ಪ್ರಬೋಧಿನೀ ಗುರುಕುಲ ಶಿಕ್ಷಣ, ಪ್ರವೇಶಕ್ಕೆ ಅರ್ಜಿ ಆಹ್ವಾನ

ಚಿಕ್ಕಮಗಳೂರು: ಪ್ರಬೋಧಿನೀ ಗುರುಕುಲದಲ್ಲಿ 2022-2023 ನೇ ಶೈಕ್ಷಣಿಕ ವರ್ಷದಲ್ಲಿ ಅಧ್ಯಯನ ಮಾಡಬಯಸುವ ಗಂಡುಮಕ್ಕಳಿಗೆ ಅರ್ಜಿಗಳು ದೊರೆಯುತ್ತಿದ್ದು, ಆಸಕ್ತರು ಪ್ರಬೋಧಿನೀ ಗುರುಕುಲದ ವಿಳಾಸಕ್ಕೆ M.O ಕಳುಹಿಸುವ ಮೂಲಕ ಅರ್ಜಿಯನ್ನು ಪಡೆಯಬೇಕಾಗಿ ಈ ಮೂಲಕ ತಿಳಿಸಲಾಗಿದೆ.

ಗುರುಕುಲ ಶಿಕ್ಷಣ ಯಾರಿಗೆ ಮತ್ತು ಹೇಗೆ?

• ಪ್ರಸ್ತುತ 5 ನೇ ತರಗತಿ ಪರೀಕ್ಷೆ ಬರೆಯಲಿರುವ 11 ವರ್ಷತುಂಬಿದ ಗಂಡುಮಕ್ಕಳಿಗೆ

ಪ್ರವೇಶ .

• ಗುರುಕುಲದ ಒಟ್ಟು ಕಲಿಕೆಯ ಅವಧಿ 12 ವರ್ಷಗಳು.

• ತಂದೆ, ತಾಯಿ ಹಾಗೂ ವಿದ್ಯಾರ್ಥಿಯ ಸಂದರ್ಶನ ಮಾಡಲಾಗುತ್ತದೆ.

• ವೇದ, ವಿಜ್ಞಾನ, ಯೋಗ, ಕೃಷಿ ಮತ್ತು ಕಲಾ ಎಂಬ ಪಂಚಮುಖೀ ಶಿಕ್ಷಣ ವ್ಯವಸ್ಥೆ.

• ಆರ್ಷ ಪರಂಪರೆಯ ಅಧ್ಯಾತ್ಮ ಆಧಾರಿತ ಶಿಕ್ಷಣದೊಂದಿಗೆ, ಗಣಿತ, ವಿಜ್ಞಾನ, ಇತಿಹಾಸದ ಶಿಕ್ಷಣ.

• ಸಂಸ್ಕೃತದಲ್ಲಿ ದೈನಂದಿನ ವ್ಯವಹಾರ ಮತ್ತು ಶಾಸ್ತ್ರೀಯ ಅಧ್ಯಯನಕ್ಕೆ ಒತ್ತು.

• ಕನ್ನಡದೊಂದಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳ ಕಲಿಕೆಗೆ ಸೂಕ್ತ ಅವಕಾಶ.

• ಶಿಕ್ಷಣದೊಂದಿಗೆ ಆಹಾರ ಮತ್ತು ವಸತಿ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕ 31-03-2022.

M.O ಕಳುಹಿಸಬೇಕಾದ ವಿಳಾಸ ವ್ಯವಸ್ಥಾಪಕರು, ಪ್ರಬೋಧಿನೀ ಗುರುಕುಲ, ಚಿತ್ರಕೂಟ, ಅದ್ದಡ ಗ್ರಾಮ, ಹರಿಹರಪುರ ಅಂಚೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ- 577120.

ಸಂಪರ್ಕಕ್ಕೆ : 9845071185. (ಬೆಳಗ್ಗೆ 10 ರಿಂದ ಸಂಜೆ 6 ರ ವರೆಗೆ)

Email : [email protected] www.prabodhinigurukula.org

Related Articles

ಪ್ರತಿಕ್ರಿಯೆ ನೀಡಿ

Latest Articles