ಕಣ್ಣಿನ ಕಿಟಕಿ ತೆರೆದರೆ ಎಲ್ಲೆಲ್ಲೂ ಅವಕಾಶಗಳಿವೆ!

*ಜಯಶ್ರೀ.ಜೆ. ಅಬ್ಬಿಗೇರಿ

ನಾನು ಇಂಗ್ಲೀಷ್ ಮೀಡಿಯಂನಲ್ಲಿ ಕಲಿತಿಲ್ಲ. ಹಳ್ಳಿಯಲ್ಲಿ ಕಲಿತಿದಿನಿ. ನನ್ನಪ್ಪ ಅವ್ವ ಶಿಕ್ಷಣದ ಬಗ್ಗೆ ಅಷ್ಟು ಬಲ್ಲವರಲ್ಲ. ಬಡತನದಲ್ಲಿ ಬೆಂದ ನನಗೆ ಈಗಿನ ಕಾಲದಲ್ಲಿ ಎಂಥ ಅವಕಾಶಗಳು ಸಿಕ್ಕಾವು? ಅಲ್ಲದೇ ಎಲ್ಲದಕ್ಕೂ ಬೇಕು ಅಂತ ಕೇಳುವ ಕಂಪ್ಯೂಟರ್ ಜ್ಞಾನವೂ ಅಷ್ಟಕ್ಕಷ್ಟೆ ಎಂದು ಕೈ ಕಟ್ಟಿಕೊಂಡು ಅದೃಷ್ಟ ದೇವತೆಯನ್ನು, ಹಾಳಾದ ಹಣೆಬರಹವನ್ನು ಬೈದುಕೊಳ್ಳುತ್ತ ಕುಳಿತುಕೊಳ್ಳುವ ಚಾಳಿ ಬದುಕನ್ನೆಂದೂ ಕಟ್ಟಿಕೊಡಲಾರದು.

ಅಷ್ಟೇ ಅಲ್ಲ ಎಷ್ಟೋ ತರಬೇತಿ ಪಡೆದುಕೊಂಡವರೂ ಕೆಲಸ ಸಿಗದೇ ಹಾಗೆ ಅಲೆಯುತ್ತಿದ್ದಾರೆ. ಅಂಥದ್ದರಲ್ಲಿ ನಿಮ್ಮಂಥವರ ಗತಿ ಮುಗಿದೇ ಹೋಯಿತೆಂದು ಅವಮಾನಿಸುವವರ ಮಾತಿಗೆ ಕಿವಿ ಕೊಟ್ಟು ಹಿಂದುಳಿಯುವವರೇ ಹೆಚ್ಚು. ಇಡೀ ಬದುಕು ಅದೃಷ್ಟ ದೇವತೆಯ ಮೇಲೆ ಅವಲಂಬನ ಎನ್ನುವ ಅಭಿಪ್ರಾಯ ಬಹುತೇಕ ಜನರದು. ಹೀಗಾಗಿ ಅವರು ಪ್ರಯತ್ನವೆಂಬ ಪರಮೇಶ್ವರನ ಹತ್ತಿರ ಸುಳಿಯುವುದೇ ಇಲ್ಲ. ಎಲ್ಲವೂ ತಾನೇ ಬರಲಿ ಅಂತ ಕೈ ಕಟ್ಟಿ ಕುಳಿತುಕೊಳ್ಳುತ್ತಾರೆ. ಅಂಥವರಲ್ಲಿ ನಾವೂ ಒಬ್ಬರು ಆಗಿರಬಹುದು.

