ಅಚ್ಯುತನ ಅವತಾರ ಈ ಆಂಜನೇಯ

*ವೈ.ಬಿ.ಕಡಕೋಳ

 ಬಾಗಲಕೋಟೆಯಲ್ಲಿ ಹನುಮನ ಅನೇಕ ದೇಗುಲಗಳುಂಟು. ಅಧಿಕ ಮಾಸದಲ್ಲಿ ಹೆಚ್ಚು ಜನ ಬಾಗಲಕೋಟೆ ಜಿಲ್ಲೆಯಲ್ಲಿರುವ ಹನುಮನ ದೇಗುಲಗಳ ದರ್ಶನ ಪಡೆಯುವುದುಂಟು. ಇ0ದಿಗೂ ಕೂಡ ಇಲ್ಲಿನ ಹನು(ಅಚಿಜನೇಯ) ದೇಗುಲಗಳು ಇತಿಹಾಸದಲ್ಲಿ ಪ್ರಸಿದ್ದಿ ಪಡೆದಿದ್ದು, ಅವುಗಳಲ್ಲೊಂದಾದ ಬಾಗಲಕೋಟೆ ಜಿಲ್ಲೆಯ ಅಚನೂರು ಆಂಜನೇಯ ದೇವಾಲಯದಿಂದ ಪ್ರಸಿದ್ದಿ ಹೊಂದಿದ ಪುಟ್ಟಗ್ರಾಮ.

