ಕನಕಧಾರಾ ಮಂತ್ರವು ಅತ್ಯಂತ ಶಕ್ತಿಯುತ ಮಂತ್ರವಾಗಿದ್ದು, ಇದರ ಪ್ರಾಮುಖ್ಯತೆಯನ್ನು ತಿಳಿದವರು ಅತಿ ವಿರಳ. ಈ ಮಂತ್ರವನ್ನು ಋಣ ಮುಕ್ತಿಗಾಗಿ ಪಠಿಸುತ್ತಾರೆ. ಅಂದರೆ ಸಾಲದ ಭಾದೆಯಿಂದ ಮುಕ್ತಗೊಳ್ಳಲು ಹೆಚ್ಚಾಗಿ ಈ ಮಂತ್ರವನ್ನು ಪಠಿಸುತ್ತಾರೆ. ಕನಕಧಾರಾ ಮಂತ್ರದ ಪ್ರಾಮುಖ್ಯತೆ ಮತ್ತು ಪ್ರಯೋಜನ ತಿಳಿದವರು ಅತಿ ವಿರಳ ಅಂತಾನೇ ಹೇಳಬಹುದು. ಸಾಲದಿಂದ ಮುಕ್ತಿ ಹೊಂದಬೇಕಾದರೆ ನಾವು ಈ ಮಂತ್ರವನ್ನು ಪಠಿಸಬೇಕು, ಕನಕಧಾರ ಮಂತ್ರ ಯಾವುದು, ಕನಕಧಾರ ಮಂತ್ರ ಪಠಿಸುವ ವಿಧಾನಗಳಾವುವು ಎಂಬುದರ ಕುರಿತ ಮಾಹಿತಿ ಇಲ್ಲಿದೆ.
ಕನಕಧಾರಾ ಲಕ್ಷ್ಮಿ ಮಂತ್ರ ಪಠಿಸುವ ವಿಧಾನ 1) ಕನಕಧಾರಾ ಮಂತ್ರವನ್ನು ಪಠಿಸುವ ಮುನ್ನ ಸ್ನಾನ ಮಾಡಿ ಶುದ್ಧವಾದ ಹಾಗೂ ಸಡಿಲವಾದ ಬಟ್ಟೆಯನ್ನು ಧರಿಸಬೇಕು.
2) ಮಂತ್ರವನ್ನು ಪಠಿಸಲು ನಿಮಗಿಷ್ಟವಾದ ಭಂಗಿಯಲ್ಲಿ ಕುಳಿತುಕೊಳ್ಳಿ.
3) ನೆಲದ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದವರು ಕುರ್ಚಿಯ ಮೇಲೆ ಅಥವಾ ಸೋಫಾದ ಮೇಲೆ ಕುಳಿತುಕೊಳ್ಳಬೇಕು.
4) ಮಂತ್ರವನ್ನು ಪಠಿಸುವ ಮುನ್ನ ಪ್ರಾಣಾಯಾಮವನ್ನು ಮಾಡಬೇಕು.
5) ಪ್ರಾಣಾಯಾಮ ಮಾಡಿದ ನಂತರ ಕಣ್ಣುಗಳನ್ನು ಮುಚ್ಚಿ ಧ್ಯಾನಾವಸ್ಥೆಯಲ್ಲಿ ಕನಕಧಾರಾ ಮಂತ್ರವನ್ನು ಪಠಿಸಿ.
ಕನಕಧಾರ ಮಂತ್ರ:“ಓಂ ಐಂ ಹ್ರೀಂ ಶ್ರೀಂ ಕ್ಲೀಂ ಕನಕಧಾರಾಯೇ ಹ್ರೀಂ ಸ್ವಾಹಾ”
6) ಕನಕಧಾರ ಮಂತ್ರವನ್ನು ನಿರಂತರವಾಗಿ 10 ನಿಮಿಷಗಳ ಕಾಲ ಪಠಿಸಬೇಕು.
7) ಕಮಲಾಕ್ಷ ಅಥವಾ ರುದ್ರಾಕ್ಷ ಜಪಮಾಲೆಯೊಂದಿಗೆ ಕನಕಧಾರಾ ಮಂತ್ರವನ್ನು ಜಪಿಸಬಹುದು.
8) ನಂಬಿಕೆಗಳ ಪ್ರಕಾರ, ಕನಕಧಾರಾ ಮಂತ್ರವು ಅತ್ಯಂತ ಶಕ್ತಿಯುತವಾದ ಮಂತ್ರವಾಗಿದೆ. ಮಂತ್ರವನ್ನು ಪಠಿಸಲು ಆರಂಭಿಸಿದ 41 ದಿನಗಳಲ್ಲೇ ಮಂತ್ರದ ಪ್ರಯೋಜನವನ್ನು ತಿಳಿದುಕೊಳ್ಳುವಿರಿ.
ಕನಕಧಾರಾ ಮಂತ್ರದ ಪ್ರಯೋಜನ
ಕನಕಧಾರ ಮಂತ್ರ ಪಠಿಸುವಾಗ ಈ ನಿಯಮವನ್ನು ಗಮನದಲ್ಲಿಟ್ಟುಕೊಳ್ಳಿ:
1) ಕನಕಧಾರ ಮಂತ್ರವು ಶಕ್ತಿಯುತ ಮಂತ್ರವಾಗಿದ್ದು, ಈ ಮಂತ್ರದ ಮೇಲೆ ಗೌರವವನ್ನಿಟ್ಟು ಪಠಿಸಬೇಕು.
