*ವೈ.ಬಿ.ಕಡಕೋಳ
“ಮುಂದೆ ಗುರಿಯಿರಲಿ ಹಿಂದೆ ಗುರುವಿರಲಿ ಶಿಷ್ಯ ಕೋಟಿಯು ನಡುವೆ ಸಾಗಲಿ ನಿರಂತರ “.
ಮಕ್ಕಳ ಮುಕ್ತ ಮನಸ್ಸಿನ ಅನಂತ ಕನಸು-ಕಲ್ಪನೆಗಳಿಗೆ ಬಣ್ಣ ತುಂಬುವ, ಚಿತ್ತಾರ ಬಿಡಿಸುವ ವಿಶಿಷ್ಟ ಬದುಕು ಶಿಕ್ಷಕರದು. ಶಿಕ್ಷಕರ ದಿನಾಚರಣೆಗೆ ನಾವೆಲ್ಲ ಅಣಿಯಾಗುತ್ತಿದ್ದೇವೆ. ಇತರೇ ವೃತ್ತಿಗಳಿಗಿಂತ ಭಿನ್ನವಾದ ಮತ್ತು ವಿಭಿನ್ನವಾದ ವೃತ್ತಿ ಇದು. ಅಕ್ಷರ ಸಂಸ್ಕøತಿಯ ವಾರಸುದಾರಿಕೆಯ ಮಿಡಿತ ತುಂಬಿದ ತೃಪ್ತಿಯೊಂದಿಗೆ ಬೀಗುವ ದೇಶವನ್ನು ಕಟ್ಟಿ ಬೆಳೆಸುವ ಮಾನವ ಸಂಪನ್ಮೂಲವನ್ನು ನಿರ್ಮಿಸಿ ಕೊಡುವ ಹೊಣೆಗಾರಿಕೆ ಇಂದಿನ ಶಿಕ್ಷಕರ ಮೇಲಿದೆ.
ಪ್ರಾಚೀನ ಕಾಲದ ಗುರುಕುಲ ಪದ್ದತಿ,ಬೌದ್ದ ಧರ್ಮದ ಸಂಘ ಮತ್ತು ವಿಹಾರಗಳು,ಇಸ್ಲಾಂ ಧರ್ಮದ ಮದರಸ.ಹೀಗೆ ಸಾಗಿದ ನಮ್ಮ ಶಿಕ್ಷಣ ಈಗ ಆಧುನಿಕ ತಂತ್ರಜ್ಞಾನ ಬಳಸುವ ಮೂಲಕ ಮಕ್ಕಳಲ್ಲಿ ವೈಚಾರಿಕತೆಯ ಮೂಲಕ ಸಾಗುತ್ತಿರುವಾಗ ಇಂದಿನ ಶಿಕ್ಷಕರು ತಮ್ಮ ವೃತ್ತಿಯನ್ನು ನೂತನ ತಂತ್ರಜ್ಞಾನವನ್ನು ಅರಿತು ಬೋಧನೆಗೆ ತೊಡಗಬೇಕಾಗಿದೆ. ಇದರ ಜೊತೆಗೆ ನಮ್ಮ ಸಂಸ್ಕøತಿಯನ್ನು ಕಲಿಸಬೇಕಾಗಿದೆ.
ಯಾವ ದೇಶದಲ್ಲಿ ಸಾಹಿತ್ಯ ಸಂಸ್ಕøತಿ,ಹಾಗೂ ವಿದ್ಯಾ ಕೇಂದ್ರಗಳು ಅಮೂಲ್ಯ ಸಾಧನೆ ಪಥದಲ್ಲಿ ಸಾಗಿ ವಿಶ್ವದ ಗಮನ ಸೆಳೆಯುತ್ತವೆಯೋ ಆ ದೇಶದ ಶಿಕ್ಷಕರ ಕೊಡುಗೆಗಳು ಪ್ರಮುಖಪಾತ್ರ ವಹಿಸುತ್ತವೆ ಎಂಬ ಮಾತಿನಂತೆ ಶಿಕ್ಷಕರು ಪರೋಕ್ಷವಾಗಿ ದೇಶವನ್ನು ಸರ್ವ ರೀತಿಯಲ್ಲಿ ಅಭಿವೃದ್ದಿಶೀಲ ಪಥದಲ್ಲಿ ನಡೆಸುವಂಥಹ ಪ್ರತಿಭಾನ್ವಿತರನ್ನು ಹುಟ್ಟುಹಾಕುವಲ್ಲಿ ಜ್ಞಾನದ ನೀಡುವಿಕೆಯ ಸೇವೆಯಲ್ಲಿ ಬದುಕನ್ನು ಸವೆಸಬೇಕು.
