ಬೆಂಗಳೂರು: ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮಪೂಜ್ಯ 108 ಶ್ರೀಶ್ರೀಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶದಂತೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್ ಕೆ ವಾದೀಂದ್ರ ಆಚಾರ್ಯರ ಮತ್ತು ಜಿ.ಕೆ ಆಚಾರ್ಯರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀಮುಖ್ಯಪ್ರಾಣ ದೇವರಿಗೆ ವಾಯುಸ್ತುತಿ ಪುನಶ್ಚರಣೆಯಿಂದ “ಮಧುಅಭಿಷೇಕ” ಶ್ರೀಗುರುರಾಯರಸ್ತೋತ್ರದಿಂದ ಗುರು ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಶ್ರೀ ಸುಮಧ್ವವಿಜಯ ಪಾರಾಯಣದೊಂದಿಗೆ ಶ್ರೀ ಜಗದ್ಗುರು ಶ್ರೀ ಮಧ್ವಾಚಾರ್ಯರ ಭಾವಚಿತ್ರಕ್ಕೆ “ಪುಷ್ಪವೃಷ್ಟಿ” ರಜತದೀಪಗಳ ಪ್ರಜ್ವಲನೆ, ವಿದ್ವಾನ್- ಕಲ್ಯಾ ನರಸಿಂಹಮೂರ್ತಿ ಆಚಾರ್ಯ ರಿಂದ ಪ್ರವಚನ, ಮತ್ತು ಶ್ರೀ ವೇದವ್ಯಾಸ ಭಜನಾ ಮಂಡಳಿ- ಕುಮಾರ ಸ್ವಾಮಿ ಲೇ ಔಟ್ ವೃಂದದವರಿಂದ”ಶ್ರೀಹರಿಭಜನೆ” ಹಾಗೂ ಶ್ರೀ ಮಧ್ವಾಚಾರ್ಯರ ಗ್ರಂಥಗಳ ಮತ್ತು ಭಾವಚಿತ್ರದೊಂದಿಗೆ ಪಲ್ಲಕ್ಕಿ ಉತ್ಸವ ಹಾಗೂ ಗಜವಾಹನೋತ್ಸವದ ಮೆರವಣಿಗೆ, ಕನಕಾಭಿಷೇಕ ಮಹಾಮಂಗಳಾರತಿ ತದನಂತರ “ಅನ್ನಸಂತರ್ಪಣೆ” ನೆರವೇರಿತು.
ಸಂಜೆ 6 ಕ್ಕೆ ಸಹಸ್ರದೀಪೋತ್ಸವ 7-30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಶ್ರೀ ಸುಧೀಂದ್ರ ದೇಸಾಯಿ ಅವರ ಸಹಕಾರದೊಂಗೆ ಕು|| ದ್ಯುತಿ ಮತ್ತು ಕು|| ಸ್ನಿಗ್ಧ (ಜಹಾಗಿರ್ದಾರ್ ಸಹೋದರಿಯರು) “ದಾಸವಾಣಿ” ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಪಕ್ಕವಾದ್ಯದಲ್ಲಿ ಶ್ರೀ ಅಮಿತ್ ಶರ್ಮಾ (ಕೀ-ಬೋರ್ಡ್), ಶ್ರೀ ಸರ್ವೋತ್ತಮ (ತಬಲಾ) ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಠದ ಸಿಬ್ಬಂದಿಗಳು ಹಾಗೂ ಭಕ್ತರು ಭಾಗವಹಿಸಿ ಶ್ರೀಹರಿವಾಯು ಗುರುಗಳ ಅನುಗ್ರಹಕ್ಕೆ ಪಾತ್ರರಾದರು ಎಂದು ನಂದಕಿಶೋರ್ ಆಚಾರ್ಯರು ತಿಳಿಸಿದರು.