ಭಾವಿಸಮೀರ ಶ್ರೀ ವಾದಿರಾಜರ ಋಜುಭಕುತಿಗೆ ಒಲಿದು ಬಂದ ಶ್ರೀ ಹಯಗ್ರೀವ ದೇವರಿಗೆ ಹಯಗ್ರೀವ ಜಯಂತಿಯ ಪ್ರಯುಕ್ತ ವಿಷ್ಣುಸಹಸ್ರ ನಾಮಾರ್ಚನೆ ಪುರಸ್ಸರವಾಗಿ ವಿಶೇಷ ಪೂಜೆಯನ್ನು ಸೋದೆ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಭೀಮನಕಟ್ಟೆ ಮಠದ ಶ್ರೀರಘುವರೇಂದ್ರ ತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀವೇದವರ್ಧನ ತೀರ್ಥ ಶ್ರೀಪಾದರು ನೆರವೇರಿಸಿದರು.
ಈ ಸಂದರ್ಭದಲ್ಲಿ ಗುರುರಾಜರ ಪಂಚವೃಂದವಾನ ಸನ್ನಿಧಿಯಲ್ಲಿ ಹಾಗೂ ಭೂತರಾಜರ ಸನ್ನಿಧಿಯಲ್ಲೂ ವಿಶೇಷ ಆರಾಧನೆ ನಡೆಯಿತು.





























