ಬೆಂಗಳೂರಿನ ಜಯನಗರದ ಐದನೇ ಬಡಾವಣೆಯಲ್ಲಿರುವ ಎರಡನೇ ಮಂತ್ರಾಲಯವೆಂದೆ ಖ್ಯಾತಿ ಪಡೆದಿರುವ ನಂಜನಗೂಡು ಶ್ರೀ ಗುರು ರಾಘವೇಂದ್ರ ಸ್ವಾಮಿಗಳಮಠದಲ್ಲಿ ಶ್ರೀಗುರು ರಾಯರ 351ನೇ “ಆರಾಧನಾ” ಮಹೋತ್ಸವವೂ ಆಗಸ್ಟ್ 10 ಹತ್ತನೇ ತಾರೀಖಿನಿಂದ 16 ನೇ ತಾರೀಖಿನವರೆಗೆ ಒಂದು ವಾರಗಳ ಕಾಲ ಸಪ್ತರಾತ್ರೋತ್ಸವದ ಕಾರ್ಯಕ್ರಮಗಳು ಪರಮಪೂಜ್ಯ 108 ಶ್ರೀ ಸುಬುಧೇಂದ್ರ ತೀರ್ಥ ಶ್ರೀ ಪಾದರ ಆದೇಶ ಅನುಗ್ರಹದಂತೆ ಶ್ರೀಮಠದ ಹಿರಿಯ ವ್ಯವಸ್ಥಾಪಕರಾದ ಆರ್,ಕೆ ವಾದಿಂದ್ರ ಆಚಾರ್ಯರ ಹಾಗೂ ಆಚಾರ್ಯ ಶ್ರೀ ಕೃಷ್ಣ ಗುಂಡಾಚಾರ್ಯರ ನೇತೃತ್ವದಲ್ಲಿ ನೆರವೇರಲಿದೆ.
ಆಗಸ್ಟ್ 10 ರಂದು ಸಂಜೆ 5 ಗಂಟೆಗೆ ಚಿಕ್ಕ ಮಕ್ಕಳಿಂದ “ದಾಸವಾಣಿ”ಕಾರ್ಯಕ್ರಮ ಸಂಜೆ 6:30 ಕ್ಕೆ ಶ್ರೀ ಗುರು ರಾಯರ 351ನೇ ಆರಾಧನಾ ಸಪ್ತರಾತ್ರೋತ್ಸವದ “ಉದ್ಘಾಟನೆ” ಹಾಗೂ ಧ್ವಜಾರೋಹಣ, ಗೋಪೂಜೆ, ಧನ ಧಾನ್ಯ ಪೂಜೆ, ಭಕ್ತರು ಸಮರ್ಪಿಸಿದ ಕಾಣಿಕೆಯಿಂದ ರಾಯರ ಬೃಂದಾವನಕ್ಕೆ ಸಮರ್ಪಣೆಗೊಳ್ಳಲಿರುವ ಪರಮಪೂಜ್ಯ108 ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಅಮೃತ ಹಸ್ತದಿಂದ “ಉದ್ಘಾಟನೆ”ಗೊಂಡ ನೂತನವಾದ “ನವರತ್ನಕವಚ” ಸಮರ್ಪಣೆಯ ಪೂಜೆ, ಸ್ವಸ್ತಿವಾಚನ, ಮಹಾ ಮಂಗಳಾರತಿ ನಡೆಯಲಿದೆ.
11 ರಂದು ಶಾಕೋತ್ಸವ ಪೂಜೆ, 12 ರಂದು ರಾಯರ ಪೂರ್ವಾರಾಧನೆ, 13 ರಂದು ಮದ್ಯಾರಾಧನೆ, 14 ರಂದು ಉತ್ತರಾರಾಧನೆ ಈ ದಿನಗಳಲ್ಲಿ ಪ್ರತಿದಿನ ಬೆಳಗ್ಗೆ7ಕ್ಕೆ ವಿಶೇಷವಾಗಿ ರಾಯರ ಬೃಂದಾವನಕ್ಕೆ ಶ್ರೀ ರಾಯರ ಅಷ್ಟೋತ್ತರ ಸಹಿತ ಫಲಪಂಚಾಮೃತ ಅಭಿಷೇಕ 7:30ಕ್ಕೆ ಸೇವಾ ಸಂಕಲ್ಪ ಗುರುರಾಯರ ಪಾದ ಪೂಜೆ ಬೆಳಗ್ಗೆ 11ಕ್ಕೆ ಕನಕಾಭಿಷೇಕ 12:30ಕ್ಕೆ ಮಹಾ ಮಂಗಳಾರತಿ ಸೇವಾ ಕರ್ತರಿಗೂ ಹಾಗೂ ಸಾರ್ವಜನಿಕವಾಗಿ ಪ್ರತಿಯೊಬ್ಬ ಭಕ್ತರಿಗೂ ಗುರು ರಾಯರ ಪ್ರಸಾದ ರೂಪವಾಗಿ ಅನ್ನ ಸಂತರ್ಪಣೆ ನಡೆಯಲಿದೆ.
