ಮಾರ್ಚ್ 4, ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ದ ಪ್ರಯುಕ್ತ ಈ ಕವನ.
*ರೂಪಶ್ರೀ ಶಶಿಕಾಂತ್
ರಾಯರೆ ಗುರುರಾಯರೆ ವಂದಿಸುವೆ ಪ್ರಹ್ಲಾದರೆ ರಾಯನ ಕುಹಯೋಗ ಕಳೆದ ಶ್ರೇಷ್ಠ ವ್ಯಾಸರಾಯರೆ ರಾಯನಂತೆ ಮೆರೆವ ಶ್ರೀ ರಾಘವೇಂದ್ರರಾಯರೆ ರಾಯರೆಲ್ಲರ ರಾಯರೆ ಶರಣೆಂಬೆ ರಾಯರೆ ಸನ್ಯಾಸ ಸ್ವೀಕರಿಸಿದ ಶ್ರೇಷ್ಠ ದಿನವು ಬಂದಿದೆ ಅನನ್ಯ ಭಕ್ತಿ ಹಾದಿಹಿಡಿದ ದಿವಸ ಬಂದಿದೆ ಅನ್ಯಾಯವನು ಶಿಕ್ಷಿಸಿ ನ್ಯಾಯ ಮಾರ್ಗ ತೋರಿಸಿದ ಅನುಪಮರು ಯತಿಯಾದ ದಿನವು ಬಂದಿದೆ ಪಾದ ಪದ್ಮ ಭಕ್ತಿಯಿಂದ ಹಿಡಿವ ಬನ್ನಿರಿ ಸದಾ ಭಕ್ತಿಯಿಂದ ಸ್ತುತಿಸಿ ಭಜಿಸ ಬನ್ನಿರಿ ಸದ್ವಿಚಾರದಾಗರರ ನೆನೆವ ಬನ್ನಿರಿ ಹೃದಯದಲ್ಲಿ ಭಕ್ತಿ ಆದರ ತುಂಬಿ ತನ್ನಿರಿ ಬನ್ನಿ ಬನ್ನಿ ಭಕ್ತ ಜನರೆ ಗುರುಪಾದ ತಲಕೆ ತನ್ನಿ ತನ್ನಿ ಶ್ರದ್ಧೆ ನೇಮ ನಿಷ್ಠೆ ಭಕ್ತಿ ಮನಕೆ ಚೆನ್ನ ಸಿರಿಹರಿಯ ಕಂಡ ಯತಿಗಳ ಸನಿಹಕೆ ಅನ್ಯೋನ್ಯ ಪ್ರೀತಿ ವಾತ್ಸಲ್ಯದ ಮಂತ್ರಾಲಯಕೆ