ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ಇವುಗಳ ಸಂಯುಕ್ತಾಶ್ರಯದಲ್ಲಿ, ಶ್ರೀ 108 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶದೊಂದಿಗೆ, ಮಠದ ಹಿರಿಯ ವ್ಯವಸ್ಥಾಪಕರಾದ ಶ್ರೀ ಆರ್ ಕೆ ವಾದೀಂದ್ರಾಚಾರ್ ಅವರ ನೇತೃತ್ವದಲ್ಲಿ, ಡಿಸೆಂಬರ್ 28 ರಿಂದ 31ರ ವರೆಗೆ ಸಂಜೆ 6 ಗಂಟೆಯಿಂದ “ಭಜನೆ, ಪ್ರವಚನ ಮತ್ತು ಹರಿನಾಮ ಸಂಕೀರ್ತನೆ” ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು.
ಡಿಸೆಂಬರ್28: ಸಂಜೆ 6 ಗಂಟೆಗೆ ಶ್ರೀ ಕುಮಾರಸ್ವಾಮಿ ಬಡಾವಣೆಯ ಶ್ರೀ ವೇದವ್ಯಾಸ ಭಜನಾ ಮಂಡಳಿಯವರಿಂದ ಭಜನೆ, 7 ಗಂಟೆಗೆ ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ ಇವರಿಂದ “ಕಲಿಯುಗ ಕಲ್ಪತರು'” ವಿಷಯವಾಗಿ ಪ್ರವಚನ.
ಡಿಸೆಂಬರ್29 : ಸಂಜೆ 6 ಗಂಟೆಗೆ ಪದ್ಮನಾಭನಗರದ ಪದ್ಮಾವತಿ ಭಜನಾ ಮಂಡಳಿಯವರಿಂದ ಭಜನೆ, 7 ಗಂಟೆಗೆ ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ ಇವರಿಂದ “ಕಲಿಯುಗ ಕಲ್ಪತರು” ವಿಷಯವಾಗಿ ಪ್ರವಚನ.
ಡಿಸೆಂಬರ್30: ಸಂಜೆ 7-30ಕ್ಕೆ ಅನುಷಾ ರಾಘವೇಂದ್ರ ಇವರಿಂದ “ಹರಿನಾಮ ಸಂಕೀರ್ತನೆ” ವಾದ್ಯ ಸಹಕಾರ : ಶ್ರೀ ಶಶಿಧರ್ (ಪಿಟೀಲು), ಶ್ರೀ ವೆಂಕಟಸುಬ್ಬು (ಮೃದಂಗ).
ಡಿಸೆಂಬರ್31: ಸಂಜೆ 6 ಗಂಟೆಗೆ ಉತ್ತರಹಳ್ಳಿಯ ಶ್ರೀವಾರಿಧಿ ಭಜನಾ ಮಂಡಳಿಯವರಿಂದ ಭಜನೆ, 7 ಗಂಟೆಗೆ ಶ್ರೀ ವೇಣುಗೋಪಾಲಾಚಾರ್ ಅಗ್ನಿಹೋತ್ರಿ ಇವರಿಂದ “ಕಲಿಯುಗ ಕಲ್ಪತರು” ವಿಷಯವಾಗಿ ಪ್ರವಚನ.
ಕಾರ್ಯಕ್ರಮ ನಡೆಯುವ ಸ್ಥಳ : ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 11ನೇ ಮುಖ್ಯರಸ್ತೆ, 45ನೇ ಅಡ್ಡರಸ್ತೆ, 5ನೇ ಬಡಾವಣೆ ಜಯನಗರ.