ಹಳೇಬೀಡಿನ ಅಜ್ಞಾತ ಕಲಾಸಿರಿ ಕೇದಾರೇಶ್ವರ

*ಶ್ರೀನಿವಾಸ ಮೂರ್ತಿ ಎನ್ ಎಸ್

ಶ್ರೀನಿವಾಸ ಮೂರ್ತಿ ಎನ್ ಎಸ್

ಹಳೇಬೀಡೆಂದರೆ ನಮಗೆ ನೆನಪಾಗುವುದೇ ವೈಭವದ ಹೊಯ್ಸಳೇಶ್ವರ ದೇವಾಲಯ ಮಾತ್ರ. ಆದರೆ ಹತ್ತಿರದಲ್ಲೇ ಇರುವ ಮತ್ತೊಂದು ಕಲಾಕುಸುರಿಯ ಮತ್ತೊಂದು ವೈಭವದ ದೇವಾಲಯ ನಮ್ಮ
ಗಮನಕ್ಕೆ ಬರುವುದಿಲ್ಲ. ಹಳೇಬೀಡಿನಲ್ಲಿ ಹಲವು ದೇವಾಲಯಗಳ ಉಲ್ಲೇಖ ಕುರುಹು ಕಂಡರೂ ಹೊಯ್ಸಳೇಶ್ವರ ದೇವಾಲಯದ ಹಿಂಭಾಗದ ಬಸ್ತಿಹಳ್ಳಿಯಲ್ಲಿ ಕೆರೆಯ ದಂಡೆಯ ಮೇಲಿರುವ ಕೇದಾರೇಶ್ವರ ದೇವಾಲಯ ಇನ್ನು ಸುಸ್ತಿಯಲ್ಲಿದ್ದು ಕಲಾರಸಿಕರ ಕೈ ಬೀಸಿ ಕರೆಯುತ್ತದೆ. ಆದರೆ
ಪ್ರವಾಸಿಗರಿಗೆ ಮಾಹಿತಿ ಕೊರತೆಯಿಂದ ಇಲ್ಲಿಗೆ ಹೋಗುವುದು ಕಡಿಮೆ.
ಮೂಲತಹ ಈ ದೇವಾಲಯವನ್ನು ಹೊಯ್ಸಳ ದೊರೆ ಎರಡನೆಯ ಬಲ್ಲಾಳ ಹಾಗೂ ಅವನ ಕಿರಿಯ ರಾಣಿ ಕೇತಲದೇವಿ 1219 ರಲ್ಲಿ ಈ ದೇವಾಲಯವನ್ನು ಬಳ್ಳೀಗಾವಿಯ ಕೇದಾರೇಶ್ವರ ದೇವಾಲಯವದಿಂದ
ಸ್ಫೂರ್ತಿ ಪಡೆದು ನಿರ್ಮಿಸಿದರು ಎನ್ನಲಾಗಿದೆ.

ಬಂದಳಿಕೆಯ ಶಾಸನದಲ್ಲಿ ಬಳ್ಳಗಾವಿಯ ದೇವಾಲಯದಿಂದ ಪ್ರೇರಣೆ ಪಡೆದು ಈ ದೇವಾಲಯವನ್ನು ನಿರ್ಮಿಸಿದ ಉಲ್ಲೇಖವಿದೆ. ಈದೇವಾಲಯವನ್ನು ಸಹ ಹೊಯ್ಸಳರ ದೇವಾಲಯಗಳಂತೆ ನಕ್ಷತ್ರಾಕರದ ತಳ ವಿನ್ಯಾಸ ಹೊಂದಿದ್ದು ಜಗತಿಯ ಮೇಲೆ ನಿರ್ಮಾಣವಾಗಿದೆ. ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು ಪ್ರಸ್ತುತ ಯಾವ ಶಿಲ್ಪವೂ ಇಲ್ಲ. ಈಗ ಮುಖ್ಯ ಗರ್ಭಗುಡಿಯಲ್ಲಿ ಶಿವಲಿಂಗ ಇರಿಸಲಾಗಿದೆ.

