ಸುತ್ತಲಿರಲು ಹಸಿರು
ನಿರಾಳ ನಮ್ಮ ಉಸಿರು
ಮರೆಯಾದರೆ ಹಸಿರು
ಕೊನೆಯಾಗುವದು ಉಸಿರು
ಖಗಗಳಕಲರವ ನಾದವು
ಆಲಿಸುತ ತೇಲುವುದು ಮನವು
ಪುಷ್ಪಗಳು ಸುವಾಸನೆ ಬೀರಲು
ಹಸಿರ ಸಿರಿಗೆ ತನುಮನಸೋಲು
ಹಸಿರಿಲ್ಲದೆ ಜಗವಿಲ್ಲ
ಆದರೂ ಉಳಿಸಬೇಕೆಂಬ ಪ್ರಜ್ಞೆ ಇಲ್ಲ
ಬೆಳೆಸುವ ಯೋಚನೆ ಹಲವರಲ್ಲಿಲ್ಲ
ನಮಗ್ಯಾಕೆ ಎಂದು ಹೋಗುವರೇ ಎಲ್ಲ
ನೆಟ್ಟರೆ ನೀ ಒಂದು ಗಿಡ
ನೀಡುವದು ನೂರೆಂಟು ಫಲ
ಸ್ವಾರ್ಥಕ್ಕಾಗಿ ಕಡಿವೆ ಗಿಡ
ಯಾಕೆ ದೊಡ್ಡ ರಸ್ತೆಯ ಛಲ
ಬೇಡ ಮನೆ ಸುತ್ತ ಗಿಡಮರ
ಬೇಕು ನಮಗೆಲ್ಲ ಶುದ್ದ ಪರಿಸರ
ಬೇಡ ಇಂತಹ ಕಲ್ಮಶ ಬುದ್ಧಿ
ಬೇಕು ಗಿಡಮರ ಬೆಳೆಸುವ ಸುಬುದ್ಧಿ
ದೊಡ್ಡ ಮನೆ ಕಟ್ಟಿ ಚಿಕ್ಕದಾಯಿತು ಮನಸ್ಸು
ಬಿಗುಮಾನದಲಿ ಓಡುತಿದೆ ಆಯಸ್ಸು
ಪರಿಸರಕ್ಕಾಗಿ ಸ್ವಲ್ಪವಾದರೂ ಶ್ರಮಿಸು
ಅದೇ ಜೀವನದ ಬಹು ದೊಡ್ಡ ತಪಸ್ಸು
ಹಸಿರ ಉಳಿಸಿ ಬೆಳೆಸುತ ಸಾಗಲಿ ಜೀವನ
ಮುಂದಿನ ಪೀಳಿಗೆಗೆ ಅದವೇ ಮಾರ್ಗದರ್ಶನ
ಇಲ್ಲವಾದರೆ ಬಹು ಕಷ್ಟ ನಮ್ಮ ಜೀವನ
ಭವಿಷ್ಯದಲ್ಲಿ ಬರೀ ನರಕದ ದರ್ಶನ
ಕಾಣುತಿದೆ ನರಕದ ಮುನ್ನೋಟವೀಗ
ಎಚ್ಚತ್ತು ಕೊಳ್ಳಬೇಕಿದೆ ನಾವೀಗ
ಈಗಲೂ ಮೈಮರೆತರೆ ನಾವು
ಜೀವನವೆಲ್ಲ ಬರೀ ನೋವು ನೋವು!
ಜ್ಯೋತಿ.ಸಿ ಕೋಟಗಿ,
ಸಹ ಶಿಕ್ಷಕಿ
ಸ.ಮಾ ಪ್ರಾ, ಶಾಲೆ ತಲ್ಲೂರ, ಬೆಳಗಾವಿ ಜಿಲ್ಲೆ.