ಕಾದಿಹಳು ರಾಧೆ

ಮಾಧವ ನಿನ್ನ ಕೊಳಲ ನಾದಕೆ
ಮನಸೋತಳು ಬೃಂದಾವನ ಕನ್ನಿಕೆ
ಗೋಪಾಲ ನಿನ್ನ ಮೋಹಕ ರಾಗಕೆ
ಜಗವ ಮರೆತು ನಿಂತಳು ಗೋಪಿಕೆ//

ಪ್ರೇಮದ ಸುಧೆಯ ನೀ ಬೀರಲು
ತನಿಯಿತು ರಾಧೆಯ ಒಡಲು
ಮುರುಳಿ ಮುಕುಂದ ಗೋಪಾಲಕೃಷ್ಣ
ಹೆಂಗಳೆಯರ ಮನಕದ್ದ ಕಳ್ಳ ಕೃಷ್ಣ//

ರಾಧಾ ಕೃಷ್ಣ ನಿಮ್ಮ  ಪ್ರೀತಿ ಅಮರ
ನಿಶ್ಕಲ್ಮಶ ಪ್ರೇಮ ಭಾವ ಸುಮಧುರ
ಇವರ ಪ್ರೇಮದೊಡನಾಟ ನೋಡಲು ಸುಂದರ
ಇವರಿರ್ವರ ನೃತ್ಯ ರಮ್ಯ ಮನೋಹರ//

ತುಳಸಿ ಪ್ರೀಯ ನೀನು ಗೋವಿಂದ
ನವಿಲು ಗರಿ ಧರಿಸಿದ ಮುಕುಂದ
ರಾಧಾ ಹೃದಯವಾಸ ಗೋವಿಂದ
ನಿನ್ನ ಹೃದಯದಿ ರಾಧೆ ಇರುವಳು ಮುಕುಂದ//

ತನುಮನದಿ ರಾಧೆಯದೆ ಕನವರಿಕೆ
ಭಾಮಾ ರುಕ್ಮಿಣಿಯರ ವರಸಿದಿ ಏಕೆ
ಗೋಕುಲದೆಡೆಗೆ ನಿನ್ನ ಪಯಣ
ಕಾದಿಹಳು ರಾಧೆ ಪ್ರತೀಕ್ಷಣ//

* ಜ್ಯೋತಿ ಕೋಟಗಿ,

ಶಿಕ್ಷಕಿ ಸ ಮಾ ಪ್ರಾ ಶಾಲೆ,

ತಲ್ಲೂರ ಬೆಳಗಾವಿ ಜಿಲ್ಲೆ

Related Articles

ಪ್ರತಿಕ್ರಿಯೆ ನೀಡಿ

Latest Articles