ಪ್ರಕೃತಿ ಮಾತೆಯ ಮಡಿಲಲ್ಲಿ ನೆಲೆನಿಂತ ದೇವಿ ಶ್ರೀ ಮಹಿಷ ಮರ್ದಿನಿ

ಫೋಟೋ: ಕುಂಟಿಕಾನ ಪ್ರಸಾದ್ ಕುಮಾರ್

ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಮಠಂತಬೆಟ್ಟು ಎಂಬ ನಿಸರ್ಗ ತಾಣದಲ್ಲಿ ’ಮಹಿಷಮರ್ದಿನಿ’ ಗ್ರಾಮದೇವತೆಯ ಪ್ರಾಚೀನ ಗುಡಿ ಇದೆ. ದ.ಕ.ಜಿಲ್ಲೆಯ ಪ್ರಾಚೀನ ದೇವಸ್ಥಾನಗಳ ಸಂಶೋಧನಾ ಗ್ರಂಥದಲ್ಲಿ ಡಾ|ಗುರುರಾಜ ಭಟ್ ಮತ್ತು ಡಾ|ಲೀಲಾವತಿ ಭಟ್ ರವರು ಇದನ್ನು ಸುಮಾರು ಒಂದು ಸಾವಿರ ವರ್ಷಗಳಷ್ಟು ಪ್ರಾಚೀನವಾದುದೆಂದು ಉಲ್ಲೇಖಿಸಿದ್ದಾರೆ.

ಈ ದೇಗುಲವು ರಾಜತುಲ್ಯವಾದ ಅನುಪವೀತಯಾದವರಿಂದ ನಿರ್ಮಿಸಲ್ಪಟ್ಟಿರಬೇಕು.ಇದಕ್ಕೆ ಉಂಬಳಿ ಭೂಮಿ ಇತ್ತು. ಆದ್ದರಿಂದ ಇಲ್ಲಿ ನಿತ್ಯಪೂಜೆ ವಿಶೇಷ ಉತ್ಸವ ಜಾತ್ರೆಗಳು ನಡೆಯುತ್ತಿದ್ದವು ಎನ್ನಲಾಗಿದೆ. ಇಲ್ಲಿ ಒಂದು ಮಠಶಾಲೆಯೂ ಇದ್ದು ಜನರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇತ್ತೆಂದು ಕಂಡುಬಂದಿದೆ. ಈ ಕಾರಣದಿಂದಲೇ ಮಠಂತಬೆಟ್ಟು ಎಂಬ ಹೆಸರು ಬಂದಿರಬಹುದೆಂದು ಊಹಿಸಲಾಗಿದೆ .

ಬೆಟ್ಟು(ಒಂದು ಬೆಳೆ ಬೆಳೆಯುವ)ಗದ್ದೆಗಳ ಊರಿನಲ್ಲಿ ಈ ವೇದಾಧ್ಯಯನದ ಮಠದಲ್ಲಿ ಶ್ರೀ ಮಹಿಷಮರ್ದಿನಿಯನ್ನು ಪೂಜಿಸುತ್ತಿದ್ದರು. ಕಾಲಕ್ರಮೇಣ ಮಠ ನಡೆಸುವ ಮನೆಯವರು ನಿಸ್ಸಂತಾನ ಹೊಂದಿದ್ದರಿಂದ ಮುಂದೆ ಜೈನರಾಜರ ಆಳ್ವಿಕೆಯಲ್ಲಿ ರಾಜರ ಸಹಕಾರದೊಂದಿಗೆ ಊರವರು ಮಹಿಷಮರ್ದಿನಿಯನ್ನು ಈಗಿರುವ ಸ್ಥಳದಲ್ಲಿ ನೆಲೆಗೊಳಿಸಿದರು. 

ಪೂಜಾ ಸಮಯ

ಬೆಳಗ್ಗೆ ಗಂಟೆ 8.00
ಮಧ್ಯಾಹ್ನ ಗಂಟೆ 12.00
ರಾತ್ರಿ ಗಂಟೆ 7.00

  • ಪ್ರತಿ ಶುಕ್ರವಾರ ದೇವಳದಲ್ಲಿ ರಾತ್ರಿ ಗಂಟೆ 7.00ರಿಂದ ಭಜನಾ ಸೇವೆ ನಡೆಯುತ್ತದೆ
  • ಪ್ರತಿ ತಿಂಗಳ ಸಂಕ್ರಮಣದಂದು ರಾತ್ರಿ ಗಂಟೆ 8.00ರಿಂದ ಸಂಕ್ರಾಂತಿ ಪೂಜೆಯು ಗ್ರಾಮದ ಬೈಲುವಾರು ಸೇವೆಯಾಗಿ ಜರಗುತ್ತಿರುವುದು.

Related Articles

1 COMMENT

  1. ಯಾ ದೇವೀ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈನಮಸ್ತಸ್ಮೈ ನಮೋನಮಃ
    ಇಷ್ಟೊಂದು ವಿಷಯ ಸಮುಚ್ಚಯಿಸಿ ಮಾಧ್ಯಮದಲ್ಲಿ ಪರಿಚಯಿಸಿದ ನಿಮಗೆ 🙏

ಪ್ರತಿಕ್ರಿಯೆ ನೀಡಿ

Latest Articles