ಮುನವಳ್ಳಿಯಲ್ಲಿವೆ ಹಲವು ಹನುಮ ಮಂದಿರಗಳು

*ವೈ ಬಿ ಕಡಕೋಳ

ಶ್ರೀ ಪಂಚಲಿಂಗೇಶ್ವರ ದೇವಾಲಯದ ಪ್ರಾಣದೇವರು:

ಮುನವಳ್ಳಿ ಪಂಚಲಿಂಗೇಶ್ವರದ ಹನುಮ

ಮುನವಳ್ಳಿಯ ಪಂಚಲಿಂಗೇಶ್ವರ ದೇವಾಲಯವು ದೇವಗಿರಿಯ ಯಾದವರಿಂದ ಜೀರ್ಣೋದ್ಧಾರಗೊಂಡ ದೇವಾಲಯಗಳ ಸಮುಚ್ಚಯವನ್ನು ಹೊಂದಿದ ದೇವಾಲಯ. ಇಲ್ಲಿ ಪಂಚಲಿಂಗೇಶ್ವರ ಮುಖ್ಯವಾದರೂ ಕೂಡ ವಿವಿಧ ದೇವಾಲಯಗಳು ಕೂಡ ಗಮನ ಸೆಳೆಯುತ್ತವೆ. ಮುಖ್ಯ ದ್ವಾರದಿಂದ ದೇವಾಲಯ ಒಳ ಪ್ರವೇಶಿಸಿದರೆ ರೇಣುಕಾದೇವಿಯ ದೇವಾಲಯವಿದೆ. ಅದರ ಪಕ್ಕದಲ್ಲಿ ಹಲವು ಶಿಲ್ಪಗಳನ್ನು ಹೊಂದಿದ ಪುಟ್ಟ ದೇವಾಲಯವಿದ್ದು ಅಲ್ಲಿ ಎರಡು ಹನುಮಾನ್ ವಿಗ್ರಹಗಳನ್ನು ಕಾಣಬಹುದು. ಅವೆರಡೂ ಕೂಡ ವಿಶಿಷ್ಟವಾಗಿವೆ. ಅಲ್ಲಿ ಎರಡು ವಿಗ್ರಹಗಳನ್ನು ಗಮನಿಸಿದಾಗ ಒಂದು ಬಿಳಿ ಶಿಲೆಯಲ್ಲಿದ್ದರೆ ಇನ್ನೊಂದು ಕಪ್ಪು ಶಿಲೆಯಲ್ಲಿದೆ. ಒಂದು ಎತ್ತರದ ಮೂರ್ತಿ. ಇನ್ನೊಂದು ಪುಟ್ಟ ವಿಗ್ರಹ. ಪುಟ್ಟ ವಿಗ್ರಹದ ಮುಂದೆ ಪಾದಗಳಿವೆ. ಇವೆರಡೂ ವಿಗ್ರಹಗಳ ಬಾಲದಲ್ಲಿ ಗಂಟೆ ಇರುವುದು ವಿಶೇಷ.


ವೆಂಕಟೇಶ್ವರ ದೇವಾಲಯ ಆವರಣದಲ್ಲಿ ಹನುಮಾನ ಮಂದಿರ
ಮುನವಳ್ಳಿಯ ಮಲಪ್ರಭಾ ನದಿ ದಡದಲ್ಲಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯವುಂಟು ಉತ್ತರಾಭಿಮುಖವಾಗಿರುವ ಈ ದೇಗುಲವು ತನ್ನ ಸುತ್ತ ಹಲವು ದೇವಾಲಯಗಳ ಸಮುಚ್ಚಯವನ್ನು ಒಳಗೊಂಡಿದೆ ದೇವಾಲಯದ ಬಲ ಭಾಗದಲ್ಲಿ ವಿಠ್ಠಲ ರುಕ್ಮಿಣಿ ಮಂದಿರ, ಮತ್ತೊಂದೆಡೆ ಆಂಜನೇಯ ದೇವಾಲಯ ಹೊಂದಿದೆ. ಇಲ್ಲಿನ ಆಂಜನೇಯ ದೇವಾಲಯದ ವಿಗ್ರಹವು ಕಪ್ಪು ಶಿಲೆಯಿಂದ ಕೂಡಿದೆ. ಇಲ್ಲಿ ಸುತ್ತು ಪ್ರದಕ್ಷಿಣಾ ಪಥವನ್ನು ನಿರ್ಮಿಸಲಾಗಿದೆ. ಇದೂ ಕೂಡ ಬಾಲದಲ್ಲಿ ಗಂಟೆಯನ್ನು ಹೊಂದಿದ ಶಿಲ್ಪವಾಗಿರುವುದು ವಿಶೇಷ.


