ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವ

ಬೆಂಗಳೂರು: ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಗುರುಸಾರ್ವಭೌಮರ ಪಟ್ಟಾಭಿಷೇಕ ಮತ್ತು ವರ್ಧಂತ್ಯೋತ್ಸವ ಸಮಾರಂಭ ಮಾರ್ಚ್ 15 ರಿಂದ 20ರ ವರೆಗೆ ನಡೆಯಲಿದ್ದು, ಬೆಂಗಳೂರು ನಗರದ ಜಯನಗರ 4ನೇ ‘ಟಿ’ ಬಡಾವಣೆಯಲ್ಲಿರುವ ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಪ್ರಯುಕ್ತ ಪ್ರತಿದಿನ ಬೆಳಗ್ಗೆ 8-30ಕ್ಕೆ ಹೋಮಗಳು, ಸಂಜೆ 6-30ಕ್ಕೆ ಪ್ರವಚನ ನಡೆಯಲಿದೆ.

ಮಾರ್ಚ್ 15 ರಂದು “ಮನ್ಯುಸೂಕ್ತ ಹೋಮ”, “ಪುರುಷಸೂಕ್ತ ಹೋಮ”, ಸಂಜೆ ಡಾ|| ಸತ್ಯಧ್ಯಾನಾಚಾರ್ ಕಟ್ಟಿ ಇವರಿಂದ “ಪ್ರಾತಃ ಸಂಕಲ್ಪ ಗದ್ಯ” ಪ್ರವಚನ, 16 ರಂದು “ಸುದರ್ಶನ ಹೋಮ”, ಶ್ರೀ ಜಿ. ಪಿ. ನಾಗರಾಜಾಚಾರ್ ರವರಿಂದ “ಗುರುಗುಣ ಸ್ತವನ” ಪ್ರವಚನ, 17 ರಂದು “ಪವಮಾನ ಹೋಮ”, ಡಾ|| ವಿನಾಯಕಾಚಾರ್ ನಾಮಣ್ಣನವರ್ ರವರಿಂದ “ಶ್ರೀರಾಮ ಚಾರಿತ್ರ್ಯ ಮಂಜರಿ” ಪ್ರವಚನ, 18 ರಂದು “ಮೃತ್ಯುಂಜಯ ಹೋಮ”, ಡಾ|| ವ್ಯಾಸನಕೆರೆ ಪ್ರಭಂಜನಾಚಾರ್ ಅವರಿಂದ “ಪರಿಮಳ ಗ್ರಂಥ” ಪ್ರವಚನ, 19ರಂದು “ಧನ್ವಂತರಿ ಹೋಮ”, ಶ್ರೀ ಕರ್ನೂಲು ಶ್ರೀನಿವಾಸಾಚಾರ್ ಅವರಿಂದ “ಗೀತಾ ವಿವೃತ್ತಿ” ಪ್ರವಚನ, ಹಾಗೂ 20ರಂದು “ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ”, ಶ್ರೀ ವಿದ್ಯಾಧೀಶಾಚಾರ್ಯ ಗುತ್ತಲ್ ಇವರಿಂದ “ಸರ್ವಸಮರ್ಪಣ ಗದ್ಯ” ವಿಷಯವಾಗಿ ಪ್ರವಚನಗಳನ್ನು ಏರ್ಪಡಿಸಲಾಗಿದೆ ಎಂದು ಸಮಿತಿಯ ಗೌರವ ಕಾರ್ಯದರ್ಶಿಗಳಾದ ಶ್ರೀ ಆರ್. ರಾಘವೇಂದ್ರ ಅವರು ತಿಳಿಸಿದ್ದಾರೆ.

ಕಾರ್ಯಕ್ರಮಗಳು ನಡೆಯುವ ಸ್ಥಳ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 2/CA, 13ನೇ ಮುಖ್ಯರಸ್ತೆ, 4ನೇ ‘ಟಿ’ ಬಡಾವಣೆ, ಜಯನಗರ ಬೆಂಗಳೂರು.

ಹೆಚ್ಚಿನ ಮಾಹಿತಿಗಾಗಿ: 080-41169934 ಸಂಪರ್ಕಿಸಿ.

Related Articles

ಪ್ರತಿಕ್ರಿಯೆ ನೀಡಿ

Latest Articles