ಶ್ರಾವಣ ಮಾಸದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಸಂಪನ್ನ

ರಂಭಾಪುರಿ ಪೀಠ (ಬಾಳೆಹೊನ್ನೂರು): ಶ್ರಾವಣ ಮಾಸದ ಅಂಗವಾಗಿ ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠದಲ್ಲಿ ಕೈಕೊಂಡ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳ30ನೇ ವರ್ಷದ ಇಷ್ಟಲಿಂಗ ಪೂಜಾ ತಪೋನುಷ್ಠಾನ ಹಾಗೂ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಕಾರ್ಯಕ್ರಮಗಳು ಸಪ್ಟಂಬರ್ ೭ರಂದು ಅಮವಾಸ್ಯೆ ಪರ್ವ ಕಾಲದಲ್ಲಿ ಸಂಪನ್ನಗೊ0ಡವು.

ಒಂದು ತಿಂಗಳ ಕಾಲ ಶ್ರೀ ರಂಭಾಪುರಿ ಪೀಠದ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು, ವಿಧಿವತ್ತಾಗಿ ನಡೆದ ಪೂಜಾ ಕಾರ್ಯಗಳು ಜನಮನದ ಮೇಲೆ ಆಗಾಧ ಪರಿಣಾಮವನ್ನು ಬೀರಿದವು. ದಿನ ನಿತ್ಯ ಜಗದ್ಗುರುಗಳು ರುದ್ರಾಕ್ಷಿ ಕಿರೀಟ ಧರಿಸಿ ಇಷ್ಟಲಿಂಗ ಪೂಜೆ ನೆರವೇರಿಸಿದ ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು.

ಶ್ರೀ ಜಗದ್ಗುರು ರೇಣುಕಾಚಾರ್ಯರು, ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ, ಶ್ರೀ ಸೋಮೇಶ್ವರ ದೇವಸ್ಥಾನ, ಚೌಡೇಶ್ವರಿ, ಭದ್ರಕಾಳಿ, ಪಾರ್ವತಿ ಹಾಗೂ ಲಿಂಗೈಕ್ಯ ಶ್ರೀ ರಂಭಾಪುರಿ ಜಗದ್ಗುರುಗಳ ಗದ್ದುಗೆಗೆ ವಿಶೇಷ ಪೂಜೆಗಳು ನೆರವೇರಿದವು. ಬೆಳಿಗ್ಗೆ ಇಷ್ಟಲಿಂಗ ಪೂಜಾ ನೆರವೇರಿಸಿ ಸಾಯಂಕಾಲ ಶ್ರೀ ಪೀಠದ ಸಭಾಂಗಣದಲ್ಲಿ ಶ್ರೀ ಜಗದ್ಗುರು ರೇಣುಕ ವಿಜಯ ಪುರಾಣ ಪ್ರವಚನ ಕಾರ್ಯಗಳು ಮಂಗಲಗೊ0ಡವು.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಮನುಷ್ಯನಲ್ಲಿ ಮನೆ ಮಾಡಿರುವ ಅಜ್ಞಾನ ದೂರವಾಗಿ ಜ್ಞಾನ ಸಂವರ್ಧಿಸಲಿ. ಉದಾತ್ತ ಮಾನವೀಯ ಮೌಲ್ಯಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು. ಸ್ವಧರ್ಮ ನಿಷ್ಠೆ ಮತ್ತು ಪರಧರ್ಮ ಸಹಿಷ್ಣುತೆ, ರಾಷ್ಟಾçಭಿಮಾನ ಎಲ್ಲರಲ್ಲಿ ಬೆಳೆದು ಬರಲೆಂದು ಹಾರೈಸಿದ ಜಗದ್ಗುರುಗಳು ವಿಶ್ವ ಧರ್ಮದ ವಿಭು ಶ್ರೀ ಜಗದ್ಗುರು ರೇಣುಕಾಚಾರ್ಯರು ಸಮಾಜದಲ್ಲಿ ಶಾಂತಿ ಸಾಮರಸ್ಯ ಮತ್ತು ಸೌಹಾರ್ದತೆ ಬೆಳೆದು ಬರಲು ಕೊಟ್ಟ ಸಂದೇಶ ಎಲ್ಲರ ಬಾಳಿಗೆ ಬೆಳಕು ಮೂಡಿಸುತ್ತಿವೆ ಎಂದರು.
ಶ್ರಾವಣ ತಿಂಗಳ ಕಾಲ ಪುರಾಣ ಪ್ರವಚನ ಮಾಡಿದ ಬಬಲಾದ ಹಿರೇಮಠದ ದಾನಯ್ಯ ದೇವರಿಗೆ ರೇಶ್ಮೆ ಶಾಲು ಫಲ ಪುಷ್ಪವಿತ್ತು ಶುಭ ಹಾರೈಸಿದರು.

ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಬದುಕಿ ಬಾಳುವ ಮನುಷ್ಯನಿಗೆ ಧರ್ಮ ಪರಿಪಾಲನೆ ಅವಶ್ಯಕತೆಯಿದೆ. ಶಾಂತಿ ನೆಮ್ಮದಿಯ ಬದುಕಿಗೆ ಧರ್ಮವೇ ಮೂಲ ಎಂದರು. ಒಂದು ತಿಂಗಳ ಕಾಲ ಸೇವೆಗೈದ ಉಟಗಿ ಶಿವಪ್ರಸಾದ ದೇವರು, ಬೀದರ ಘನಲಿಂಗ ದೇವರು, ರೇವತ್‌ಗಾಂವ ವಿಶ್ವನಾಥ ದೇವರು, ಗಂಗಾಧರಸ್ವಾಮಿ, ಗದಿಗೆಯ್ಯ ಹಿರೇಮಠ, ಬಸಯ್ಯ ಶಾಸ್ತಿç, ಚನ್ನವೀರಯ್ಯ, ಶಿವಕುಮಾರ, ರವಿ ಹಾಗೂ ಶಿಕ್ಷಕ ವೀರೇಶ ಕುಲಕರ್ಣಿ ಇವರೆಲ್ಲರಿಗೂ ಜಗದ್ಗುರುಗಳು ಗುರು ರಕ್ಷೆಯಿತ್ತು ಶುಭ ಹಾರೈಸಿದರು. ದಿನ ನಿತ್ಯ ಬರುವ ಭಕ್ತ ಸಂಕುಲಕ್ಕೆ ಅನ್ನ ದಾಸೋಹ ವ್ಯವಸ್ಥೆ-ವಸತಿ ವ್ಯವಸ್ಥೆ ಕಲ್ಪಿಸಿಕೊಟ್ಟ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಶ್ರಾವಣ ತಿಂಗಳ ಕಾಲ ಪುರಾಣ ಪ್ರವಚನ ಮಾಡಿದ ಬಬಲಾದ ಹಿರೇಮಠದ ದಾನಯ್ಯ ದೇವರಿಗೆ
ಶ್ರೀ ರಂಭಾಪುರಿ ಜಗದ್ಗುರುಗಳು ರೇಶ್ಮೆ ಶಾಲು ಫಲ ಪುಷ್ಪವಿತ್ತು ಶುಭ ಹಾರೈಸಿದರು.

ವರದಿ: ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊ

Related Articles

ಪ್ರತಿಕ್ರಿಯೆ ನೀಡಿ

Latest Articles