ಸಂಜೆ ಆರು ಮೂವತ್ತಕ್ಕೆ ಉತ್ಸವಗಳು, ಪ್ರವಚನ , ಸಂಜೆ 7:30ಕ್ಕೆ ದಾಸವಾಣಿ, ಭರತನಾಟ್ಯ, ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ವಿಶೇಷವಾಗಿ 13ನೇ ತಾರೀಖಿನಂದು ಗುರು ರಾಯರ ಬೃಂದಾವನಕ್ಕೆ ಭಕ್ತರಿಂದ ಸಮರ್ಪಿಸಿದ ಕಾಣಿಕೆಯಿಂದ ನೂತನ ವಾಗಿ ನಿರ್ಮಾಣಗೊಂಡ “ನವರತ್ನ ಕವಚ”ವೂ ಸಮರ್ಪಿಸಲಾಗುವುದು, 14 ರಂದು ಗುರು ರಾಯರ ಉತ್ತರಾರಾಧನೆ ಪ್ರಯುಕ್ತ ಬೆಳಗ್ಗೆ 9 ಗಂಟೆಗೆ ಶ್ರೀಮಠದಿಂದ ಜಯನಗರದ ರಾಜಭೀದಿಗಳಲ್ಲಿ ಶ್ರೀ ಹರಿ ಭಜನೆ ಹಾಗೂ ನಾನಾವಿದ ವಾದ್ಯಗಳಿಂದ ಮಹಾರಥೋತ್ಸವದ ಉತ್ಸವವು ನೆರವೇರಲಿದೆ.
15ರಂದು ಶ್ರೀ ಸುಜ್ಞಾನೇಂದ್ರ ತೀರ್ಥರ ಆರಾಧನೆ, 16 ರಂದು ಸರ್ವ ಸಮರ್ಪಣ ಸಪ್ತ ರಾತ್ರೋತ್ಸವದ ಕಾರ್ಯಕ್ರಮವೂ ಮುಕ್ತಾಯಗೊಳ್ಳಲಿದೆ.
“ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ
10 ರಂದು ಸಂಜೆ 5:00 ಗಂಟೆಗೆ ಕು|| ಭೂಮಿಕಾ ಎಸ್. ಕುಂದಗೋಡು, ಕು|| ಅನ್ವಿತಾ ಸಾವಿತ್ರಿ, ಕು||ನಿಶಿತಾ ಪ್ರಸಾದ್ ಮತ್ತು ಕು|| ಎಲ್ ಎನ್ ಚಾರ್ವಿ ವೃಂದದವರಿಂದ,”ದಾಸವಾಣಿ” 11 ರಂದು ಸಂಜೆ 7:30ಕ್ಕೆ ಕುಮಾರಿ- ಸಂಜನಾ ದೇಶಪಾಂಡೆ ವೃಂದದವರಿಂದ “ದಾಸ ಸಂಪದ” 12 ರಂದು ಸಂಜೆ 7:30 ಕ್ಕೆ ವಿದ್ವಾನ್- ಶ್ರೀಧರ್ ಸಾಗರ್ ವೃಂದದಿಂದ “ಸ್ಯಾಕ್ಸೋಫೋನ್” ವಾದನ, 13 ರಂದು ಸಂಜೆ 7:30ಕ್ಕೆ ವಿದ್ವಾನ್ – ಅನಂತ ಕುಲಕರ್ಣಿ ವೃಂದದಿಂದ “ಸಂಗೀತ ಜೈಂಕಾರ”, 14 ರಂದು ಸಂಜೆ 6-30:ಕ್ಕೆ ಶ್ರೀಮತಿ ಸೀತಾ ಗುರುಪ್ರಸಾದ್ ನಿರ್ದೇಶನದಲ್ಲಿ- ಭರತಾಂಜಲಿ ನಾಟ್ಯ ಶಾಲೆಯಿಂದ “ಭರತನಾಟ್ಯ” 15 ರಂದು ಸಂಜೆ 7 ಗಂಟೆಗೆ ವಿದ್ವಾನ್-ಶಶಿಧರ ಕೋಟೆ ವೃಂದದಿಂದ ” ಕರ್ನಾಟಕ ಶಾಸ್ತ್ರೀಯ ಸಂಗೀತ”, 16 ರಂದು ಸಂಜೆ 6:00ಕ್ಕೆ ವಿದ್ವಾನ್ – ಮೈಸೂರು ರಾಮಚಂದ್ರ ಆಚಾರ್ಯ ವೃಂದದಿಂದ”ಗಾನಸುಧೆ”.
ಹೆಚ್ಚಿನ ಮಾಹಿತಿಗಾಗಿ-9945429129-94491133929-8660349906