ಕೋದಂಡರಾಮ ದೇವಾಲಯ
ಈ ದೇವಾಲಯ ಅಂಜನೇಯ ದೇವಾಲಯ ಎದುರಿನಲ್ಲಿದೆ ಇದೊಂದು ಪುಟ್ಟ ದೇಗುಲ. ಇದನ್ನು ಕೋದಂಡರಾಮ ದೇವಾಲಯ ಎನ್ನುವರು. ಇದು ಸೀತಾರಾಮ ಲಕ್ಷ್ಮಣ ಆಂಜನೇಯರ ಸೊಗಸಾದ ಮೂರ್ತಿಯನ್ನು ಹೊಂದಿದೆ. ಇದರ ಕೆತ್ತನೆ ಕೂಡ ವೈಶಿಷ್ಟö್ಯಪೂರ್ಣವಾಗಿರುವುದು. ಶ್ರೀ ರಾಮಚಂದ್ರನ ಎಡಬದಿಯಲ್ಲಿ ಸೀತಾಮಾತೆಯಿದ್ದರೆ ಬಲಬದಿಯಲ್ಲಿ ಪ್ರಣಾಮ ಭಂಗಿಯಲ್ಲಿರುವ ಲಕ್ಷ್ಮಣನ ಮೂರ್ತಿಯಿದೆ. ಮತ್ತು ಎರಡೂ ಬದಿಗಳಲ್ಲಿ ಚಾಮರಗಳಿರುವುದು ವಿಶೇಷ. ಶ್ರೀ ರಾಮನ ಪಾದದ ಬಳಿ ಮಾರುತಿಯು ಭಕ್ತಭಾವದಿಂದ ಕುಳಿತಿರುವುದನ್ನು ಗಮನಿಸಬಹುದು.ಇಂತಹ ದೇವಾಲಯಗಳು ಅಪರೂಪ.ಕೋದಂಡರಾಮನ ದೇವಾಲಯ ಮುನವಳ್ಳಿಯಲ್ಲಿ ಇರುವುದು ವಿಶೇಷ.

ಕೋಟೆ ಆಂಜನೇಯ
ಮುನವಳ್ಳಿಯ ಕೋಟೆ ಕೂಡ ಹಾಳಾಗಿದ್ದರೂ ಕೂಡ ತನ್ನದೇ ಆದ ಐತಿಹ್ಯದೊಂದಿಗೆ ಭಗ್ನಾವಶೇಷಗಳಿಂದ ಚರಿತೆ ಹೇಳುವಂತಿದೆ. ಈ ಕೋಟೆ ಸಿಂಧೆ ಮಹಾರಾಜನ ಕಾಲಕ್ಕೆ ಕಟ್ಟಲ್ಪಟ್ಟಿತೆಂದು ಇಪ್ಪತ್ತೆರಡು ಎಕರೆಯಷ್ಟು ವಿಸ್ತಾರವಾಗಿರುವ ಈ ಕೋಟೆಯಲ್ಲಿ ದೇವಗಿರಿ ಯಾದವ ಕಾಲದ ಶಾಸನ ಉಡಚವ್ವ ದೇವಾಲಯ ಹಾಗೂ ಮಾರುತಿ ದೇವಾಲಯಗಳಿದ್ದು ಅರಮನೆಯ ಅವಶೇಷಗಳೆಲ್ಲ ಹಾಳಾಗಿವೆ.
ಇಷ್ಟೆಲ್ಲ ವೈಶಿಷ್ಟö್ಯತೆ ಹೊಂದಿದ ಹನುಮಾನ ಮಂದಿರಗಳು ಮುನವಳ್ಳಿಯಲ್ಲಿ ಇರುವುದು ವಿಶೇಷ. ಬಾಲದಲ್ಲಿ ಗಂಟೆಯನ್ನು ಹೊಂದಿದ್ದರೆ ಅವುಗಳು ವ್ಯಾಸರಾಜರು ಪ್ರತಿಷ್ಠಾಪಿತ ಪ್ರಾಣದೇವರುಗಳು ಎಂಬ ಪ್ರತೀತಿ. ಅದಕ್ಕೆ ಅವರು ಮುನವಳ್ಳಿಯಲ್ಲಿಯೂ ತಮ್ಮ ದೇಶಪರ್ಯಟನೆ ಕಾಲಕ್ಕೆ ಬಂದಿರಬಹುದು ಎನ್ನುವುದನ್ನು ಈ ಪ್ರಾಣದೇವರುಗಳ ವಿಗ್ರಹಗಳನ್ನು ನೋಡಿದಾಗ ಅನಿಸದಿರದು.


Related Articles

ಪ್ರತಿಕ್ರಿಯೆ ನೀಡಿ

Latest Articles