ಬೆಂಗಳೂರು: ನಗರದ ಕೆಂಗೇರಿ ಉಪನಗರದಲ್ಲಿರುವ ಶ್ರೀ ಶಾರದಾಂಬಾ ದೇವಾಲಯ (ಶಂಕರ ಮಠ)ದಲ್ಲಿ ಅಕ್ಟೋಬರ್ 6ರಿಂದ 15 ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ಪ್ರಯುಕ್ತ ವಿವಿಧ ದೇವಿಗೆ ಅಲಂಕಾರ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅ.6ರಂದು ಶ್ರೀ ಶಾರದಾ ಪರಮೇಶ್ವರಿಗೆ ಮಹಾಭಿಷೇಕ, ಜಗತ್ ಪ್ರಸೂತಿಕ ಅಲಂಕಾರ.
ಅ.7ರಂದು ಬ್ರಾಹ್ಮೀ ಅಲಂಕಾರ (ಹಂಸವಾಹಿನಿ), ಸಂಜೆ 5.30 ಕ್ಕೆ ಶರನ್ನವರಾತ್ರಿ ಕಾರ್ಯಕ್ರಮಗಳ ಉದ್ಘಾಟನೆ. ಉದ್ಘಾಟಕರು:ಪ್ರೊ.ಎಚ್.ಎಸ್.ಲಕ್ಷ್ಮೀನಾರಾಯಣ ಭಟ್ಟ.
ಅ.8ರಂದು ಮಾಹೇಶ್ವರಿ ಅಲಂಕಾರ (ಬವೃಷಭ ವಾಹಿನಿ) ಸಂಜೆ 5.30ಕ್ಕೆ ಸುಮಂಗಲಿಯರಿ0ದ ಸಾಮೂಹಿಕ ಲಲಿತಾ ಸಹಸ್ರನಾಮಪೂರ್ವಕ ಕುಂಕುಮಾರ್ಚನೆ.
ಅ. 9ರಂದು ಕೌಮಾರಿ ಅಲಂಕಾರ (ಮಯೂರ ವಾಹಿನಿ) ಸಂಜೆ 5.30 ಕ್ಕೆ ಶ್ವೇತ ಮಿನು ಮತ್ತು ತಂಡದವರಿ0ದ ಭಕ್ತಿಗೀತೆಗಳ ಗಾಯನ.
ಅ.11ರಂದು ಜಗನ್ಮೋಹಿನಿ ಅಲಂಕಾರ ಸಂಜೆ ಭಕ್ತಿಗೀತೆಗಳ ಗಾಯನ, ಶಶಿಧರ್ ಮತ್ತು ತಂಡದವರಿ0ದ.
ಅ.೧೧ರಂದು ವೈಷ್ಣವಿ ಅಲಂಕಾರ, ಸಂಜೆ 5.30ಕ್ಕೆ ವಿದುಷಿ ಸಾವಿತ್ರಿ ಸತ್ಯೇಂದ್ರ ತುಮಕೂರು ಅವರಿಂದ ಗಮಕ ಕಾವ್ಯವಾಚನ. ವಿಷಯ: ಕುಮಾರ ವ್ಯಾಸ ಭಾರತದ ಶಬರ ಶಂಕರ ವಿಲಾಸ. ವ್ಯಾಖ್ಯಾನ: ವಿದ್ವಾನ್ ಶ್ರೀ ಗುರುಪ್ರಸಾದ್ ದೇಸಾಯಿ.
ಅ.12: ವೀಣಾ ಸರಸ್ವತಿ ಅಲಂಕಾರ, ಸಂಜೆ 5.30ಕ್ಕೆ ವಿದುಷಿ ಚೇತನ ಮತ್ತು ವಿದುಷಿ ಲಲಿತ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.
ಅ.13ರಂದು ಸಿಂಹವಾಹಿನಿ ಅಲಂಕಾರ, ಬೆಳಗ್ಗೆ 9 ಗಂಟೆಗೆ ಚಂಡಿಕಾ ಹೋಮ, 12.30ಕ್ಕೆ ಪೂರ್ಣಾಹುತಿ, ಪ್ರಸಾದ ಭೋಜನ, ಸಂಜೆ 5.30 ಕ್ಕೆ ಸುಹಿತ್ ಮತ್ತು ತಂಡದವರಿ0ದ ಕರ್ನಾಟಕ ಶಾಸ್ತ್ರೀಯ ಸಂಗೀತ.
ಅ. 14 ರಂದು ರಾಜರಾಜೇಶ್ವರಿ ಅಲಂಕಾರ, ಸಂಜೆ 5.30ಕ್ಕೆ ಕು.ಕೀರ್ತನಾ ಕೆ.ಎಂ. ಅವರಿಂದ ಸುಗಮ ಸಂಗೀತ, ವಯೋಲಿನ್: ಅಖಿಲಾ ಕೆ.ಎಂ, ತಬಲ: ನಿರಂಜನ್ ಆರ್.