ಕೋಲಾರ ಜಿಲ್ಲೆಯ ದಿಂಬಾಲದ ಶ್ರೀ ವೇಣುಗೋಪಾಲ ಸ್ವಾಮಿ ದೇವರಿಗೆ ನಿತ್ಯದ ಪೂಜೆ ನಡೆಯುತ್ತಿಲ್ಲ. ದೇಗುಲ ಜೀರ್ಣೋದ್ಧಾರ ಕಾರ್ಯ ಆರಂಭಗೊ0ಡಿದ್ದು, ಆರ್ಥಿಕ ಸಮಸ್ಯೆಯಿಂದ ಕಾಮಗಾರಿ ಅರ್ಧದಲ್ಲೇ ನಿಂತಿದೆ. ಭಕ್ತಾದಿಗಳು ದೇಗುಲದ ಜೀರ್ಣೋದ್ಧಾರಕ್ಕೆ ನೆರವು ನೀಡಿ ಶ್ರೀಕ್ಷೇತ್ರವನ್ನು ಪುಣ್ಯಕ್ಷೇತ್ರವ ನ್ನಾಗಿಸಬೇಕಿದೆ.
ಗಂಗರು ಚೋಳರೂ ಆಳಿದ ಈ ನಾಡಿನಲ್ಲಿ ಆ ಕಾಲದಲ್ಲಿ ನಿರ್ಮಿಸಿದ ಅನೇಕಾನೇಕ ದೇವಾಲಯಗಳು ಭಕ್ತಿ ಪರಂಪರೆಯನ್ನು ಉಳಿಸಿ ಬೆಳೆಸಿವೆ. ಶ್ರದ್ಧಾ ಭಕ್ತಿಯ ತಾಣಗಳಾಗಿ ಇಂದಿಗೂ ಉಳಿದುಕೊಂಡಿವೆ. ರಾಜ್ಯಾದ್ಯಂತ ಅನೇಕ ಐತಿಹಾಸಿಕ ದೇವಸ್ಥಾನಗಳು ಇವೆ. ಅದರಲ್ಲಿ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ದಿಂಬಾಲ ರೋಣೂರಿನ ಶ್ರೀ ವೇಣುಗೋಪಾಲ ಸ್ವಾಮಿ ದೇವಾಲಯ ಸಹ ಒಂದು.
ಆದರೆ ಈ ದೇಗುಲದಲ್ಲಿ ಎಲ್ಲ ದೇಗುಲಗಳಲ್ಲಿ ನಡೆಯುವಂತೆ ಶ್ರೀ ವೇಣುಗೋಪಾಲ ಸ್ವಾಮಿಗೆ ನಿತ್ಯ ಪೂಜೆ ನಡೆಯುತ್ತಿಲ್ಲ. ಘಂಟೆನಾದ ಮೊಳಗುವುದಿಲ್ಲ, ಮಂತ್ರ ಪಠಣದ ಸದ್ದು ಕೇಳಿ ಬರುವುದಿಲ್ಲ.
ಕೋಲಾರ ಜಿಲ್ಲೆಯ ದಿಂಬಾಲದ ಶ್ರೀ ವೇಣುಗೋಪಾಲ ಸ್ವಾಮಿ ದೇವರಿಗೆ ನಿತ್ಯದ ಪೂಜೆ ನಡೆಯುತ್ತಿಲ್ಲ
ಭಕ್ತಾದಿಗಳು ದೇಗುಲದ ಜೀರ್ಣೋದ್ಧಾರಕ್ಕೆ ನೆರವು ನೀಡಿ ಶ್ರೀಕ್ಷೇತ್ರವನ್ನು ಪುಣ್ಯಕ್ಷೇತ್ರವನ್ನಾಗಿಸಬೇಕಿದೆ.
ಶಿಥಿಲಾವಸ್ಥೆಯಲ್ಲಿರುವ ಶ್ರೀ ವೇಣುಗೋಪಾಲ ಸ್ವಾಮಿ ದೇಗುಲದಲ್ಲಿ ಬಹಳ ಕಾಲದಿಂದ ಪೂಜಾ ಕಾರ್ಯಗಳು ನಿಂತು ಹೋಗಿತ್ತು.
ಇದರ ಪುನರುತ್ಥಾನದ ಕಾರ್ಯವನ್ನು ಸದ್ಯ ಶ್ರೀ ವೇಣುಗೋಪಾಲ ದೇವಾಲಯ ಟ್ರಸ್ಟ್ ಕೈಗೆತ್ತಿಕೊಂಡಿದೆ. ಶಿಲಾ ಶಾಶ್ವತವಾಗಿರಬೇಕೆಂದು ಸುಭದ್ರ ರೀತಿಯಲ್ಲಿ ನಿರ್ಮಾಣದ ಕಾರ್ಯ ನಡೆಯುತ್ತಿದೆ.
ಹಣದ ಕೊರತೆಯಿಂದ ಕಾರ್ಯಗಳು ಆಮೆಗತಿಯಲ್ಲಿ ಸಾಗಿದೆ. ತಾವೆಲ್ಲಾ ಭಕ್ತಾದಿಗಳು ಧನಸಹಾಯ ಮಾಡಿ ದೈವ ಕಾರ್ಯವನ್ನು ಸಂಪನ್ನ ಮಾಡಬೇಕೆಂದು ದೇವಾಲಯದ ಟ್ರಸ್ಟ್ನ ಮುಖ್ಯಸ್ಥರಾದ, ಡಿ. ಎಂ. ವೆಂಕಟರೆಡ್ಡಿ ಮನವಿ ಮಾಡಿದ್ದಾರೆ.
ದಾನಿಗಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದು: 7829383079 9448542103.