ಶ್ರೀರಾಮ ನವಮಿ

ರಾಮ ಶ್ರೀ ರಾಮ
ರಾಮ ಜಯರಾಮ
ರಘುಕುಲ ರಾಮ ಸೀತಾ ರಾಮ
ಹನುಮ ಭಕ್ತಿಗೊಲಿದ ರಾಮ
ವಿಷ್ಣು ಅವತಾರ ಶ್ರೀ ರಾಮ
ಪುಷ್ಯ ನಕ್ಷತ್ರ ಕರ್ಕಾಟಕ ಲಗ್ನದಿ ಚೈತ್ರ ಮಾಸದಿ
ಜನಿಪ ದಶರಥ ಪುತ್ರ ಶ್ರೀ ರಾಮ
ರಾಮ ಶ್ರೀ ರಾಮ
ರಾಮನ ಪೂಜಿಪ ಜನಕೆ
ಸಂಕಷ್ಟಗಳು ಪರಿಹರಿಪವು
ದೈವಿಕ ಶಕ್ತಿಯು ನೆಲೆಸುವುದು
ಶ್ರೀ ರಾಮ ಜಪವ ಪಠಿಸಲು
ಶ್ರೀ ರಾಮ ನಮ್ಮ ಆತ್ಮವಾಗಲು
ಹನುಮನ ಭಕ್ತಿ ಸಾಕಾರವು
ಮನಸು,ಜೀವಶಕ್ತಿಗಳ ಸಂಚಾರ
ಶ್ರೀ ರಾಮ ಜಯರಾಮ ಎನಲು ಬರುವವು

ಶಿವಧನಸ್ಸನು ಮುರಿದು
ಸೀತೆಯ ವರಿಪ ಶ್ರೀ ರಾಮ
ಧರ್ಮಪರಿಪಾಲಕ ಶ್ರೀ ರಾಮ
ರಾಮ ನಾಮ ಜಪಿಸಲು ಕಷ್ಟ ಪರಿಹರಿಪವು.


*ವೈ.ಬಿ.ಕಡಕೋಳ, ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು
ಮಾರುತಿ ಬಡಾವಣೆ ಸಿಂದೋಗಿ ಕ್ರಾಸ್
ಮುನವಳ್ಳಿ ೫೯೧೧೧೭
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ

Related Articles

ಪ್ರತಿಕ್ರಿಯೆ ನೀಡಿ

Latest Articles