‘ಅದೃಷ್ಟದ ಬಾಗಿಲು ತೆರೆಯುವುದು ಒಂದೇ ಬಾರಿ.’ ‘ಅದೃಷ್ಟದ ದೇವತೆ ಬಾಗಿಲು ಬಡಿಯುವುದು ಒಂದೇ ಬಾರಿ. ‘ಕರೆದು ಹೆಣ್ಣು ಕೊಟ್ಟರೆ ಮಲರೋಗ ಬಂದ0ತೆ.’ ‘ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ.’ ಎನ್ನುವ ಗಾದೆಮಾತುಗಳು ಜನರಾಡುವ ಮಾತುಗಳಲ್ಲಿ ಚಾಲ್ತಿಯಲ್ಲಿವೆ. ಇವುಗಳನ್ನೇ ನಂಬಿ ‘ದಡ್ಡನಾದವನು ಅವಕಾಶಗಳಿಗೆ ಸಮಸ್ಯೆಗಳೆಂದು ಹೆಸರಿಸಿ ಅಳುತ್ತಾನೆ. ಬುದ್ಧಿವಂತನು ಅವಕಾಶಗಳನ್ನು ತನ್ನ ಭಾಗ್ಯವನ್ನಾಗಿ ಬದಲಾಯಿಸಿಕೊಳ್ಳುತ್ತಾನೆ’.

ದಡ್ಡರು ಸಿಕ್ಕ ಅವಕಾಶಗಳನ್ನು ಚೆನ್ನಾಗಿ ಉಪಯೋಗಿಸಿಕೊಳ್ಳುವುದಕ್ಕಿಂತ ಸಿಗದಿರುವ ಅವಕಾಶಗಳನ್ನು ಹೆಚ್ಚು ನೆನೆದು ಕೊರಗುತ್ತಾರೆ. ಸೊನ್ನೆ ಒಂಟಿಯಾಗಿದ್ದರೆ ಬೆಲೆ ಇಲ್ಲ. ಅಥವಾ ಬರೀ ಸೊನ್ನೆಗಳೇ ಇದ್ದರೂ ಬೆಲೆ ಇಲ್ಲ. ಅದೇ ಸೊನ್ನೆಗಳು ಅಂಕಿಯ ಜೊತೆ ಸೇರಿದರೆ ಅಂಕಿಯ ಬೆಲೆಯನ್ನೂ ಹೆಚ್ಚಿಸುವಷ್ಟು ಬೆಲೆ ಪಡೆದುಕೊಳ್ಳುವುದು. ಪ್ರಯತ್ನ ಅವಕಾಶಗಳ ಮಹಾಪೂರವನ್ನೇ ಹರಿಸಬಲ್ಲದು.


‘ಸರಿಯಾದ ಜಾಗದಲ್ಲಿ ಸರಿಯಾದ ಸಮಯದಲ್ಲಿರುವುದೇ ಅದೃಷ್ಟ.’ ಅದೃಷ್ಟವಂತರ ಬಗೆಗೆ ನಾವೆಲ್ಲ ಮಾತನಾಡುತ್ತೇವೆ. ಸರಿಯಾದ ಸಮಯಕ್ಕೆ ಸರಿಯಾದ ಕೆಲಸ, ಕೆಲಸದಲ್ಲಿ ಬಡ್ತಿ, ಸರಿಯಾದ ದಿಕ್ಕಿನಲ್ಲಿ ನಿರ್ಧಿಷ್ಟ ಗುರಿಯತ್ತ ಹೆಜ್ಜೆ ಹಾಕಿದವರಿಗೆ ಅವಕಾಶಗಳ ಸುರಿಮಳೆಯಾಗುವುದು ಖಂಡಿತ. ಗೆಲುವಿನ ತುತ್ತ ತುದಿಯನ್ನು ತಲುಪಿ ಅಲ್ಲಿಯ ಮತ್ತಷ್ಟು ವಿಜಯದ ಮಾಲೆಗಳನ್ನು ಕೊರಳಿಗೆ ಧರಿಸುವವರು ಕೆಲವರು ಮಾತ್ರ. ಹಾಗಂತ ಅವರೇನು ಅದೃಷ್ಟವಂತರಲ್ಲ ಆಕಸ್ಮಿಕವೂ ಅಲ್ಲ. ನೀವೂ ಅವರಂತೆ ವಿಜಯಿಗಳಾಗಬೇಕೆಂದರೆ. ಅವಕಾಶಗಳ ಭರಪೂರ ಪ್ರವಾಹ ಅನುಭವಿಸಬೇಕೆಂದರೆ ಅದೃಷ್ಟವಂತರಾಗಬೇಕೆ0ದಿಲ್ಲ. ನಿಮ್ಮ ನಡುವಳಿಕೆಯಲ್ಲಿ ಹವ್ಯಾಸಗಳಲ್ಲಿ ಕೆಲವು ಬದಲಾವಣೆಗಳು ಆದರೆ ಸಾಕು ಹಾಗಾದರೆ ಅವು ಯಾವವು ನೋಡೋಣ ಬನ್ನಿ.


