ಶ್ರೀ ಗುರು ರಾಯರ-401ನೇ ಪಟ್ಟಾಭಿಷೇಕ ಮತ್ತು-427 ನೇ ಜನ್ಮದಿನೋತ್ಸವ ಮಾರ್ಚ್ 4ರಿಂದ 9ರವರೆಗೆ

ಬೆಂಗಳೂರು: ಎರಡನೇ ಮಂತ್ರಾಲಯವೆಂದೇ ಖ್ಯಾತಿ ಪಡೆದ ಜಯನಗರದ 5 ನೇ ಬಡಾವಣೆಯಲ್ಲಿರುವ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ಪರಮ ಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆದೇಶ ಮಾರ್ಗದರ್ಶನದೊಂದಿಗೆ ಶ್ರೀ ಮಠದ ಹಿರಿಯ ವ್ಯವಸ್ಥಾಪಕರಾದ ಆರ್, ಕೆ ವಾದೀಂದ್ರಾಚಾರ್ಯರ ಹಾಗೂ ಶ್ರೀ ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ಒಂದು ವಾರಗಳ ಪರಿಯಂತ ಮಾರ್ಚ್ 4 ರಿಂದ 9 ರವರೆಗೆ ಶ್ರೀ ರಾಘವೇಂದ್ರ ಸ್ವಾಮಿಗಳ 401ನೇ ಪಟ್ಟಾಭಿಷೇಕೋತ್ಸವ 427ನೇ ಜನ್ಮದಿನೋತ್ಸವದ ಸಂದರ್ಭದಲ್ಲಿ ಪೂಜಾದಿಗಳ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಪುರೋಹಿತ್ ನಂದಕಿಶೋರ್ ಆಚಾರ್ಯರು ತಿಳಿಸಿದ್ದಾರೆ.

ನಂತರ ಶ್ರೀಮಠದ ವ್ಯವಸ್ಥಾಪಕರಾದ ಆರ್. ಕೆ. ವಾದೀಂದ್ರಾಚಾರ್ಯರು ಮಾತನಾಡಿ, ರಾಯರ ಪಟ್ಟಾಭಿಷೇಕ (ಸನ್ಯಾಸ ಆಶ್ರಮ ಸ್ವೀಕರಿಸಿ) ದಿನದ ಅಂಗವಾಗಿ ಗುರುರಾಯರ ಬೃಂದಾವನಕ್ಕೆ ಮಾರ್ಚ್ 4 ರಂದು ಬೆಳಗ್ಗೆ 8 ಗಂಟೆಗೆ ಸಹಸ್ರ ಕಳಶ ಕ್ಷಿರಾಭಿಷೇಕವನ್ನು ಶ್ರೀ ವಿಷ್ಣು ಸಹಸ್ರನಾಮ, ಶ್ರೀ ವೆಂಕಟೇಶ ಸ್ತೋತ್ರ, ಶ್ರೀಹರಿ- ವಾಯುಸ್ತುತಿ, ಶ್ರೀಗುರುಸ್ತೋತ್ರ ಅಷ್ಟೋತ್ತರ ಪಾರಾಯಣದೊಂದಿಗೆ ಫಲ ಪಂಚಾಮೃತ ಅಭಿಷೇಕವೂ ನೆರವೇರಲಿದೆ, ನಂತರ ಬೆಳಗ್ಗೆ “10-30ಕ್ಕೆ ಸ್ವರ್ಣಲೇಪಿತ ಬಂಗಾರದ ಸಿಂಹಾಸನದಲ್ಲಿ ಶ್ರೀ ಗುರು ರಾಯರ ಪಾದುಕೆಯನ್ನು ಇರಿಸಿ ರಜತ ದೀಪಗಳ ಪ್ರಜ್ವಲನ ದೊಂದಿಗೆ ಹಾಗೂ ಪುಷ್ಪಗಳ ವೃಷ್ಟಿಯೊಂದಿಗೆ ಪಟ್ಟಾಭಿಷೇಕ ಮಹೋತ್ಸವದ ಕಾರ್ಯಕ್ರಮ “ಉದ್ಘಾಟನೆ”ಗೊಳ್ಳಲಿದೆ ನಂತರ ಗಜವಾಹನೋತ್ಸವ , ಸ್ವರ್ಣ ಪಲ್ಲಕ್ಕಿ ಉತ್ಸವ, ರಜತ ರಥೋತ್ಸವ, ಗುರು ರಾಯರ ಪಾದಪೂಜೆ, ಕನಕಾಭಿಷೇಕ, ಮಹಾ ಮಂಗಳಾರತಿಯು ನೆರವೇರಲಿದೆ ಎಂದರು.