ಹಾಗಾದರೆ ನಮ್ಮ ಬದುಕಿನಲ್ಲಿ ನಾವು ಶಿಕ್ಷಕ ವೃತ್ತಿಯನ್ನು ಹೇಗೆ ಸ್ವೀಕರಿಸಬೇಕು ಎಂಬುದಕ್ಕೆ ಇಲ್ಲಿವೆ ಕೆಲವು ಸಲಹೆಗಳು;
• ಮೊಟ್ಟ ಮೊದಲಿಗೆ ನೀವು ಈ ವೃತ್ತಿಗೆ ಇಷ್ಟಪಟ್ಟು ಬಂದಿದ್ದೀರಾ ಅಥವ ವೇತನ ಪಡೆಯಲು ಸರ್ಕಾರಿ ನೌಕರಿ ಅಂಥ ಸ್ವೀಕರಿಸಿರುವಿರಾ.? ಯೋಚಿಸಿ.ನೀವು ಇಷ್ಟ ಪಟ್ಟು ಬಂದ ವೃತ್ತಿಯಾಗಿ ಇದನ್ನು ಸ್ವೀಕರಿಸಿ. • ನೀವು ಮಾಡುವ ಕೆಲಸ ನಿಮಗೆ ಇಷ್ಟವಾದಾಗ ಅದು ನಿಮಗೆ ಕಷ್ಟವಾಗಲಾರದು. ಪ್ರಾಥಮಿಕದಿಂದ ಪದವಿ ಹಂತದವರೆಗೂ ಎಲ್ಲರೂ ತಮ್ಮ ತಮ್ಮ ಬದ್ದತೆಯನ್ನು, ಸೇವೆಯ ಜವಾಬ್ದಾರಿಯನ್ನು ಅರಿತು ಕಾರ್ಯ ನಿರ್ವಹಿಸಬೇಕು.
• ವೇಳೆಗೆ ಮಹತ್ವ ನೀಡಿ,ನೀವು ವೇಳೆಗೆ ಸರಿಯಾಗಿ ಬರುವಿರಾದರೆ ವಿದ್ಯಾರ್ಥಿಗಳು ನಿಮ್ಮನ್ನು ಅನುಕರಿಸುವರು.
• ಮಕ್ಕಳಿಗೆ ನೀತಿ ಹೇಳುವ,ಸಮಾಜಕ್ಕೆ ಅನುಕರಣೀಯವಾದ ವೃತ್ತಿ ಇದು.ಶಿಕ್ಷಕರೇ ನಿಮ್ಮಲ್ಲಿ ದುರಭ್ಯಾಸಗಳಿರಕೂಡದು..ಚಟ ನಮ್ಮ ಬದುಕನ್ನು ಚಟ್ಟಕ್ಕೆ ಏರಿಸುವುದು,ವೃತ್ತಿ ನೈಪುಣ್ಯತೆ ಉಳಿಸಿಕೊಳ್ಳಿ.
• ಪ್ರತಿ ದಿನ ಶಾಲೆಗೆ ಹೋಗಿ ಬರುವುದೇ ಒಂದು ಸಾಹಸದ ಕಾರ್ಯವೆಂಬಂತೆ ವೃತ್ತಿ ಮಾಡಬೇಡಿ,ಎಷ್ಟು ಅವಧಿ ಶಾಲೆಯಲ್ಲಿದ್ದೆ ಅಷ್ಟು ಅವಧಿ ನನಗೆ ವಹಿಸಿದ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನಾನೇನು ಮಾಡಬಲ್ಲೆ ಯೋಚಿಸಿ.
