‘ಮಹಾಭಾರತ ಕಥಾ’ ಮಕ್ಕಳಿಗಾಗಿ ಆನ್‌ಲೈನ್ ತರಗತಿ

ಬೆಂಗಳೂರು: ವಿಭು ಅಕಾಡೆಮಿ ಬೆಂಗಳೂರು ಮಕ್ಕಳಿಗಾಗಿ ಆನ್‌ಲೈನ್ ಮೂಲಕ ‘ಮಹಾಭಾರತ ಕಥಾ’ ಎಂಬ ಆನ್‌ಲೈನ್ ತರಗತಿ (20 ಕ್ಲಾಸ್) ಹಮ್ಮಿಕೊಂಡಿದೆ.
ಸಂಸ್ಕೃತ ಮತ್ತು ಭಾರತೀಯಶಾಸ್ತ್ರಗಳಲ್ಲಿ ಪರಿಣಿತರಾಗಿರುವ ಡಾ.ಆರತೀ ವಿ.ಬಿ ತರಗತಿ ನಡೆಸಿಕೊಡಲಿದ್ದಾರೆ. 5ರಿಂದ 13 ವರ್ಷದೊಳಗಿನ ಮಕ್ಕಳಿಗೆ ಈ ತರಗತಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಡಿಸೆಂಬರ್ 16ರ ಒಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ತರಗತಿಗಳು ಡಿಸೆಂಬರ್ 18ರಿಂದ ಆರಂಭಗೊಳ್ಳಲಿದ್ದು ಪ್ರತಿ ಶನಿವಾರ ಮತ್ತು ಭಾನುವಾರ 4.30 ರಿಂದ 5 ಗಂಟೆಯವರೆಗೆ ನಡೆಯಲಿದೆ.
ಹೆಚ್ಚಿನ ಮಾಹಿತಿಗೆ: 9480318113/ 9611131760.

Related Articles

ಪ್ರತಿಕ್ರಿಯೆ ನೀಡಿ

Latest Articles