ಶಾಸ್ತ್ರಾಧ್ಯಯನಕ್ಕೆ ಶ್ರೀ ವಿಶ್ವೇಶ ತೀರ್ಥ ಮಹಾವಿದ್ಯಾಲಯ ಅಂತರ್ಜಾಲ ಶಿಕ್ಷಣ ಕೇಂದ್ರ

ದೇಹಪೋಷಣೆಗೆ ಸತ್ವಭರಿತವಾದ ಆಹಾರವಿದ್ದಂತೆ ಆತ್ಮ ಪೋಷಣೆ, ಮಾನಸಿಕ ಸ್ವಾಸ್ಥ್ಯ ಇವುಗಳಿಗಾಗಿ ಶಾಸ್ತ್ರಾಧ್ಯಯನ ಅವಶ್ಯವಾಗಿ ಮಾಡಬೇಕು.

ಮಧ್ವಾಚಾರ್ಯರ ಗ್ರಂಥಗಳ, ದಾಸವರೇಣ್ಯರ ಗ್ರಂಥಗಳ ಅಧ್ಯಯನ ಜನ್ಮಜನ್ಮದಲ್ಲಿಯೂ ನಮ್ಮನ್ನು ಸನ್ಮಾರ್ಗದಲ್ಲಿಮುನ್ನಡೆಸುವುದರಲ್ಲಿ ಸಂಶಯವಿಲ್ಲ. ಈ ಆಧುನಿಕ ಯುಗದಲ್ಲಿ ಎಲ್ಲರೂ ಗುರುಕುಲವಾಸದಿಂದ ಅಧ್ಯಯನ ಮಾಡುವುದು ವಿವಿಧ ಸಮಸ್ಯೆಗಳಿಂದ ಸಾಧ್ಯವಾಗುತ್ತಿಲ್ಲ. ಆದರೆ ಶಾಸ್ತ್ರಾಧ್ಯಯನ ಮಾಡಬೇಕೆಂಬ ತುಡಿತ ಬಹಳ ಮಂದಿಗೆ ಇರುತ್ತದೆ. ಅವರಿಗಾಗಿ ಈ ಅಂತರ್ಜಾಲ ಶಿಕ್ಷಣವನ್ನು ವಾರಾಂತ್ಯದ ದಿನಗಳಲ್ಲಿ ಸಾಯಂಕಾಲದಲ್ಲಿ ಆರಂಭಿಸಲಾಗುತ್ತಿದೆ.

ಗುರುಕುಲಗಳಲ್ಲಿ ಆಗುವಂತೆ ಸಾಂಪ್ರದಾಯಿಕ ಶಿಕ್ಷಣವನ್ನು ನೀಡಲಾಗುವುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸಿ ಪ್ರಮಾಣ ಪತ್ರವನ್ನು ನೀಡಲಾಗುವುದು. ಅಪೇಕ್ಷೆಯಿರುವವರು ತಮ್ಮ ಹೆಸರನ್ನು ನೋಂದಾಯಿಸಿ ಇದರ ಲಾಭವನ್ನು ಪಡೆಯಬಹುದು. 


 ಮಕ್ಕಳಿಗೆ ಶಿಶು ಶಿಕ್ಷಣ – ಭಗವದ್ಗೀತಾ ಶ್ರೀ ಮುರಳಿಧರಾಚಾರ್ಯ ಕಟ್ಟಿ 9880083303
 ಉಪನೀತರಿಗೆ – ಸಂಧ್ಯಾವಂದನೆ, ದೇವಪೂಜೆ, ಸೂಕ್ತಗಳು ಇತ್ಯಾದಿ ಶ್ರೀ ಐತರೇಯಾಚಾರ್ಯ 9449576060 

ಮಧ್ವವಿಜಯ, ರುಗ್ಮಿಣೀಶ ವಿಜಯ ಇತ್ಯಾದಿ ಕಾವ್ಯಪಾಠ, ಸರ್ವಮೂಲ ಗ್ರಂಥಗಳು  ಶ್ರೀ ಬಿ.ಸುಧೀಂದ್ರಾಚಾರ್ಯ 7019575798    ದಾಸಸಾಹಿತ್ಯ, ಸ್ತ್ರೀಧರ್ಮ, ಹರಿಕಥಾಮೃತಸಾರ ಇತ್ಯಾದಿ  ಶ್ರೀ ವಿಷ್ಣುಕಶ್ಯಪಾಚಾರ್ಯ 9916388033ಭಗವದ್ಗೀತಾ   ಶ್ರೀ ಮುರಳಿಧರಾಚಾರ್ಯ ಕಟ್ಟಿ 9880083303

ವಿಶೇಷ ಸೂಚನೆ
* ನಿಗದಿತ ಸಮಯದಲ್ಲಿ ಪಾಠಗಳು ನಡೆಯಲಿವೆ.

* ವಿಶೇಷ ಸಂದರ್ಭಗಳಲ್ಲಿ ಖ್ಯಾತ ವಿದ್ವಾಂಸರಿಂದ ವಿಶಿಷ್ಟೋಪನ್ಯಾಸಗಳು ನಡೆಯುವುದು.

* 15ಕ್ಕಿಂತಲೂ ಹೆಚ್ಚು ಜನರು ಅಪೇಕ್ಷಿಸಿದರೆ ಪ್ರತ್ಯೇಕ ಸಮಯವನ್ನು ನಿಗದಿ ಮಾಡಬಹುದು.

* ಪಾಠಗಳು 4-6-2021 ರಿಂದ ಪ್ರಾರಂಭವಾಗುತ್ತವೆ.

ಹೆಸರನ್ನು ನೊಂದಾಯಿಸಲು ಈ ಲಿಂಕ್ ನ್ನು ಉಪಯೊಗಿಸಿ – 
https://forms.gle/6tc4Tuyor34TEMmCA


ಕೊನೆಯ ದಿನಾಂಕ: 31-5-2021

ಶ್ರೀ ವಿಶ್ವೇಶ ತೀರ್ಥ ಸೇವಾಸಂಘ ಕಾರ್ಯದರ್ಶಿ ಶ್ರೀ ಭೀಮಸೇನಾಚಾರ್ಯ ಗುತ್ತಲ್- 7795529942

Related Articles

ಪ್ರತಿಕ್ರಿಯೆ ನೀಡಿ

Latest Articles