವಾಲಯದ ಸಂರಕ್ಷಣೆಗೆ ನಿರ್ಮಿಸಿಲಾಗಿದ್ದು ಈಗ ಅದು
ಅವನತಿಯತ್ತ ಸಾಗಿದೆ. ಕಳೆದ ಹಲವು ದಶಕದಿಂದ ಅನಾಥವಾಗಿದ್ದ ಈ ದೇವಾಲಯಕ್ಕೆ ಹಾಸನ ಜಿಲ್ಲಾ

ಐತಿಹಾಸಿಕ ಸಂರಕ್ಷಣ ವೇದಿಕೆ ಮತ್ತು ರಾಷ್ಟ್ರ ಗೌರವ ಸಂರಕ್ಷಣಾ ಪರಿಷತ್ ದೀಪ ಹಾಗೆ ಬಾಗಿಲಿನ
ವ್ಯವಸ್ಥೆ ಮಾಡಿದ್ದು ನವೀಕರಣಕ್ಕಾಗಿ ಕಾಯುತ್ತಿದೆ. ಊರಿನವರು ಮತ್ತು ಸರ್ಕಾರ ಇದನ್ನು ಸಂರಕ್ಷಣೆ
ಮಾಡದಿದ್ದಲ್ಲಿ ಅಪುರೂಪದ ಶಿಲ್ಪದ ಈ ದೇವಾಲಯ ಮರೆತ ಪುಟಗಳಲ್ಲಿ ಸೇರೀತು.
ತಲುಪವ ಬಗೆ: ಮಂಗಳೂರು – ಬೆಂಗಳೂರು ಹೆದ್ದಾರಿಯಲ್ಲಿ ಶಾಂತಿಗ್ರಾಮದ ಬಳಿ ಸುಮಾರು 3 ಕಿಮೀ
ದೂರದಲ್ಲಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles