ಭಾರತೀಯ ಕಲೆ-ಸಂಸ್ಕೃತಿಗಳಲ್ಲಿ ಆಸಕ್ತಿಯಿರುವ ಪ್ರತಿಯೊಬ್ಬರೂ ಓದಲೇಬೇಕಾದ ಗ್ರಂಥ: *ಭರತನಾಟ್ಯ ದಿಗ್ದರ್ಶನ*. ಇದು ಕೇವಲ ವಿದ್ಯಾರ್ಥಿಗಳಿಗೆ, ಕಲಾವಿದರಿಗೆ ಸೀಮಿತವಾದ ಗ್ರಂಥವಲ್ಲ. ಭಾರತೀಯ ಕಲಾಪ್ರಕಾರಗಳೆಲ್ಲವೂ ಅಧ್ಯಾತ್ಮ ತಳಹದಿಯ ಮೇಲೆ ವಿಕಾಸಗೊಂಡಂಥವು. ನಮ್ಮ ಮಟ್ಟಿಗೆ ಕಲೆಯೆಂಬುದು ಭಗವಂತನ ಆರಾಧನೆಯ, ಆತ್ಮವಿಕಾಸದ ಹಲವು ಮಾರ್ಗಗಳಲ್ಲಿ ಒಂದು. ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಇದು. ಈ ದೃಷ್ಟಿ ಭಾರತೀಯ ಕಲೆಗಳನ್ನು ಆಸ್ವಾದಿಸುವವನಲ್ಲೂ ಇರಬೇಕಾದದ್ದು. ಹಾಗಾಗಿ ಕಲಾವಿದರಷ್ಟೇ ಅಲ್ಲದೆ, ಕಲೆಗಳನ್ನು ಕುರಿತು ಆಸಕ್ತಿ ಇರುವ ಪ್ರತಿಯೊಬ್ಬರೂ ಈ ಗ್ರಂಥವನ್ನು ಓದಬೇಕು. ಈ ಗ್ರಂಥದ ಮುನ್ನುಡಿಯಲ್ಲಿ ಹೇಳಿರುವಂತೆ, "ಆಳವಾದ ಹಾಗೂ ಭದ್ರವಾದ ಬೇರುಗಳಿಲ್ಲದ ಯಾವ ಕಲೆಯೂ ದೀರ್ಘಕಾಲ ಬದುಕಲಾರದು. ಭರತನಾಟ್ಯದ ಮೂಲದ, ಹಾಗೂ ಸಂಪ್ರದಾಯದ ಪರಿಚಯ ಕಲಾಕಾರರಿಗೆ ಮಾತ್ರವಲ್ಲದೆ ಪ್ರೇಕ್ಷಕರಿಗೂ ಪ್ರಯೋಜನಕರ; ಈ ಕಲೆಯ ಆಸ್ವಾದಕ್ಕೆ ಸಹಕಾರಿ. ಒಂದುಕಡೆ ಭರತನಾಟ್ಯ ಕಲಾವಿದರ ಆತ್ಮವೀಕ್ಷಣೆಗೆ ಚೋದಕವಾಗುವಂತೆ, ಇನ್ನೊಂದು ಕಡೆ ರಸಿಕರ ಅಭಿರುಚಿಯ ವರ್ಧನೆಗೂ ಈ ಗ್ರಂಥ ನೆರವಾದೀತೆಂದು ನಮ್ಮ ಆಶಯ." ರೂ. 4೦೦.೦೦ ಮುಖಬೆಲೆಯ, *ಭರತನಾಟ್ಯ ದಿಗ್ದರ್ಶನದ* ನಿಮ್ಮ ಪ್ರತಿಯನ್ನು ಖರೀದಿಸಲು WhatsApp ಮಾಡಿ: 7483681708