ಗಮನವಿಡಿ
ಸುತ್ತ ಮುತ್ತ ನಡೆಯುತ್ತಿರುವುದನ್ನೆಲ್ಲ ಉತ್ಸುಕತೆಯ ಕಣ್ಣಿಂದ ಸದಾ ನೋಡುತ್ತಿರಬೇಕು. ಉತ್ಸಾಹದಿಂದ ಅವಲೋಕಿಸುವವರಿಗೆ ನಿರುತ್ಸಾಹಿಗಳಿಗಿಂತ ಸಂಗತಿಗಳು ಚೆನ್ನಾಗಿ ಗಮನಕ್ಕೆ ಬೀಳುತ್ತವೆ. ಈಗಾಗಲೇ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವವರ ಸಿದ್ಧತೆ, ಕಾರ್ಯ ವೈಖರಿ, ಜವಾಬ್ದಾರಿ ನೀಗಿಸುವ ರೀತಿ, ಕಠಿಣ ಸವಾಲುಗಳನ್ನು ಎದುರಿಸುವ ಬಗೆಯನ್ನು ಗಮನಿಸಿ. ಗಮನ ನೀಡದೇ ಯಾವುದೇ ಕೌಶಲ್ಯವನ್ನು ಕಲಿಯಲಾರಿರಿ. ಅವಕಾಶವನ್ನು ನಿಮ್ಮತ್ತ ಸೆಳೆಯುವ ಮೊದಲ ಹೆಜ್ಜೆಯೆಂದರೆ ಅದರ ಕುರಿತು ನೀವು ತಿಳಿಯುವುದು. ಅವಕಾಶದ ಬಗ್ಗೆ ತಿಳುವಳಿಕೆ ಹೊಂದಿದರೆ ನೀವು ಅದನ್ನು ಹೆಚ್ಚು ಸಹಕಾರಿಯಾಗಿಸುವ ಹಾದಿಯಲ್ಲಿ ಇರುತ್ತೀರಿ. ಉತ್ತಮ ಅವಕಾಶಗಳು ಬದುಕನ್ನು ಮಿನುಗಿಸುವ, ಮಿನುಗು ನಕ್ಷತ್ರವನ್ನಾಗಿಸುವ ಶಕ್ತಿ ಹೊಂದಿವೆ. ನಿರಂತರ ಕಾರ್ಯದ ಫಲ ಮುಂದೊAದು ದಿನ ಕೋಹಿನೂರು ವಜ್ರದ ಫಲ ಸಿಗುವಂತೆ ಮಾಡುತ್ತದೆ.