2) ಕನಕಧಾರಾ ಮಂತ್ರದ ಅಭ್ಯಾಸ ಮಾಡುವಾಗ ಯಶಸ್ಸನ್ನು ಪಡೆಯುತ್ತಿದ್ದಂತೆ ನಿಮ್ಮ ಸ್ವಭಾವವನ್ನೂ ಬದಲಾಯಿಸಿಕೊಳ್ಳಿ.
3) ಕನಕಧಾರ ಮಂತ್ರವನ್ನು ಪಠಿಸಲು ಯಾವುದೇ ಗುರುಗಳ ಅಥವಾ ಯಾವುದೇ ಪಂಡಿತರ ಅಗತ್ಯವಿಲ್ಲ.
4) ಕನಕಧಾರಾ ಮಂತ್ರದ ಅಭ್ಯಾಸವನ್ನು ನೀವು ದೀಪಾವಳಿ ಹಬ್ಬದ ದಿನದಿಂದ ಅಥವಾ ಯಾವುದೇ ಮಾಸದ ಶುಕ್ಲ ಪಕ್ಷದ ಗುರುವಾರದಿಂದ ಅಥವಾ ಅಕ್ಷಯ ತದಿಗೆಯ ದಿನದಂದು ಪ್ರಾರಂಭಿಸಬಹುದು.
5) ನೀವು ಗೃಹಿಣಿಯಾಗಿದ್ದರೆ, ಉದ್ಯೋಗದಲ್ಲಿ, ಅಂಗಡಿ ಅಥವಾ ವ್ಯವಹಾರದಲ್ಲಿ ತೊಡಗಿದ್ದರೆ ಪೂರ್ವಕ್ಕೆ ಎದುರಾಗಿ ಕುಳಿತು ಕನಕಧಾರ ಮಂತ್ರವನ್ನು ಪಠಿಸಬೇಕು.
6) ನೀವು ಫ್ಯಾಷನ್ ಅಥವಾ ಸೌಂದರ್ಯಕ್ಕೆ ಸಂಬಂಧಿಸಿದ ಉದ್ಯೋಗವನ್ನು ಮಾಡುತ್ತಿದ್ದರೆ, ಮಾಧ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ, ಕಲಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಹೋಟೆಲ್ ಅಥವಾ ಇನ್ನಿತರ ಬೆಂಕಿಗೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿಕೊಂಡಿದ್ದರೆ ಪಶ್ಚಿಮ ದಿಕ್ಕಿಗೆ ಎದುರಾಗಿ ಕುಳಿತು ಕನಕಧಾರ ಮಂತ್ರವನ್ನು ಜಪಿಸಬೇಕು.
7) ನೀವು ವೈದ್ಯಕೀಯ ಕ್ಷೇತ್ರದಲ್ಲಿ ದುಡಿಯುತ್ತಿದ್ದರೆ, ವಿದ್ಯಾರ್ಥಿಗಳಾಗಿದ್ದರೆ ಅಥವಾ ಕೃಷಿಯಲ್ಲಿ ತೊಡಗಿದ್ದರೆ ಉತ್ತರಕ್ಕೆ ಮುಖ ಮಾಡಿ ಕುಳಿತು ಕನಕಧಾರಾ ಮಂತ್ರವನ್ನು ಪಠಿಸಬೇಕು.
8) ಒಂದು ವೇಳೆ ಕಮ್ಮಾರರು, ತೈಲ, ಸರ್ಕಾರಿ ವಲಯದಲ್ಲಿ, ಸಾಮಾಜಿಕ ಸೇವೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿದ್ದರೆ ನೀವು ದಕ್ಷಿಣ ದಿಕ್ಕಿನತ್ತ ಮುಖಮಾಡಿ ಕನಕಧಾರಾ ಮಂತ್ರವನ್ನು ಪಠಿಸಬೇಕು.
9) 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಅಥವಾ ಪುರುಷರು ಕನಕಧಾರಾ ಮಂತ್ರವನ್ನು ಪಠಿಸಬಹುದು.
10) ಮಹಿಳೆಯರು ಮುಟ್ಟಿನ ಸಮಯ ಮುಗಿದ ನಂತರ ಕನಕಧಾರಾ ಮಂತ್ರವನ್ನು ಪಠಿಸಬಹುದು.
11) ನೀವು ಯಾವುದೇ ಶುಭ ಕಾರ್ಯವನ್ನು ಅಥವಾ ಒಳ್ಳೆಯ ಕೆಲಸವನ್ನು ಆರಂಭಿಸುವಾಗ ಅಡೆತಡೆಗಳು ಬಾರದಿರಲೆಂದು ಕನಕಧಾರಾ ಮಂತ್ರವನ್ನು ಪಠಿಸಬೇಕು.
12) ಕನಕಧಾರಾ ಮಂತ್ರವನ್ನು ಸೂರ್ಯಾಸ್ತದ ನಂತರ ಪಠಿಸುವುದು ಅತ್ಯಂತ ಹೆಚ್ಚು ಶಕ್ತಿಯುತ ಪರಿಣಾಮವನ್ನು ನೀಡುವುದು.
ಸಂಗ್ರಹ: ಎಚ್.ಎಸ್. ರಂಗರಾಜನ್, ಪ್ರಧಾನ ಅರ್ಚಕರು, ಶ್ರೀ ಚನ್ನರಾಯ ಸ್ವಾಮಿ ದೇವಸ್ಥಾನ, ಹುಸ್ಕೂರು (ಎಲೆಕ್ಟಾçನಿಕ್ ಸಮೀಪ), ಬೆಂಗಳೂರು.