ಬೆಂಗಳೂರು: ಆರ್ಯವೈಶ್ಯ ಸಮಾಜ ಬಂಧುಗಳ ಆಧ್ಯಾತ್ಮಿಕ ಶಕ್ತಿ ಕೇಂದ್ರ ಶ್ರೀ ವಾಸವಿ ಪೀಠದ ದ್ವಿತೀಯ ಗುರುಗಳಾದ ಶ್ರೀ ಸಚ್ಚಿದಾನಂದ ಸರಸ್ವತಿ ಅವರ ಪೀಠಾರೋಹಣ ಕಾರ್ಯಕ್ರಮ ಜೂನ್ 20 ರಂದು ನಗರದಲ್ಲಿ ನಡೆಯಲಿದೆ.
ಕೋವಿಡ್ ಹಿನ್ನೆಲೆಯಲ್ಲಿ ಮಲ್ಲೇಶ್ವರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಸರಳವಾಗಿ ಕಾರ್ಯಕ್ರಮ ನಡೆಯಲಿದ್ದು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದು ಶ್ರೀ ವಾಸವಿ ಪೀಠಾರೋಹಣ ಸಮಿತಿ ಅಧ್ಯಕ್ಷ ಮಾನಂದಿ ಸುರೇಶ್ ತಿಳಿಸಿದ್ದಾರೆ.
ಪೀಠಾರೋಹಣದ ಸಂದರ್ಭದಲ್ಲಿ ರಾಜ್ಯಾದ್ಯಂತ ವಾಸವಿ ದೇಗುಲಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ವೃದ್ಧಾಶ್ರಮ, ಅನಾಥಾಶ್ರಮ ಆಸ್ಪತ್ರೆಗಳಲ್ಲಿ ಅನ್ನದಾನ ಮಾಡಲಾಗುವುದು. 17 ರಿಂದಲೇ ಪೀಠಾರೋಹಣದ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಫೇಸ್‌ಬುಕ್ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಎಂದಯ ಹೇಳಿದ್ದಾರೆ.
ನೂತನ ಶ್ರೀಗಳ ಪರಿಚಯ
1989 ರಲ್ಲಿ ಜನಿಸಿದ ಶ್ರೀಗಳು ಕ್ರೆöÊಸ್ಟ್ ವಿವಿಯಲ್ಲಿ ಚಿನ್ನದ ಪದಕದೊಂದಿಗೆ ಮ್ಯಾನೇಜ್‌ಮೆಂಟ್ ಪದವಿ ಪಡೆದುಕೊಂಡಿದ್ದಾರೆ. ಸ್ವಾಮಿ ದಯಾನಂದ ಸರಸ್ವತಿ ಗುರುಕುಲದಲ್ಲಿ ವೇದಾಂತ ಶಿಕ್ಷಣ ಪಡೆದಿದ್ದಾರೆ. ಆರ್ಷವಿದ್ಯಾ ಪೀಠದ ಹಿರಿಯ ಸಂತರಾದ ಶ್ರೀ ಸ್ವಾಮಿ ತತ್ತ÷್ವವಿದಾನಂದ ಸರಸ್ವತಿ ಅವರ ಬಳಿ ಭಗವದ್ಗೀತೆ, ಉಪನಿಷತ್ತು ಮತ್ತು ಬ್ರಹ್ಮ ಸೂತ್ರ ಭಾಷ್ಯಗಳ ಕಲಿತು 2018 ರ ಗುರುಪೂರ್ಣಿಮೆಯಲ್ಲಿ ಪರಮಹಂಸ ಸನ್ಯಾಸ ದೀಕ್ಷೆ ಪಡೆದುಕೊಂಡಿದ್ದಾರೆ.