ಭಕ್ತಿಯ ಸವಿಯನ್ನು ಉಣಬಡಿಸಿದ ಶ್ರೀ ಭಗವಾನ್ ಶ್ರೀಧರ ಸ್ವಾಮಿಗಳು ರಾಮನಾಮದ ಮಹತ್ವವನ್ನು ಸಾರಿದ ಸಂತ.
ಅವರ ಪ್ರವಚನಗಳು ಅಧ್ಯಾತ್ಮದ ಸಂದೇಶದ ಜತೆಗೆ ಸಾರ್ಥಕ ಬದುಕಿನೆಡೆಗೆ ದಾರಿ ತೋರಿಸುತ್ತದೆ. ಅಧ್ಯಾತ್ಮ ಎಂದರೆ ನಮ್ಮಲ್ಲೇ ಅಡಗಿರುವ ದೈವತ್ವವನ್ನು ಜಾಗೃತಗೊಳಿಸುವುದು ಎಂದು ಸಂದೇಶ ನೀಡಿದವರು. ಅವರು ಭಕ್ತ ಸಮೂಹಕ್ಕೆ ನೀಡಿದ ಸಂದೇಶಗಳು ಹಲವು. ಶ್ರೀಧರ ಸ್ವಾಮಿ ಅವರನ್ನು ಅನುಸರಿಸುವ ಭಕ್ತ ಸಮೂಹವೇ ಇದೆ.
ಶ್ರೀಧರ ಸ್ವಾಮಿಗಳ ಜೀವನಚರಿತ್ರೆ, ಅವರ ಬಾಲ್ಯ, ಗುರುಗಳು, ಸಾಧನೆಯ ಹಾದಿಯ ಸಮಗ್ರ ಚಿತ್ರಣ, ಪ್ರವಚನಗಳು, ಭಕ್ತರಿಗೆ ನೀಡಿದ ಅಭಯಪ್ರದಾನದ ಹಲವು ಘಟನೆಗಳನ್ನೊಳಗೊಂಡಿರುವ ಕೃತಿ ‘ಸದ್ಗುರು ಭಗವಾನ್ ಶ್ರೀ ಶ್ರೀಧರ ಚರಿತ್ರೆ’. ಈ ಕೃತಿಯಲ್ಲಿ ಸದ್ಗುರುವಿನ ಬಾಲ್ಯದಿಂದ ಹಿಡಿದು ಸಮಾಧಿ ವರೆಗಿನ ಅಪರೂಪದ ಚಿತ್ರಗಳ ಸಂಗ್ರಹವೂ ಇದೆ. ಕೃತಿಯು 860 ಪುಟಗಳನ್ನು ಒಳಗೊಂಡಿದೆ.
ಪುಸ್ತಕ ಖರೀದಿಸಲು 74836 81708 ಈ ನಂಬರ್ಗೆ ವಾಟ್ಸಪ್ ಮಾಡಬಹುದು.