‘ಪುರಂದರ ನಮನ’ ಪ್ರಶಸ್ತಿ ಪ್ರಕಟ, ಫೆ. 5ರಂದು ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು: ದಾಸವಾಣಿ ಸಂಸ್ಥೆ , ಬೆಂಗಳೂರು ಇವರು ಪ್ರತಿವರ್ಷ ಶ್ರೀ ಪುರಂದರ ದಾಸರ ಆರಾಧನೆ ಪ್ರಯುಕ್ತ ಹರಿದಾಸ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಲಾವಿದರನ್ನು ಗುರುತಿಸಿ, ಸಂಸ್ಥೆಯ ವತಿಯಿಂದ ಪ್ರತಿಷ್ಠಿತ “ಪುರಂದರ ನಮನ” ಪ್ರಶಸ್ತಿಯನ್ನು ಪ್ರದಾನ ಮಾಡುತ್ತ ಬಂದಿದೆ.

ಅದರಂತೆ ಈ ವರ್ಷವೂ ದಾಸವಾಣಿ ಸಂಸ್ಥೆಯ 2022ರ ಸಾಲಿನ ಪುರಸ್ಕೃತರ ಹೆಸರುಗಳು ಇಂತಿವೆ: *ವಿದುಷಿ ದಿವ್ಯ ಗಿರಿಧರ್ (ಕರ್ನಾಟಕ ಶಾಸ್ತ್ರೀಯ ಸಂಗೀತ – ದಾಸವಾಣಿ )

*ಮಾನಸ ಕುಲಕರ್ಣಿ (ಹಿಂದೂಸ್ತಾನಿ ಸಂಗೀತ – ದಾಸವಾಣಿ)

*ಚಂದ್ರಿಕಾ ಗಿರೀಶ್ (ದಾಸವಾಣಿ ).

5 ರಂದು ಪ್ರಶಸ್ತಿ ಪ್ರದಾನ

ಫೆಬ್ರವರಿ 5 ರಂದು ಮಲ್ಲೇಶ್ವರಂ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀ ರಾಮಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ “ಪುರಂದರ ನಮನ” ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು ಹಾಗು ಆರಾಧನೆ ಪ್ರಯುಕ್ತ ಆಯೋಜಿಸಿದ್ದ ಪುರಂದರ ದಾಸರ ಗಾಯನ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷರಾದ ಸುಧೀಂದ್ರ ದೇಸಾಯಿ ಅವರು ತಿಳಿಸಿದರು. ದಾಸವಾಣಿ ಸಂಸ್ಥಾಪಕರಾದ ಗಾಯತ್ರಿ ಕನವಳ್ಳಿ, ನಂದಿನಿ ಹಾವನೂರ್ ಮತ್ತು ಜೆ ಕೆ. ಅವರು ಉಪಸ್ಥಿತರಿದ್ದರು.

Related Articles

ಪ್ರತಿಕ್ರಿಯೆ ನೀಡಿ

Latest Articles