ಗುರುಪೂರ್ಣಿಮೆ ನೆನಪಲ್ಲಿ ಕಾಡುವ ಗಾಣಗಾಪುರ ದತ್ತಪೀಠ

*ಶ್ರೀನಿವಾಸ ಮೂರ್ತಿ ಎನ್. ಎಸ್

ಆಷಾಢ ಮಾಸದ ಹುಣ್ಣಿಮೆಯಂದು ಗುರು ಪರಂಪರೆಯಲ್ಲಿ ಪವಿತ್ರ ದಿನ. ಅಂದು ಚಾತುರ್ಮಾಸವನ್ನ ಆರಂಭಿಸುವ ದಿನ. (ಈ ವರ್ಷ ಜುಲೈ 24). ಹಲವು ಗುರು ಪರಂಪರೆಯನ್ನು ಹೊಂದಿರುವ ನಮ್ಮ ನಾಡಿನಲ್ಲಿ ಪ್ರಮುಖವಾಗಿ ಕಾಣ ಸಿಗುವ ಪರಂಪರೆಯಲ್ಲಿ ದತ್ತ ಪರಂಪರೆಯೂ ಒಂದು. ದತ್ತ ಪರಂಪರೆಯಲ್ಲಿ ಪ್ರಮಖವಾಗಿ ಕಾಣ ಬರುವ ಕ್ಷೇತ್ರವೆಂದರೆ ಗುಲ್ಬರ್ಗ ಜಿಲ್ಲೆಯ ಗಾಣಗಾಪುರದ ಶ್ರೀ ದತ್ತ ಮಹಾರಾಜ ದೇವಾಸ್ಥಾನ ಅಥವಾ ದತ್ತ ಪೀಠ. ಗಾಣಗಾಪುರ, ಭೀಮ ಹಾಗು ಅಮರಾಜ ನದಿಗಳ ಸಂಗಮದಲ್ಲಿದ್ದು ಇಲ್ಲಿ ದತ್ತ ಪರಂಪರೆಗೆ ಸೇರಿದ ಶ್ರೀ ನರಸಿಂಹ ಸರಸ್ವತಿ ದತ್ತ ಮಹಾರಾಜರ ಪವಿತ್ರ ಕ್ಷೇತ್ರವಿದೆ.

ಸುಮಾರು 700 ವರ್ಷಗಳ ಇತಿಹಾಸ ಇದಕ್ಕಿದೆ. ಗುರು ಚರಿತ್ರೆಯಲ್ಲಿ ಕಾಣಸಿಗುವ ಗಾಣಗಾಪುರ ದತ್ತ ಕ್ಷೇತ್ರವೆಂದೇ ಖ್ಯಾತಿ ಪಡೆದಿದೆ. ಇದನ್ನು ಗಾಣಗಾಪುರ, ಗಾಣಗಾಭವನ, ಗಂಧರ್ವಭವನ, ಗಂಧರ್ವಪುರ ಎಂಬ ಹೆಸರುಗಳಿಂದ ಗುರುಚರಿತ್ರೆಯಲ್ಲಿ ನೋಡಬಹುದು.

ಇತಿಹಾಸ ಪುಟದಲ್ಲಿ ಕಾಣಸಿಗುವುದು ಶ್ರೀ ನರಸಿಂಹ ಸರಸ್ವತಿಯವರ ಹೆಸರು. ಮೂಲತಹ ಮಹಾರಾಷ್ಟ್ರದ ಮಹೂರ್ಗಡ್ ಗ್ರಾಮಕ್ಕೆ ಸೇರಿದವರಾಗಿದ್ದು ತಮ್ಮನ್ನು ನಾರಾಯಣ ಎಂದು ಕರೆದುಕೊಂಡಿದ್ದರು. ದತ್ತಾವತಾರಿ ಎಂದೇ ಪ್ರಸಿದ್ದಿ ಪಡೆದ ಇವರು ಇಲ್ಲಿ ಪೀಠವನ್ನು ಸ್ಥಾಪಿಸಿ ಸುಮಾರು 23 ವರ್ಷಗಳ ಕಾಲ ನೆಲೆಸಿದ್ದರು.

ಸಂಗಮದ ಬಳಿ ಇದ್ದ ಇವರು ನಂತರ ದತ್ತ ಪರಂಪರೆಯನ್ನು ಆಚರಿಸುವವರ ಸಂಖ್ಯೆ ಜಾಸ್ತಿ ಆದ ಕಾರಣ ಜಾಸ್ತಿಯಾದಗ ಊರ ಮಧ್ಯದಲ್ಲಿ ಈ ಮೊದಲು ಶೃಂಗೇರಿ ಮಠದ ಅಧೀನದಲ್ಲಿದ್ದು ನಂತರ ಭಾಸ್ಕರ ಭಟ್ಟರು ಅಭಿವೃದ್ದಿ ಪಡಿಸಿದ ಮಠಕ್ಕೆ ತೆರೆಳಿದರು. 23 ವರ್ಷಗಳ ನಂತರ ಗಾಣಗಪುರದ ಶ್ರೀ ಶೈಲಕ್ಕೆ ಹೊರಟಾಗ ಭಕ್ತರ ಕೋರಿಕೆ ಮೇರೆಗೆ ತಮ್ಮ ಪಾದುಕೆಗಳನ್ನು ಇಲ್ಲಿ ಬಿಟ್ಟು ತೆರೆಳಿದರು. ಇವರ ನಂತರ ಶ್ರೀಪಾದ ವಲ್ಲಭರು ದತ್ತ ಪರಂಪರೆಯನ್ನು ಮುಂದುವರಿಸಿದ ಅಧಿಪತಿಯಾದರು.