ಕಲಾತ್ಮಕ ಕೆತ್ತನೆ
ಈ ದೇವಾಲಯ ಗಮನ ಸೆಳೆಯುವುದೇ ಇಲ್ಲಿನ ಹೊರ ಭಿತ್ತಿಯಲ್ಲಿನ ಕಲಾತ್ಮಕ ಕೆತ್ತನೆಗಳಿಂದ. ಆದರೆ
ದೇವಾಲಯದ ಸುಂದರತೆ ಮಾತ್ರ ಹೊರ ಭಿತ್ತಿಯಲ್ಲಿ ಹೊಯ್ಸಳರ ಯಾವ ದೇವಾಲಯಕ್ಕೂ ಕಡಿಮೆ
ಇಲ್ಲ. ಇಡೀ ದೇವಾಲಯದ ಹೊರಭಿತ್ತಿಯಲ್ಲಿ ಆನೆ, ಅಶ್ವ, ಸಿಂಹ, ಲತಾ ಪಟ್ಟಿಕೆಗಳು, ರಾಮಯಾಣ,
ಮಹಾಭಾರತದ ಕಥನಗಳು ಮಾತು ಭಾಗವತದ ಕಥನಗಳ ಕೆತ್ತನೆ ಸುಂದರವಾಗಿದೆ. ಇನ್ನು ಮೇಲಿನ
ಭಾಗದಲ್ಲಿ ಸುಮಾರು 188 ಮೂರ್ತಿಗಳ ಅದ್ಭುತ ಕೆತ್ತನೆ ಇದ್ದು ಭೈರವ, ತಾಂಡವ ಮೂರ್ತಿ,
ಅಂಧಕಾಸುರ ವಧೆ, ಕಾಳಿಂಗ ಮರ್ಧನ, ಗೋವರ್ಧನಗಿರಿಧಾರಿ, ನೃತ್ಯಗಾರರು, ವೇಣುಗೋಪಾಲ, ಸೂರ್ಯ,ಉಮಾಮಹೇಶ್ವರ, ಭುವನೇಶ್ವರಿ, ಶಿವನ ಹಲವು ನರ್ತನದ ಭಂಗಿ, ವಾಮನ, ಮತ್ಯ ಅರ್ಜುನ ಮುಂತಾದ ಕೆತ್ತನೆ ಇದ್ದು ಕಲಾ ಸೂಕ್ಷ್ಮತೆ ಸಾಟಿ ಇಲ್ಲ ಎನ್ನುವಂತೆ ಇದೆ.

ಇನ್ನು ಇಲ್ಲಿಯ ಕೆಲವು ಶಿಲ್ಪಗಳು ಹಲವು ಮ್ಯೂಸಿಯಂನಲ್ಲಿ ಇವೆ. ಶಿಲ್ಪಗಳ ಕೆತ್ತನೆಯಲ್ಲಿ ರೇವೋಜನ
ಹೆಸರು ಮುಖ್ಯವಾಗಿ ಕಾಣ ಸಿಗುತ್ತದೆ. ದೇವಾಲಯಕ್ಕೆ ಮೊದಲು ಇದ್ದ ಶಿಖರ ಈಗ ಕಾಣ ಬರುವದಿಲ್ಲ.
ಇಲ್ಲಿನ ಕೆತ್ತನೆಯನ್ನು ಕಸಿನ್ಸ್, ಫರ್ಗ್ಯೂಸನ್ ಅವರು ಇಲ್ಲಿನ ಶಿಲ್ಪದ ಕೆತ್ತನೆಗಳಿಗೆ ಸಾಟಿ ಇಲ್ಲಿ ಎಂದು
ಹೇಳಿದ್ದಾರೆ.
ತಲುಪುವುದು ಹೀಗೆ: ಹಳೇಬೀಡಿನ ದೇವಾಲಯದ ಸಂಕೀರ್ಣದ ಹಿಂಭಾಗದಲ್ಲಿನ ಬಸ್ತಿಹಳ್ಳಿಗೆ ಹೋಗುವ
ದಾರಿಯಲ್ಲಿ ಹೋದರೆ ಮೊದಲು ಬಸದಿ ಸಂಕೀರ್ಣ ಸಿಗುತ್ತದೆ. ಅದನ್ನು ನೋಡಿ ಮುಂದೆ ಹೋದರೆ
ಕೆರೆಯ ದಂಡೆಯ ಮೇಲೆ ಈ ದೇವಾಲಯ ಇದೆ.

Related Articles

ಪ್ರತಿಕ್ರಿಯೆ ನೀಡಿ

Latest Articles