ಭಾಸ್ಕರನೆ ಸೂರ್ಯನೆ ತೇಜೋಮಯನೆ ಅಸಮಾನವಾಗಿ ಹೊಳೆವ ರವಿಯು ನೀನೆ ಹೊಸ ಹುರುಪಿನ ಹೊಸ ದಿನ ಹೊತ್ತು ತರುವನೆ ನಸುನಗುತ ನಮಗೆ ಶಕ್ತಿ ನೀಡುವವನೆ ಕತ್ತಲ ತಮವೆಲ್ಲ ಕಳೆವ ಜ್ಯೋತಿರ್ಮಯನೆ ಮುತ್ತಿದ ಆಲಸ್ಯ ಕಳೆವ ಚೈತನ್ಯನೆ ಸುತ್ತುವ ಭೂಮಿಗೆ ಬೆಳಕು ಜೀವ ಶಕ್ತಿ ಕೊಡುವನೆ ಉತ್ತಮೋತ್ತಮನೆ ಪ್ರತ್ಯಕ್ಷ ದೇವನೆ ಕಿರಣಗಳ ಹೊದಿಕೆ ಹೊತ್ತು ಮೂಡಣದಿ ಮೂಡುತ ಕುರುಣಾಮಯಿ ಬಂಗಾರವ ಬಾನಿಗೆ ಮೆತ್ತುತ ಅರುಣನೆ ಸಪ್ತಾಶ್ವ ರಥದಲ್ಲಿ ಮಿನುಗುತ ತರುಲತೆಗಳ ಮುಟ್ಟಿ ಆನಂದ ಹರಡುತ ಮಲಗಿದ್ದ ಜೀವಿಗಳ ಮೈದಡವಿ ಎಬ್ಬಿಸುತ ಚಿಲಿಪಿಲಿ ಹಕ್ಕಿಯ ನಾದ ಆಕಾಶದಿ ತುಂಬುತ ಜಲವನು ಹೀರುತ ಮೋಡಗಳನು ನೀ ಕಟ್ಟುತ ನೀಲ ಆಗಸದಲ್ಲಿ ವಿರಾಜಮಾನನಾಗುತ ನಮಿಸುವೆ ನಮಿಸುವೆ ಓ ಸೂರ್ಯದೇವನೆ ಅಮಿತ ಆನಂದ ಕೊಡುವ ದಿವ್ಯಾತ್ಮನೆ ಕಾಮಿತಾರ್ಥವ ನೀವ ಸೂರ್ಯನಾರಾಯಣನೆ ಸ್ವಾಮಿ ಸಿರಿಹರಿಯ ತೋರಿಸು ದೇವನೆ *ರೂಪಶ್ರೀ ಶಶಿಕಾಂತ್