ಈ ಮಠದಲ್ಲಿರುವ ಶ್ರೀಗುರುಗಳ ಪಾದುಕೆಗಳು ನಿರ್ಗುಣ ಪಾದುಕೆಗಳೆಂದು ಹೆಸರಾಗಿವೆ. ವಾಡಿಯಲ್ಲಿರುವ ಪಾದುಕೆಗಳನ್ನು ಮನೋಹರ ಪಾದುಕೆಗಳೆನ್ನುತ್ತಾರೆ. ಮಠದ ಪೂರ್ವ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಎರಡು ಮಹಾದ್ವಾರಗಳಿವೆ  ದೇವಾಲಯದ ಗರ್ಭಗುಡಿಯಲ್ಲಿ ದತ್ತಾತ್ರೇಯ ಮೂರ್ತಿ (ಬ್ರಹ್ಮ, ವಿಷ್ಣು, ಹಾಗು ಮಹೇಶ್ವರ) ಹಾಗು ಶಿವಲಿಂಗ ಇದ್ದು ಸಣ್ಣ ಕಿಂಡಿಯಿಂದ ನೋಡಲು ಅವಕಾಶವಿದೆ.

ದೇವಾಲಯದಲ್ಲಿ ಪೂಜೆ ಬೆಳಗ್ಗೆ ಮೂರು ಘಂಟೆಗೆ ಆರಂಭವಾಗಲಿದ್ದು ಮಧ್ಯಾಹ್ನ ಅನ್ನದಾನದ ವ್ಯವಸ್ಥೆ ಇದೆ.  ಗುರುವಾರದಂದು ಇಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದತ್ತ ಜಯಂತಿಯನ್ನು ಹಾಗು ನರಸಿಂಹ ಸರಸ್ವತಿಯವರ ಪುಣ್ಯ ತಿಥಿಯಂದುವಿಶೇಷ ಪೂಜೆ ಕೈಗೊಳ್ಳಲಾಗುತ್ತದೆ. ಸಂಗಮದ ಹತ್ತಿರ ಭಸ್ಮದ ರಾಶಿಯಿದೆ. ಹಿಂದೆ ಗುರುಗುಳ ಕಾಲದಲ್ಲಿ ಯಾಗ ಹವನಗಳು ನಡೆಯುತ್ತಿದ್ದು ಅದರ ಯಜ್ಞದ ಬೂದಿಯನ್ನು ಹೀಗೆ ರಾಶಿ ಮಾಡಲಾಗಿದೆ ಎಂಬ ಪ್ರತೀತಿ ಇದೆ. ಭಕ್ತರು ಸ್ನಾನಮಾಡಿದ ಅನಂತರ ಈ ಭಸ್ಮವನ್ನು ಲೇಪಿಸಿಕೊಳ್ಳುವರು. ಸಂಗಮೇಶ್ವರ ದೇವಾಲಯದ ಎದುರು ಶ್ರೀನರಸಿಂಹ ಸರಸತ್ವಿಯವರ ತಪೋಭೂಮಿ ಇದೆ. ಇಲ್ಲಿನ ತೀರ್ಥಗಳಲ್ಲಿ ಸ್ನಾನ ಮಾಡಿದರೆ ಅನೇಕ ಫಲಗಳು ಪ್ರಾಪ್ತಿಯಾಗುತ್ತವೆ ಎಂಬ ನಂಬಿಕೆ ಇದೆ.

ಹೋಗುವುದು ಹೀಗೆ: ಕಲಬುರ್ಗಿಯಿಂದ ಸುಮಾರು 40 ಕಿ.ಮೀ ದೂರದಲ್ಲಿದ್ದು, ಗಾಣಗಾಪುರ ರೈಲು ನಿಲ್ದಾಣದಿಂದ ಸುಮಾರು 25 ಕಿ.ಮೀ ದೂರದಲ್ಲಿದೆ

Related Articles

2 COMMENTS

  1. ನಾನು ನನ್ನ ಸ್ನೇಹಿತರೊಂದಿಗೆ ಗಾಣಗಾಪುರಕ್ಕೆ ಸಲ ಹೊರಡುವ ಅವಕಾಶ ಒದಗಿ ಬಂತು.ಯಮರ್ಜಾ ಭೀಮಾ ಸಂಗಮದಲ್ಲಿ ದತ್ತಪೀಠದಲ್ಲಿ ದರ್ಶನವಾಯಿತು ! ಒಂದುರಾತ್ರಿ‌ಅಲ್ಲೇಕಳೆದು ಮಾರನೆಯ ದಿನವೂ ದರ್ಶನ ಮಾಡಿಕೊಂಡು ಪ್ರಸಾದ ಸ್ವೀಕರಿಸಿ ಬೆಂಗಳೂರು ತಲುಪಿದಿವು.ಅಪೂರ್ವ ದರ್ಶನ !
    “ದಿಗಂಬರಾ ದಿಗಂಬರಾ ಶ್ರೀ ಪಾದದವಲ್ಲಭ ದಿಗಂಬರಾ”

ಪ್ರತಿಕ್ರಿಯೆ ನೀಡಿ

Latest Articles