ಮಹಾಸಂಪ್ರೋಕ್ಷಣ ಮಹೋತ್ಸವ

ಬೆಂಗಳೂರಿನ ವಯ್ಯಾಲಿಕಾವಲ್ 16ನೇ  ಅಡ್ಡರಸ್ತೆಯಲ್ಲಿರುವ ತಿರುಮಲ ತಿರುಪತಿ (TTD) ದೇವಸ್ಥಾನದ  ಪ್ರತಿಷ್ಠಾಪನೆಯ 12ನೇ ವಾರ್ಷಿಕೋತ್ಸವದ ಪ್ರಯುಕ್ತ ಮೇ 9 ರಿಂದ 11ರ ವರೆಗೆ ಮಹಾ ಸಂಪ್ರೋಕ್ಷಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಕಾರ್ಯಕ್ರಮಗಳು ಈ ರೀತಿ ಇವೆ : 
ಮೇ 9, ಸೋಮವಾರ ಬೆಳಗ್ಗೆ 9-30ಕ್ಕೆ – ಅನುಗ್ನ, ವಿಶ್ವಕ್ಸೇನ, ಪುಣ್ಯಾಹವಾಚನಂ, ಆಚಾರ್ಯ ಋತ್ವಿಕ್ ವರಣಂ, ಪಂಚಗವ್ಯ ಪ್ರಾಶನ, ಅಕಲ್ಮಶಾ ಹೋಮ, ಸಂಜೆ 6-30ಕ್ಕೆ – ಅಂಕುರಾರ್ಪಣಂ-ವೈದಿಕ ಕಾರ್ಯಕ್ರಮ.
ಮೇ 10, ಮಂಗಳವಾರ : ಬೆಳಗ್ಗೆ 8-30ಕ್ಕೆ – ಯಾಗಶಾಲಾ ವೈದಿಕ ಕಾರ್ಯಕ್ರಮ, ಚತುರ್ದಶ ಕಲಶ ಸ್ಥಾಪನೆ, ಸಂಜೆ 5ಕ್ಕೆ –  ಅಷ್ಟಬಂಧನಂ ನಂತರ ಯಾಗಶಾಲಾ ವೈದಿಕ ಕಾರ್ಯಕ್ರಮ.
ಮೇ 11, ಬುಧವಾರ : ಬೆಳಗ್ಗೆ 5 ಗಂಟೆಗೆ – ಮಹಾಶಾಂತಿ ಅಭಿಷೇಕ  ಮತ್ತು ಅಲಂಕಾರ, 6-30ಕ್ಕೆ – ಯಾಗಶಾಲಾ ವೈದಿಕ ಕಾರ್ಯಕ್ರಮ, 9-30ಕ್ಕೆ – ಸುಮುಹೂರ್ತಂ ಮಿಥುನ ಲಗ್ನ ಪ್ರೋಕ್ಷಣ, ಆವಾಹನ, 10-45ಕ್ಕೆ – ದರ್ಶನ, ಆಚಾರ್ಯ, ಅರ್ಚಕ ಬಹುಮಾನಂ, ಯಜಮಾನ ಆಶೀರ್ವಚನಂ.

Related Articles

ಪ್ರತಿಕ್ರಿಯೆ ನೀಡಿ

Latest Articles