ಸಂಜೆ 5 ರಿಂದ 6 ಶ್ರೀಹರಿ ಭಜನೆ, 6 ರಿಂದ 7 ವಿದ್ವಾಂಸರಿಂದ ಪ್ರವಚನ, 7-15 ರಿಂದ 9- 15 ವರೆಗೆ ಮಾ://ತ್ರೀಧಾತ್ ಶ್ರೀಧರ್ ಸಾಗರ್ ವೃಂದದವರಿಂದ ಸ್ಯಾಕ್ಸೋಫೋನ್ ವಾದನ ನೆರವೇರಲಿದೆ.

9-3-2022 ಬುಧವಾರ ರಂದು ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನೋತ್ಸವದ (ಹುಟ್ಟಿದ ಹಬ್ಬದ) ಅಂಗವಾಗಿ ಬೆಳಗ್ಗೆ 8 ಕ್ಕೆ ಶ್ರೀಗುರುರಾಯರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ ವಿಶೇಷವಾಗಿ ಬೆಳಗ್ಗೆ 10:30ಕ್ಕೆ “ಲಕ್ಷ ಪುಷ್ಪಾರ್ಚನೆ” ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಶ್ರೀ ಹರಿ ವಾಯುಸ್ತುತಿ ಪಾರಾಯಣ ಶ್ರೀ ರಾಘವೇಂದ್ರ ಅಷ್ಟೋತ್ತರ ವನ್ನು “ಲಕ್ಷಾವರ್ತಿ ಶ್ರೀಹರಿ ವಾಯುಸ್ತುತಿ ಪಾರಾಯಣ ಸಮಿತಿ” ಸಂಘದ ಶ್ರೀ ವೇಣು ಗೋಪಾಲರವರ ವೃಂದದ ನೇತೃತ್ವದಲ್ಲಿ ವಿಶೇಷ ಪಾರಾಯಣದೊಂದಿಗೆ ಲಕ್ಷ ಪುಷ್ಪಾರ್ಚನೆ.

ಉತ್ಸವ, ಕನಕಾಭಿಷೇಕ ಮಹಾ ಮಂಗಳಾರತಿ 1 ಗಂಟೆಗೆ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ , ಸಂಜೆ 5 ರಿಂದ ಶ್ರೀ ಹರಿ ಭಜನೆ, 6 ರಿಂದ 7 ವರಗೆ ಪ್ರವಚನ, 7- 15 ರಿಂದ 9 -15 ರವರೆಗೆ ಶ್ರೀಮತಿ ವಿದುಷಿ- ಅಪೂರ್ವಆನಂದ್ ವೃಂದದವ ರಿಂದ. “ದಾಸವಾಣಿ” ಕಾರ್ಯಕ್ರಮವು ನೆರವೇರಲಿದೆ, ಈ ಒಂದು ವಾರಗಳ ಕಾಲ ಪ್ರತಿನಿತ್ಯ ಬೆಳಗ್ಗೆ 8 ಗಂಟೆಗೆ ಹೋಮಗಳು ಹಾಗೂ ವಿಶೇಷ ನೂತನ ವಸ್ತ್ರ ಸಮರ್ಪಣೆ , ಹೂವಿನ ಅಲಂಕಾರ,ನಾನಾವಿಧ ಉತ್ಸವಗಳು, ಅನ್ನಸಂತರ್ಪಣೆ ಜ್ಞಾನ ಯಜ್ಞ ದೀಪೋತ್ಸವ ಪ್ರವಚನವು ನೆರವೇರಲಿದೆ ಗುರುರಾಯರ ಹುಟ್ಟಿದ ಹಬ್ಬದ ಅಂಗವಾಗಿ ಸೇವೆ ಸಲ್ಲಿಸುವ ಭಕ್ತಾದಿಗಳು ಆನ್ಲೈನ್ ನ ಈ ವಾಟ್ಸಪ್ ಫೋನ್ ನಂಬರ್ 9449133929 ಕ್ಯಾಟ್ ಲಾಗ್ ಮುಖಾಂತರವೂ ಸೇವೆಯನ್ನು ಸಲ್ಲಿಸಿ ಶ್ರೀ ಗುರು ರಾಯರ ಸನ್ನಿಧಿಗೆ ಆಗಮಿಸಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದು ಶೇಷವಸ್ತ್ರ ಫಲ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಗುರು ರಾಯರ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ವ್ಯವಸ್ಥಾಪಕರು ತಿಳಿಸಿದರು ಹೆಚ್ಚಿನ ಮಾಹಿತಿಗಾಗಿ- 08022443962/9945429129/9449133929/8660349906

Related Articles

ಪ್ರತಿಕ್ರಿಯೆ ನೀಡಿ

Latest Articles