• ತರಗತಿಗೆ ಕಾಲಿಡುವ ಮುನ್ನ ನಿಮ್ಮ ಮುಖದಲ್ಲೊಂದು ಸುಂದರ ನಗುವಿರಲಿ,ನಿಮ್ಮ ಹಾಗೂ ವಿದ್ಯಾರ್ಥಿಗಳ ನಡುವಿನ ಭೇಟಿಯ ಮೊದಲ ಮೂವತ್ತು ಸೆಕೆಂಡುಗಳು ನಿಮ್ಮ ಕಲಿಸುವಿಕೆಯ ಉಳಿದ ಅವಧಿಯನ್ನು ನಿರ್ಧರಿಸುತ್ತವೆ.
• ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯದ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಿ.ಅಂದರೆ ಯಾವ ರೀತಿಯಲ್ಲಿ ಪಾಠ ಮಾಡಿದರೆ ಮಗು ಹೆಚ್ಚು ಪರಿಣಾಮಕಾರಿಯಾಗಿ ಕಲಿಯಬಲ್ಲದು ಎಂಬ ನಿರ್ಧಾರಿತ ಸಾಮಥ್ರ್ಯ ನಿಮ್ಮದಾಗಿಸಲು ನೀವೇನು ಮಾಡಲು ಸಾದ್ಯ ಎಂಬುದು ನಿಮಗಿರಲಿ, ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದಿ, ಹಾಗೂ ಇತರ ಶಿಕ್ಷಕರು ಅಂಥ ಸಂಗತಿಗಳನ್ನು ಹೇಗೆ ನಿಭಾಯಿಸಬಲ್ಲರು ಎಂಬುದನ್ನು ಅವರೊಡನೆ ಚರ್ಚಿಸಿ ಬೋಧನೆಗೆ ತೊಡಗಿಕೊಳ್ಳಿ.
• ಮಕ್ಕಳು ನಿಮ್ಮ ವೇಷಭೂಷಣ ಅನುಕರಿಸುತ್ತವೆ. ಶಿಕ್ಷಕ ವೃತ್ತಿಯಲ್ಲಿರುವ ನೀವು ನಿಮ್ಮ ವೇಷಭೂಷಣ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮವಾಗದಂತೆ ರೂಢಿಸಿ,ನಿಮ್ಮ ಇತಿಮಿತಿಗಳನ್ನು ಅರಿತುಕೊಳ್ಳಿ.ನಿಮ್ಮ ಉಡುಗೆ -ತೊಡುಗೆ, ಮಾತು ವರ್ತನೆ ಉತ್ತಮವಾಗಿರಲಿ.
• ಕಲಿಕೆಗೆ ಹೊರೆಯಾಗದಂತೆ ಅಭ್ಯಾಸ ಸಾಗಿಸಿ,ಮನೆಗೆಲಸ ಕೂಡ ಮಕ್ಕಳಿಗೆ ಹೊರೆಯಾಗದಂತಿರಲಿ,ಪಠ್ಯ ವಿಷಯಕ್ಕಷ್ಟೇ ನಿಮ್ಮ ಬೋಧನೆ ಸೀಮಿತವಾಗದೇ ಸಹಪಠ್ಯ ವಿಷಯಗಳಾದ ನೀತಿ ಶಿಕ್ಷಣ, ಸಮಾಜೋಪಯೋಗಿ ಉತ್ಪಾದನಾ ಚಟುವಟಿಕೆ, ಸ್ಕೌಟ್ಸ,ಗೈಡ್ಸ,ಸೇವಾದಲ,ಹೀಗೆ ಎಲ್ಲ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಿ ಅವುಗಳನ್ನು ಕೂಡ ಮಕ್ಕಳಿಗೆ ಕಲಿಸಲು ಸಿದ್ದತೆ ನಿಮ್ಮದಾಗಿರಲಿ,