 ಕಡಿದಾದ ಬೆಟ್ಟದಲ್ಲಿ ಅಂಜನೇಯ, ವಾರೀ ಮಾರುತಿ ದೇವರು, ವೆಂಕಟೇಶ್ವರ, ನರಸಿ0ಹ ದೇವಾಲಯಗಳು, ವೀರಶೈವ ಮಠ. ಕಲ್ಯಾಣ ಮಂಟಪಗಳನ್ನು ಹೊಂದಿದ ದೇವಾಲಯ ಸಮುಚ್ಚಯಗಳನ್ನುಅಚನೂರಿನಲ್ಲಿ ಕಾಣಬಹುದು. 
 ರಾಮಾಯಣದ ಹಲವು ಘಟನೆಗಳಿಗೆ ಸಾಕ್ಷಿಯಾದ ಗ್ರಾಮ ಇದು. ಇಲ್ಲಿರುವ ಅಂಜನೇಯನು ಅಚ್ಯುತನ ಅವತಾರವೆಂದು ಹೇಳುವರು. ಹೀಗಾಗಿ ಅಚ್ಯುತನ ಊರು ಅಚ್ಯಿತನೂರು, ಅಚನೂರು ಎಂದು ಹೆಸರಾಗಿದೆ. ಹನುಮ, ಭೀಮ,ಮಾಧ್ವ ಹೀಗೆ ಮೂರು ಶಕ್ತಿಯುಳ್ಳ ಅಂಜನೇಯನ ನಾಮಸ್ಮರಣೆಯಿಂದ ಇಲ್ಲಿನ ಹಾಗೂ ಸುತ್ತಮುತ್ತಲಿನ ಭಕ್ತ ಜನರು ಪೂಜಿಸುವರು.
 ಕಡ್ಲಿಮಟ್ಟಿ, ಬೆನ್ನೂರು, ಜಡಾಮಗುಂಟೆ ಗ್ರಾಮಗಳಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಬಸ್ ಈ ಗ್ರಾಮದ ಮೂಲಕ ಚಲಿಸುತ್ತವೆ. ಒಂದು ಕಾಲಕ್ಕೆ ಕಡ್ಲಿಮಟ್ಟಿ ರೈಲು ನಿಲುಗಡೆಯಂತೂ ಈ ಗ್ರಾಮಕ್ಕೆ ಸಾಕಷ್ಟು ಭಕ್ತಜನರು ರೈಲು ಮೂಲಕ ಬಂದು ಅಲ್ಲಿಂದ ಕಾಲ್ನಡಿಗೆಯಿಂದ ಬರುತ್ತಿದ್ದರೆನ್ನುತ್ತಾರೆ. ಈಗ ಬ್ರಾಡಗೇಜ್ ಆಗಿರುವ ಕಾರಣ ಆ ನಿಲುಗಡೆ ರದ್ದಾಗಿದ್ದು ಬಸ್ ಪ್ರಯಾಣವೇ ಗತಿ.
 ಇಲ್ಲಿ ಕಲ್ಯಾಣ ಮಂಟಪವಿದ್ದು ಹೊರಗಿನಿಂದ ಬರುವ ಬಡ ಭಕ್ತಾದಿಗಳಿಗೆ ಕಡಿಮೆ ದರದಲ್ಲಿ ಅನುಕೂಲ ಮಾಡಿ ಕೊಡುವ ಮೂಲಕ ದೇವಾಲಯದವರು ತಮ್ಮ ಉದಾರತೆ ಮೆರೆದಿದ್ದು, ಯುಗಾದಿ ಪಾಡ್ಯದಿಂದ ಹನುಮ ಜಯಂತಿ(ದವನದ ಹುಣ್ಣಿಮೆ) ವರೆಗೂ ಜರುಗುವ ಜಾತ್ರೆ ವೈಶಿಷ್ಟö್ಯವಾಗಿದೆ. ಇಲ್ಲಿರುವ ಹೊಂಡದಲ್ಲಿ ಅಂದು ಮೂರು ರೀತಿಯ ಓಕುಳಿಯಾಟ ಸ್ತಿçÃ-ಪುರುಷರು ಸೇರಿ ಆಡುವ ಮೂಲಕ ಅಂದರೆ ಬಣ್ಣದ ಓಕುಳಿ,ನೀರಿನ ಓಕುಳಿ,ಕರ್ಪೂರ ಹಾಗೂ ಸುಗಂಧ ದ್ರವ್ಯದಿಂದ ಕೂಡಿದ ಓಕುಳಿ ಆಡುವ ಕ್ರಿಯೆ ನಿಜಕ್ಕೂ ಅದ್ಬುತ. ಅದೇ ದಿನ ಸಂಜೆ ರಥೋತ್ಸವ ಜರುಗುವುದು. 
 ಪ್ರತಿ ಅಮಾವಾಸ್ಯೆ ಹಾಗೂ ಜಾತ್ರೆ ಸಂದರ್ಭದಲ್ಲಿಯೂ ಕೂಡ ಇಲ್ಲಿ ಅನ್ನಸಂತರ್ಪಣೆ ಭಕ್ತ ಜನರಿಂದ ಜರುಗುತ್ತಿರುವುದು ವಿಶೇಷ. ಈ ಗ್ರಾಮದಲ್ಲಿ ಗ್ರಾಮ ದೇವತೆ, ವಿಠ್ಠಲ ಮಂದಿರಗಳು ಇದ್ದು ಅಚ್ಯುತನ ಊರು ಅಚನೂರು ಎಂದು ಅಂಜನೇಯನ ಮೂಲಕ ಪ್ರಸಿದ್ದಿ ಪಡೆದಿದೆ. ಹನುಮನ ಮೂರ್ತಿ ಕೂಡ ವೈಶಿಷ್ಟö್ಯ ಪಡೆದಿದ್ದು ವಾಯುತತ್ವಇಲ್ಲಿ ಗಮನ ಸೆಳೆದಿದೆ.
ಬಾಗಲಕೋಟೆಯಿಂದ 21ಕಿ.ಮೀ. ಅಂತರದಲ್ಲಿದ್ದು,ಬೆಂಗಳೂರಿನಿ0ದ 464ಕಿ.ಮೀ ಅಂತರದಲ್ಲಿದೆ. ಹುಬ್ಬಳ್ಳಿಯಿ0ದ 148ಕಿ.ಮೀ. ಹತ್ತಿರದ ರೈಲು ನಿಲ್ದಾಣಗಳೆಂದರೆ ಬಾಗಲಕೋಟೆ, ಆಲಮಟ್ಟಿ.

Related Articles

ಪ್ರತಿಕ್ರಿಯೆ ನೀಡಿ

Latest Articles