ಕೆಲಸಕ್ಕೆ ಮಹತ್ವ ನೀಡಿ
ಅವಕಾಶಗಳು ಎಷ್ಟೇ ಅನಾಸಕ್ತಿಯನ್ನು ಹೊಂದಿದ್ದರೂ ಅತ್ಯಧಿಕ ಮಟ್ಟದ ಉದ್ದೇಶ ಹೊಂದಿದ್ದರೆ ಉದ್ದೇಶವೇ ಚಾಲನಾಶಕ್ತಿಯಾಗಿ ಕಾರ್ಯ ನಿರ್ವಹಿಸುವುದು. ನಿಮ್ಮಲ್ಲಿಯ ಅತ್ಯುತ್ತಮ ಪ್ರತಿಭಾ ಶಕ್ತಿಯನ್ನು ಹೊರಗೆಳೆಯುವುದು. ನೀವೇನು ಯೋಚಿಸುತ್ತೀರಿ ಎಂಬುದು ನಿಮಗೆ ಹೇಗೆ ಅನಿಸುತ್ತದೆ ಏನು ಮಾಡುತ್ತೀರೆಂಬುದನ್ನು ನಿರ್ಧರಿಸುತ್ತದೆ. ನಿಮ್ಮ ಕೆಲಸಕ್ಕೆ ಮಹತ್ವ ನೀಡುವ, ಕೆಲಸವನ್ನು ಪ್ರೀತಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಈ ಅಭ್ಯಾಸ ನಿನ್ನೊಂದಿಗಿರುವ ಜನರು ನಿನಗೆ ಇನ್ನೂ ಹೆಚ್ಚಿನ ಅವಕಾಶಗಳನ್ನು ಪರಿಚಯಿಸಲು ದಾರಿ ಮಾಡಿಕೊಡುತ್ತದೆ. ಕೇವಲ ಬಯಕೆಗಳು ಏನನ್ನೂ ಬದಲಿಸಲಾರವು. ಬಯಕೆಯೊಂದಿಗಿನ ಬದ್ಧತೆ ಎಲ್ಲವನ್ನೂ ಬದಲಿಸಬಲ್ಲದು. ಇದನ್ನೇ ಷೆಟ್ರಸ್ ಜಾಕೋಬಸ್ ಔಬರ್ಟ್ ನುಡಿಯಲ್ಲಿ ಹೇಳುವುದಾದರೆ, ‘ಅವಕಾಶವು ವಿವೇಕಯುತ ಮನುಷ್ಯನಿಗೆ ಯಾವಾಗಲೂ ಅನುಕೂಲಕರವಾಗಿರುತ್ತದೆ’.


ಎಚ್ಚರವಿರಲಿ
ಇತರರೆಡೆ ನೋಡುವ, ಮಾತನಾಡುವ, ಉತ್ತರಿಸುವ ರೀತಿ, ನಗುವ ಶೈಲಿ, ಕುಳಿತುಕೊಳ್ಳುವ ನಿಲ್ಲುವ ಭಂಗಿ ಎಲ್ಲ ಅಂದರೆ ಎಲ್ಲವೂ ನಿಮ್ಮ ವ್ಯಕ್ತಿತ್ವದ ನೆರಳಿನಂತಿರುತ್ತದೆ. ನೀವು ಮಾಡುವ ಎಲ್ಲವೂ ಬೇರೆಯವರ ಮೇಲೆ ಪ್ರಭಾವ ಬೀರುತ್ತಿರುತ್ತದೆ. ನಿರ್ಧರಿಸುವಾಗ ನಿಮ್ಮ ನಿರ್ಧಾರ ಇತರರ ಮೇಲೆ ಎಂಥ ಪರಿಣಾಮ ಬೀರಬಲ್ಲದು ಎಂಬುದರ ಮೇಲೆ ಲಕ್ಷö್ಯವಿರಲಿ. ನಿಮ್ಮ ಸಾಮರ್ಥ್ಯದ ಪ್ರಭಾವ ಜನರ ಮೇಲೆ ಬೀಳುತ್ತಿರುತ್ತದೆ. ಥಾಮಸ್ ಕಾರ್ಲೈಲ್ ಹೀಗೆ ನುಡಿದರು “ವಿಚಾರ ಎಷ್ಟೇ ಶ್ರೇಷ್ಠವಾಗಿರಲಿ ಮನುಷ್ಯನ ಕೊನೆಯು ಒಂದು ಕ್ರಿಯೆಯೇ ಹೊರತು ಒಂದು ವಿಚಾರವಲ್ಲ.’ ನೀವೆಷ್ಟು ಕೆಲಸದ ವ್ಯಕ್ತಿ ಎಂಬುದು ಯಾವಾಗಲೂ ಕೆಲಸಕ್ಕೆ ಬರುತ್ತದೆ. ನೀವು ಕೆಲಸವನ್ನು ಹೇಗೆ ಸರಳೀಕರಿಸುತ್ತೀರಿ ಎನ್ನುವುದನ್ನು ಹೊಸ ಅವಕಾಶವನ್ನು ನೀಡುವಾಗ ಗಮನಿಸಲಾಗುವುದು. ಹೀಗಾಗಿ ಸಾಮರ್ಥ್ಯಗಳನ್ನು ಹೆಚ್ಚೆಚ್ಚು ಶಕ್ತಿಯನ್ನು ತುಂಬುವ ಬಲಗಳಾನ್ನಾಗಿ ಪರಿವರ್ತಿಸಲು ಪ್ರಯತ್ನಿಸಬೇಕು.


