ಮುಳಬಾಗಿಲು: ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ಮಾಧ್ವ ಮಠಗಳಲ್ಲಿ ಒಂದಾದ ಕೋಲಾರ ಮುಳಬಾಗಿಲಿನ ಶ್ರೀ ಪದ್ಮನಾಭ ತೀರ್ಥ ಸಂಸ್ಥಾನದ ಶ್ರೀಪಾದರಾಜ ಮಠದ ಯತಿಗಳಾಗಿದ್ದ ಶ್ರೀ ಶ್ರೀ ಕೇಶವ ನಿಧಿ ತೀರ್ಥ ಶ್ರೀಪಾದರು ಜನವರಿ 28 ರಂದು ಮುಂಜಾನೆ ಹರಿಪಾದ ಸೇರಿದರು. ಅವರ ಬೃಂದಾವನ ಕಾರ್ಯ ಮಧ್ಯಾಹ್ನ 02.00 ಘಂಟೆಗೆ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಹೊರವಲಯದಲ್ಲಿ ಇರುವ ನರಸಿಂಹ ತೀರ್ಥ ಕ್ಷೇತ್ರದಲ್ಲಿ ನೆರವೇರಿಸಲಾಗುವುದು ಎಂದು ಕಿರಿಯ ಶ್ರೀಗಳಾದ ಶ್ರೀ ಸುಜಯ ನಿಧಿ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

