• ಶಿಕ್ಷಣದ ಹೊಸ ನೀತಿಗಳಾದ ನಲಿ-ಕಲಿ, ಚಟುವಟಿಕೆ ಆಧಾರಿತ ಬೋಧನೆ, ಚೈತನ್ಯಯುಕ್ತವಾದ ಕಲಿಕಾ ವಾತಾವರಣ, ಮೊದಲಾದ ಅಂಶಗಳು ನಿಮಗೆ ರೂಢಿಯಾಗಲಿ. ಮಕ್ಕಳ ಅಭಿರುಚಿ, ಅಭಿಕ್ಷಮತೆ,ಅವರ ಗುಣಲಕ್ಷಣಗಳನ್ನು ಅರಿತು ಬೋಧಿಸಿ
• ಮಗುವಿನ ಕೌಟುಂಬಿಕ ಹಾಗೂ ಆರ್ಥಿಕ ಹಿನ್ನಲೆ ಅರಿತುಕೊಳ್ಳಿ,ಶಾಲೆ ಬಿಟ್ಟ ಹಾಗೂ ಶಾಲೆಯಿಂದ ಹೊರಗುಳಿಯಲು ಸ್ಪಷ್ಟ ಕಾರಣ ತಿಳಿದರೆ ಅಂಥ ಮಕ್ಕಳಿಗೆ ಯಾವ ಯೋಜನೆ ರೂಪಿಸಬಹುದು ಎಂಬುದು ಇಲಾಖೆಯ ಚೌಕಟ್ಟಿನೊಳಗೆ ಸಾಧ್ಯ ಅವುಗಳನ್ನು ಅಳವಡಿಸಿ ಬೋಧಿಸಿದರೆ ಪ್ರತಿಯೊಬ್ಬ ಮಗುವಿಗೂ ನೀವು ಆಪ್ತರಾಗುತ್ತೀರಿ.
• ಸುತ್ತ ಮುತ್ತ ದೊರೆಯುವ ವಸ್ತುಗಳಿಂದ ಬೋಧನೋಪಕರಣ ತಯಾರಿಸುವುದನ್ನು ರೂಢಿಸಿ ಅಂಥವುಗಳನ್ನು ನೋಡಿದ ಮಗು ತಾನೇ ಅದನ್ನು ಮಾಡಲು ರೂಢಿಸಿಕೊಳ್ಳುವಲ್ಲಿ ನಿಮ್ಮ ಬೋಧನೋಪಕರಣ ಪ್ರಭಾವಶಾಲಿಯಾಗಬಲ್ಲದು.
• ಇಡೀ ಸಮಾಜದಲ್ಲಿ ಹಿರಿ-ಕಿರಿಯರಾದಿಯಾಗಿ ನಮಸ್ಕರಿಸುವುದು ಶಿಕ್ಷಕರಿಗೆ ಮಾತ್ರ ಈ ರೀತಿ ಗೌರವ ಪಡೆಯುವ ನೀವು ಆ ಗೌರವಕ್ಕೆ ಪಾತ್ರರಾಗಿ ಬದುಕಬೇಕಲ್ಲವೇ.? ಹಾಗಾದರೆ ಪವಿತ್ರವಾದ ಈ ವೃತ್ತಿಯನ್ನು ನಿಮ್ಮ ಬದುಕಾಗಿ ರೂಢಿಸಿಕೊಳ್ಳಿ. ಒಬ್ಬ ಇಂಜಿನಿಯರ್ ತಪ್ಪೆಸಗಿದರೆ ಒಂದು ಯೋಜನೆ ಹಾಳಾಗಬಹುದು,ಒಬ್ಬ ವೈದ್ಯ ತಪ್ಪೆಸಗಿದರೆ ಓರ್ವ ರೋಗಿಗೆ ತೊಂದರೆಯಾಗಬಹುದು.ಆದರೆ ಓರ್ವ ಶಿಕ್ಷಕ ತಪ್ಪೆಸಗಿದರೆ ಇಡೀ ಜನಾಂಗವೇ ಅಧೋಗತಿಗೆ ಹೋಗುತ್ತದೆ. ಆದ್ದರಿಂದ ಶಿಕ್ಷಕರಾದವರು ತಮ್ಮ ವೃತ್ತಿ ಬಗ್ಗೆ ವಿಶೇಷ ಖಾಳಜಿ ಹೊಂದಬೇಕು. ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು.
