ಉಡುಪಿ ಶ್ರೀಕೃಷ್ಣ ಮಠದಲ್ಲಿ ಜನ್ಮಾಷ್ಟಮಿ ಸಂಭ್ರಮ

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಟ ಜನ್ಮಾಷ್ಟಮಿ ಪೂಜೆ, ಧಾರ್ಮಿಕ ವಿಧಿವಿಧಾನಗಳು ಸಂಪ್ರದಾಯಬದ್ಧವಾಗಿ ನಡೆಯಲಿವೆ. ಆಗಸ್ಟ್ 30 ರಂದು ಬೆಳಗ್ಗೆ ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧಿಪತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಲಕ್ಷ ತುಳಸಿ ಅರ್ಚನೆ ನಡೆಸಲಿದ್ದಾರೆ
ಭಕ್ತರಿಗೆ ರಾತ್ರಿ 12.30 ಕ್ಕೆ ಕನಕನ ಕಿಂಡಿ ಎದುರುಗಡೆ ಹಾಗೂ ಮಧ್ವ ಮಂಟಪದಲ್ಲಿ ಅರ್ಘ್ಯ ಪ್ರದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಆ.31 ರಂದು ಮಧ್ಯಾಹ್ನ 3.30 ಕ್ಕೆ ವಿಟ್ಲಪಿಂಡಿ ರಥೋತ್ಸವ ನಡೆಯಲಿದೆ. ಈ ಬಾರಿಯೂ ಅಷ್ಟಮಠದ ಸ್ವಾಮೀಜಿ, ಮಠದ ಸಿಬ್ಬಂದಿ ಮಾತ್ರ ಭಾಗವಹಿಸಬಹುದು.

ದರ್ಶನಕ್ಕೆ ಅವಕಾಶ: ಅಷ್ಟಮಿಯ ದಿನ ಬೆಳಗ್ಗೆ 8ರಿಂದ ಸಾಯಂಕಾಲ 6 ಗಂಟೆಯವರೆಗೆ, ಮಂಗಳವಾರ ಬೆಳಗ್ಗೆ7.30ರಿಂದ ಮಧ್ಯಾಹ್ನ1 ಗಂಟೆಯವರೆಗೆ ನಂತರ ಸಂಜೆ 5 ಗಂಟೆಯಿ0ದ ಭಕ್ತರು ಶ್ರೀಕೃಷ್ಣ ದೇವರ ದರ್ಶನ
ಮಾಡಬಹುದು.

40 ಸಾವಿರ ಚಕ್ಕುಲಿ, 80 ಸಾವಿರ ಲಡ್ಡು
ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲು 40 ಸಾವಿರ ಚಕ್ಕುಲಿ ಹಾಗೂ 80 ಸಾವಿರ ಉಂಡೆ ಸಿದ್ಧಗೊಂಡಿದೆ.

ಮೊಸರು ಕುಡಿಕೆಯ ಮಡಿಕೆಗಳಿಗೆ ರಂಗವಲ್ಲಿ

ಶ್ರೀಕೃಷ್ಣ ಮಠದಲ್ಲಿ, ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಆ.31 ರಂದು ನಡೆಯುವ ಶ್ರೀಕೃಷ್ಣ ಲೀಲೋತ್ಸವದ ಮೊಸರು ಕುಡಿಕೆಯ ಮಡಿಕೆಗಳಿಗೆ ಬ್ರಹ್ಮಾವರದ ಮಂಜುನಾಥ ಆಚಾರ್ಯ ಮತ್ತು ಸಂಗಡಿಗರು  ರಂಗವಲ್ಲಿ ಬಿಡಿಸಿದರು.

Related Articles

ಪ್ರತಿಕ್ರಿಯೆ ನೀಡಿ

Latest Articles