ಒಂದೆಲಗ, ಬ್ರಾಹ್ಮೀ, ಕರಾವಳಿ ಭಾಗದಲ್ಲಿ ತಿಮರೆ ಎಂದು ಕರೆಯಲ್ಪಡುವ ಒಂದೆಲಗ, ಎಲೆ ಒಂದೇ ಆದರೂ ಉಪಯೋಗ ಮಾತ್ರ ಹಲವು. ಔಷಧದ ಗುಣ ಹೊಂದಿರುವ ಈ ಎಲೆಯನ್ನು ಆಹಾರದಲ್ಲಿಯೂ ಬಳಕೆ ಮಾಡುತ್ತಾರೆ. ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದಾಗಿ ಆಯುರ್ವೇದ ವೈದ್ಯ ಪದ್ಧತಿ ಹೇಳುತ್ತದೆ.
ಬೇಕಾಗುವ ಸಾಮಗ್ರಿ: ಬ್ರಾಹ್ಮೀ ಎಲೆ/ಒಂದೆಲಗ- 30 ಎಲೆ, ಜೀರಿಗೆ ಒಂದು ಚಮಚ, ಕಾಳು ಮೆಣಸು ಅರ್ಧ ಚಮಚ, ತೆಂಗಿನ ತುರಿ ಅರ್ಧ ಕಪ್, ತುಪ್ಪ ಒಂದು ಚಮಚ, ಮಜ್ಜಿಗೆ 5 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಒಗ್ಗರಣೆಗೆ ಒಣಮೆಣಸು 2, ಜೀರಿಗೆ ಅರ್ಧ ಚಮಚ, ಸಾಸಿವೆ, ತುಪ್ಪ.
ಮಾಡುವ ವಿಧಾನ: ತುಪ್ಪದಲ್ಲಿ ಕಾಳುಮೆಣಸು, ಜೀರಿಗೆ ಹುರಿದುಕೊಳ್ಳಬೇಕು. ನಂತರ ಒಂದೆಲಗ ಎಲೆಯನ್ನು ಬಾಡಿಸಿಕೊಳ್ಳಿ. ಎಲ್ಲವನ್ನು ಮಿಕ್ಸಿ ಜಾರ್ಗೆ ಅದಕ್ಕೆ ತುರಿದ ತೆಂಗಿನಕಾಯಿ, ಹಾಕಿ ಮಜ್ಜಿಗೆಯಲ್ಲೇ ನುಣ್ಣಗೆ ರುಬ್ಬಿಕೊಳ್ಳಬೇಕು. ಅದಕ್ಕೆ ಒಗ್ಗರಣೆ ಮಾಡಿದರಾಯಿತು.