ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಘವೇಂದ್ರ ಸೇವಾ ಸಮಿತಿ 4ನೇ ಟಿ ಬಡಾವಣೆ ಜಯನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಜೂನ್ 21ರಿಂದ 24ರವರೆಗೆ ಪ್ರತಿದಿನ ಸಂಜೆ 6 ರಿಂದ 8ರ ವರೆಗೆ ಭಜನೆ “ಪ್ರವಚನ-ಹರಿನಾಮ-ಸಂಕೀರ್ತನೆ” ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜೂನ್ 21, ಮಂಗಳವಾರ ಸಂಜೆ 6 ಗಂಟೆಗೆ, ಜಯನಗರದ ಸುಧಾ ಮಹಿಳಾ ವೃಂದದವರಿಂದ ಭಜನೆ.
ಜೂನ್ 22, ಬುಧವಾರ ಸಂಜೆ 6 ಗಂಟೆಗೆ ಮುತ್ಯಾಲನಗರದ ಶ್ರೀ ಗುರುರಾಜ ಭಜನಾ ಮಂಡಳಿಯರಿಂದ ಭಜನೆ.
ಜೂನ್ 23, ಗುರುವಾರ ಸಂಜೆ 6 ಗಂಟೆಗೆ ವಿಜಯನಗರದ ಪವಿತ್ರ ಗಾನ ವೃಂದದವರಿಂದ ಭಜನೆ.
ಜೂನ್ 21 ರಿಂದ 23ರ ವರೆಗೆ ಪ್ರತಿದಿನ ಸಂಜೆ 7 ಗಂಟೆಗೆ ಡಾ|| ವಾದಿರಾಜಾಚಾರ್ ಅಗ್ನಿಹೋತ್ರಿ ಇವರಿಂದ “ಶ್ರೀ ವಿಜಯದಾಸರ ಸುಳಾದಿಗಳಲ್ಲಿ ಭಾಗವತದ ಪ್ರಮೇಯಗಳು” ವಿಷಯವಾಗಿ ಧಾರ್ಮಿಕ ಪ್ರವಚನ.
ಜೂನ್ 24, ಶುಕ್ರವಾರ ಸಂಜೆ 6-30ಕ್ಕೆ ಕು|| ಅನ್ವಿತಾ ಸಾವಿತ್ರಿ ಮತ್ತು ಕು|| ಭೂಮಿಕಾ ಎಸ್ ಇವರಿಂದ “ಹರಿನಾಮ ಸಂಕೀರ್ತನೆ”,
ವಾದ್ಯ ಸಹಕಾರ : ಶ್ರೀ ಶ್ರೀನಿವಾಸ ಕಾಖಂಡಕಿ (ತಬಲಾ), ಶ್ರೀ ಅಮಿತ್ ಶರ್ಮಾ (ಕೀ-ಬೋಡ್೯).
ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, #2/ಸಿಎ, 13ನೇ ಮುಖ್ಯರಸ್ತೆ, 4ನೇ ‘ಟಿ’ ಬಡಾವಣೆ, ಜಯನಗರ, ಬೆಂಗಳೂರು.