ಸಂಕ್ರಾಂತಿ ಹಬ್ಬ ಸಡಗರದ ಹಬ್ಬ ಸಂತೋಷದಿ ಎಳ್ಳು ಬೆಲ್ಲ ಹಂಚುವ ಹಬ್ಬ ಚೆಂದದಿ ಎಲ್ಲರು ಬೆರೆವ ಸ್ನೇಹ ಹೆಚ್ಚಿಸೊ ಹಬ್ಬ ಅಂದದ ಸಕ್ಕರೆ ಅಚ್ಚು ನೀಡುವ ಹಬ್ಬ ಕಬ್ಬು ಬಾಳೆಹಣ್ಣು ಎಲ್ಲರಿಗು ಕೊಡುತ ತಬ್ಬುವ ಕಷ್ಟ ಸುಖವ ಹೆದರದೆ ಎನುತ ಕಬ್ಬಿನಂತೆ ಸಿಹಿಯಾದ ಮಾತನ್ನು ಆಡುತ ಅಬ್ಬರವಿಲ್ಲದೆ ಬಾಳುವ ಎಂದು ಸಾರುತ ಸುಗ್ಗಿಯ ಸಂಭ್ರಮದಿಂದ ನಲಿದಾಡುತ ಹುಗ್ಗಿ ನೈವೇದ್ಯವ ದೇವರಿಗಿಡುತ ಹಿಗ್ಗಿಹಿಗ್ಗಿ ಮಕ್ಕಳೆಲ್ಲ ಆಟವಾಡುತ ಬಗ್ಗಿ ಭೂತಾಯಿಗೆ ನಮನ ಸಲಿಸುತ ಒಳ್ಳೆಮಾತನಾಡಿ ಎಂಬ ಸಂದೇಶ ಸಾರುತ ಎಳ್ಳಿನ ಕಹಿ ಸಹಿಸಿದಾಗ ಬೆಲ್ಲದ ಸಿಹಿ ಎನ್ನುತ ಬೆಳ್ಳನೆ ಕಡಲೆಕಾಯಿ ಕೊಬ್ಬರಿಯ ಸವಿಯುತ ಸುಳ್ಳು ಕಪಟ ಬಿಟ್ಟು ಸಿರಿಹರಿಯ ಒಲಿಸುತ
- ರೂಪಶ್ರೀ ಶಶಿಕಾಂತ್, ದಾವಣಗೆರೆ