• ಯಾರು ತಮ್ಮ ಹುದ್ದೆಯನ್ನು ಗೌರವಿಸುತ್ತಾರೋ ಅವರಿಗೆ ಆ ಹುದ್ದೆ ಗೌರವವನ್ನು ತಂದು ಕೊಡುತ್ತದೆ. ಪ್ರತಿನಿತ್ಯ ಹಾಳು ಹರಟೆಯಲ್ಲಿ ತೊಡಗುವ ಬದಲು ನಿಮ್ಮ ವೃತ್ತಿಧರ್ಮದ ಹರಟೆಯಲ್ಲಿ ಹೆಚ್ಚು ತೊಡಗಿಕೊಳ್ಳಿ. ಅದು ನಿಮಗೂ ಶೋಭೆಯನ್ನು ತಂದುಕೊಡುವುದು.
ಮಕ್ಕಳ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸುತ್ತಿರುವ ಪ್ರತಿ ಶಿಕ್ಷಕರೂ ಉತ್ತಮ ಶಿಕ್ಷಕರೇ. ಶಿಕ್ಷಕರು ಕೇವಲ ಮಗುವಿಗೆ ಕೇವಲ ಪಠ್ಯಪುಸ್ತಕದ ಪಾಠವನ್ನು ಮಾತ್ರ ಬೋಧನೆ ಮಾಡದೇ ಮಗುವಿನ ಜ್ಞಾನ,ಭಾವನೇ,ಮನೋವಿಕಾಸಗಳು ಅಲ್ಲದೇ ಮಗುವನ್ನು ಉತ್ತಮ ಪ್ರಜೆಯನ್ನಾಗಿ ರೂಪಿಸಲು ಶ್ರಮಿಸುವುದು ನಮ್ಮ ಗುರಿಯಾಗಲಿ, ಮಕ್ಕಳು ಪರಿಣಾಮಕಾರಿಯಾಗಿ ಕಲಿಯುವಂತಹ ನವೀನ ಪ್ರಯೋಗಗಳು ನಮ್ಮಿಂದ ಮೂಡಿಬರಲಿ. ಹೊಸ ಹೊಸ ವಿಚಾರಗಳ ಬಗ್ಗೆ ಅಧ್ಯಯನ ಕೂಡ ಅವಶ್ಯಕ,ಹಲವು ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಸದಾ ಶ್ರಮಿಸಬೇಕಿದೆ. ಇಲಾಖೆ ಈಗ ರಾಷ್ಟ್ರೀಯ ನೀತಿ ಜಾರಿಯಲ್ಲಿ ನಾವಿದ್ದೇವೆ. ಅದರ ಅನುಷ್ಠಾನದಲ್ಲಿ ನಮ್ಮ ಪಾತ್ರ ಮಹತ್ವದ್ದಾಗಿದೆ. ಆ ದಿಸೆಯಲ್ಲಿ ಯೋಚಿಸೋಣ. ಅನುಷ್ಠಾನವನ್ನು ಸಮರ್ಪಕವಾಗಿ ಮಾಡೋಣ ಎನ್ನುತ್ತ ತನ್ನ ತಾ ತಿಳಿದ ಮೇಲೆ ಇನ್ನೇನು ಇನ್ನೇನು ಎಂಬ ನಿಜಗುಣ ಶಿವಯೋಗಿಗಳ ನುಡಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಶೈಕ್ಷಣಿಕ ವೃತ್ತಿಯನ್ನು ಮಾಡೋಣ ತಮಗೆಲ್ಲ ಶಿಕ್ಷಕ ದಿನಾಚರಣೆಯ ಈ ಸಂದರ್ಭದಲ್ಲಿ ಸಮಸ್ತ ಗುರು ಬಳಗಕ್ಕೆ ಶುಭಾಶಯಗಳನ್ನು ಕೋರುವೆ.
ವೈ.ಬಿ.ಕಡಕೋಳ, ಬಿ.ಐ.ಇ.ಆರ್.ಟಿ ಮಾರುತಿ ಬಡಾವಣೆ, ಶಿಂದೋಗಿ ಕ್ರಾಸ್, ಮುನವಳ್ಳಿ ಮುನವಳ್ಳಿ-591117 ತಾಲೂಕ;ಸವದತ್ತಿ ಜಿಲ್ಲೆ; ಬೆಳಗಾವಿ