ಎಲ್ಲೆಲ್ಲೂ ಅವಕಾಶಗಳಿವೆ
ಎಲ್ಲೆಲ್ಲೂ ಅವಕಾಶಗಳಿವೆ ಅವುಗಳನ್ನು ಉಪಯೋಗಿಸಿಕೊಳ್ಳುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು. ನಿಮ್ಮ ಆಲೋಚನೆ ಆಸಕ್ತಿಗೆ ಹೊಂದುವ ಅವಕಾಶಗಳನ್ನು ಸ್ವಲ್ಪ ಬಾಗಿಸಿ ತಿರುಚಿ ನಿಮ್ಮದಾಗಿಸಿಕೊಳ್ಳುವ ಜ್ಞಾನ ಕೌಶಲ್ಯ ಹಾಗೂ ಸದ್ಗುಣ ರೂಡಿಸಿಕೊಳ್ಳಬೇಕು. ’ಜ್ಞಾನವೆಂದರೆ ಮುಂದೇನು ಮಾಡುವುದೆಂದು ತಿಳಿಯುವುದು. ಕೌಶಲ್ಯವೆಂದರೆ ಅದನ್ನು ಹೇಗೆ ಮಾಡುವುದೆಂದು ತಿಳಿಯುವುದು. ಮತ್ತು ಸದ್ಗುಣವೆಂದರೆ ಅದನ್ನು ಕಾರ್ಯಗತಗೊಳಿಸುವುದು.’ ಎಂದು ಡೇವಿಡ್ ಸ್ಟಾರ್ ಜೋರ್ಡಾನ್ ಹೇಳಿದ್ದಾರೆ. ನಿಜವಾದ ಸಮಸ್ಯೆಯೆಂದರೆ ನಿಮಗೇನು ತಿಳಿದಿದೆಯೋ ಅದನ್ನು ಮಾಡುವುದಿಲ್ಲ. ಅವಕಾಶಗಳು ಕಣ್ಮುಂದೆ ಇದ್ದರೂ ಕಾಣುವುದಿಲ್ಲ. ಅದನ್ನು ಕಾಣುವ ಅಭ್ಯಾಸ ರೂಢಿಸಿಕೊಳ್ಳಬೇಕು. ಹೊಸ ಅಭ್ಯಾಸಗಳು ಬಹುತೇಕ ಹೊಸ ಚಪ್ಪಲಿಗಳಿದ್ದಂತೆ ಮೊದಲು ಕೆಲ ದಿನಗಳ ಕಾಲ ಅನಾನುಕೂಲವೆನಿಸುತ್ತವೆ. ಆದರೆ ನೀವು ಅವುಗಳನ್ನು ಮೂರು ವಾರಗಳವರೆಗೆ ಬಳಸಿದರೆ ಅವು ಎರಡನೆಯ ಚರ್ಮದಂತೆ ಹಿತವಾಗಿ ನಿಮಗೆ ಹೊಂದಿಕೊಳ್ಳುತ್ತವೆ.


ಆಯಸ್ಕಾಂತದ0ತೆ ಇರಿ
ಬೇರೆಯವರಿಗೆ ಸಹಾಯ ಮಾಡಲು ದಾವಿಸಿ. ಜನರು ನಿನಗೆ ಸಹಾಯ ಮಾಡಿದಾಗ ನಿಮ್ಮ ಕೌಶಲ್ಯದ ಸಹಾಯದಿಂದ ಅವರ ಋಣವನ್ನು ತೀರಿಸಲು ಮುಂದಾಗಿ. ಇಂಥ ಎಲ್ಲ ಸಣ್ಣ ಪುಟ್ಟ ಆದರ್ಶ ಗುಣಗಳು ನಿಮಗೆ ಇತರರಿಂದ ಒಳ್ಳೆಯ ಅವಕಾಶಗಳನ್ನು ಹೆಕ್ಕಿ ತರಬಲ್ಲವು ಎಂಬುದನ್ನು ಅಲ್ಲಗಳೆಯುವಂತಿಲ್ಲ. ನೀವು ನಿಮ್ಮ ಕೆಲಸವನ್ನು ಅದೆಷ್ಟು ಪ್ರೀತಿಸುತ್ತೀರಿ ಆಯಸ್ಕಾಂತದ0ತೆ ಅದಕ್ಕೆ ಅಂಟಿಕೊ0ಡು ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತೀರೆಂಬುದು ಜನರಿಗೆ ತಿಳಿಯುವಂತೆ ಮಾಡಿ. ಮೊದಲು ನಾವು ಅವಕಾಶಗಳನ್ನು ಸೆಳೆದುಕೊಳ್ಳಲು ಪ್ರಯತ್ನಿಸಬೇಕು. ನಂತರ ಅವಕಾಶಗಳೇ ನಮ್ಮನ್ನು ಹುಡುಕಿಕೊಂಡು ಬರುತ್ತವೆ. ಹೀಗೆ ಮಾಡುವುದು ಒಂದು ದೊಡ್ಡ ಸವಾಲು ಎಂದುಕೊ0ಡು ಸುಮ್ಮನಿರುತ್ತೇವೆ. ‘ನೂರಾರು ಸಾವಿರ ಮಿಲಿಯಾಂತರ ನಕ್ಷತ್ರಗಳಲ್ಲೊಂದರ ಹೊರ ಮಿತಿಯೊಳಗೆ ಇರುವ ಅತ್ಯಂತ ಸಾಧಾರಣ ನಕ್ಷತ್ರದ ಒಂದು ಸಾಮಾನ್ಯ ಗ್ರಹದಲ್ಲಿ ನಾವು ವಾಸಿಸುತ್ತಿದ್ದೇವೆ.’ ಎಂದು ಅತ್ಯಂತ ಶ್ರೇಷ್ಠ ಭೌತಶಾಸ್ತçಜ್ಞರಲ್ಲೊಬ್ಬರಾದ ಸ್ಟೀಫನ್ ಹಾಕಿಂಗ್ ಒಮ್ಮೆ ಹೇಳಿದ ಮಾತು ನಾವು ಎದುರಿಸಬಹುದಾದ ಸವಾಲುಗಳು ಯಾವ ಲೆಕ್ಕಕ್ಕೂ ಇಲ್ಲ ಎನ್ನುವುದನ್ನು ಸಾರಿ ಹೇಳುತ್ತವೆ.


ನಿರ್ಧರಿಸಿ
ಬದುಕಿನ ಬಾಗಿಲಿಗೆ ಬಂದು ನಿಂತ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ಹಿಂಜರಿಯದಿರಿ. ನಿಮ್ಮ ವೃತ್ತಿ ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಸಹಾಯವಾಗುವ ಅವಕಾಶಗಳನ್ನು ಆಸಕ್ತಿ ಮತ್ತು ಕೌಶಲ್ಯಗಳಿಂದ ಅತ್ಯುನ್ನತ ಮಟ್ಟದಲ್ಲಿ ಬಳಸಿಕೊಳ್ಳಲು ಮುಂದಾಗಿ. ಅವಕಾಶಗಳ ಸಾಮ್ರಾಜ್ಯವು ನಿಜಕ್ಕೂ ಶಕ್ತಿಶಾಲಿಯಾಗಿರುತ್ತದೆ. ನೀವು ಸೃಷ್ಟಿಸಿಕೊಂಡಿರುವ ಪರಿಸರ, ನಿಮ್ಮ ಮನಸ್ಥಿತಿ ವಿಚಾರಗಳು ಕನಸುಗಳು ಅವಕಾಶಗಳೆಡೆಗಿನ ಹೆಜ್ಜೆಗಳನ್ನು ಹಗುರವಾಗಿಸುತ್ತವೆ ಇಲ್ಲ ಭಾರವಾಗಿಸುತ್ತವೆ. ಕಣ್ಣಿನ ಕಿಟಕಿಯ ಮೂಲಕ ನೋಡಿದರೆ ಎಲ್ಲೆಲ್ಲೂ ಅವಕಾಶಗಳಿವೆ!


ಕೊನೆ ಹನಿ
ಸೋಲುಗಳು ಬಿಡದಂತೆ ಕಾಡಿದರೂ ಆರ್ಥಿಕ ಸಂಕಷ್ಟ ಮಗ್ಗಲು ಮುಳ್ಳಾದರೂ ಎಷ್ಟೆಲ್ಲ ಕಷ್ಟ ಕಾರ್ಪಣ್ಯಗಳು ಎದುರಾದರೂ ಯಾವುದಕ್ಕೂ ಜಗ್ಗದೇ ಛಲದಿಂದ ಸಾಧಿಸಿ ತೋರಿದ ಮಹನೀಯರ ಪಟ್ಟಿ ಮಾಡುತ್ತ ಹೋದರೆ ಆಶ್ಚರ್ಯವೆನಿಸುವುದು. ಲತಾ ಮಂಗೇಷ್ಕರ್ ಅರುಣಿಮಾ ಸಿನ್ಹಾ ನಾರಾಯಣ ಮೂರ್ತಿ ಅಮಿತಾಬ್ ಬಚ್ಚನ್ ಅಬ್ರಹಾಂ ಲಿಂಕನ್ ಬಿಲ್ ಗೇಟ್ಸ್ ಧೀರೂಬಾಯಿ ಅಂಬಾನಿಯ0ಥವರು ಅದೃಷ್ಟ ದೇವತೆಯನ್ನು ನಂಬಿ ಕುಳಿತಿದ್ದರೆ ಇಂದು ಅವರು ದಂತಕತೆಯಾಗಿ ಸಾಧಕರಿಗೆ ಪ್ರೇರಕರಾಗಿ ನಿಲ್ಲುತ್ತಿರಲಿಲ್ಲ. ದೂರದೃಷ್ಟಿ ಮುಂದಾಲೋಚನೆ ಸತತ ಪ್ರಯತ್ನ ಸೋಲುಗಳಿಗೆ ಕುಗ್ಗದ ಮನಸ್ಥಿತಿ ಅವಕಾಶಗಳು ತಾವೇ ಬಂದು ಬಾಗಿಲು ಬಡಿಯಲೆಂದು ಕಾಯದೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳುವ ಜಾಣ್ಮೆ ಬೆಳೆಸಿಕೊಂಡಿದ್ದರು. ಹೀಗಾಗಿ ಯಾವ ಮೂಢ ನಂಬಿಕೆಗಳು ಅವರನ್ನು ಬಾಧಿಸಲಿಲ್ಲ. ಸಾಧನೆಗೆ ಅಡ್ಡಗಾಲು ಹಾಕಲಿಲ್ಲ. ಗೆಲುವಿನ ಹಾದಿಯಲ್ಲಿ ಸೋಲುಗಳು ಸಹಜ. ಸೋಲಿನ ಬಗೆಗೆ ಹೆಚ್ಚು ಚಿಂತಿಸಬಾರದು. ಅವಕಾಶಗಳ ಸಾಲುಗಳನ್ನೇ ಏಣಿಯಾಗಿಸಿ ಗೆಲುವಿನ ಶಿಖರದ ತುತ್ತತುದಿ ತಲುಪÀಬೇಕು. ಆಗ ಗೆಲುವಿನ ಜೀವನ ತಾನಾಗಿಯೇ ತಬ್ಬಿಕೊಳ್ಳುತ್ತದೆ.

Related Articles

ಪ್ರತಿಕ್ರಿಯೆ ನೀಡಿ

Latest Articles