ಗಣೇಶ ರುದ್ರಾಕ್ಷಿ

ರುದ್ರಾಕ್ಷಿ ಎಂದರೆ ಅತ್ಯಂತ ಪವಿತ್ರ. ಅದರಲ್ಲೂ ಗಣೇಶನ ರುದ್ರಾಕ್ಷಿ ಎಂದರೆ ಮತ್ತೊಷ್ಟು ಪವಿತ್ರ ಎಂದು ಹೇಳಲಾಗುತ್ತದೆ. ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ಹಲವಾರು ಪ್ರಯೋಜನಗಳು ದೊರೆಯುತ್ತದೆ. ರುದ್ರಾಕ್ಷಿಯನ್ನು ಶಿವನ ರೂಪ ಎಂದು ಪರಿಗಣಿಸಲಾಗುತ್ತದೆ. ಅನೇಕ ವಿಧದ ರುದ್ರಾಕ್ಷಿಗಳು ಇವೇ. ಇನ್ನು ಗಣೇಶನ ಆಕಾರವು ರುದ್ರಾಕ್ಷಿಯ ಮೇಲೆ ಹಚ್ಚಾಗಿ ಇರುವುದರಿಂದ ಅಥವಾ ರುದ್ರಾಕ್ಷಿ ಮೇಲೆ ಗಣೇಶನ ಸೊಂಡಿಲ ಆಕಾರದ ಚಿಹ್ನೆಯನ್ನು ಗುರುತಿಸಬಹುದಾದರಿಂದ ಇದನ್ನು ಗಣೇಶ ರುದ್ರಾಕ್ಷಿ ಎಂದು ಕರೆಯಲಾಗುತ್ತದೆ.

ಇದನ್ನು ಬುಧವಾರ ಧರಿಸುವುದರಿಂದ ಶುಭ ಫಲಿತಾಂಶಗಳನ್ನು ಪಡೆಯಬಹುದು. ಗಣೇಶ ರುದ್ರಾಕ್ಷಿಯನ್ನು ಯಶಸ್ಸು ಸಂತೋಷ ಸಮೃದ್ಧಿಯ ಸಂಕೇತ ಎಂದು ಪರಿಗಣಿಸಲಾಗಿದೆ.ಗಣೇಶ ರುದ್ರಾಕ್ಷಿಯನ್ನು ಧರಿಸಿದರೆ ಸಿದ್ಧಿಗಳನ್ನು ಸಾಧಿಸಬಹುದು ಮತ್ತು ಮಾನಸಿಕ ಶಾಂತಿಯನ್ನು ಇದು ನೀಡುತ್ತದೆ. ಆದರೆ ಪವಿತ್ರ ಕರಣ ಮಾಡಿದ ನಂತರ ರುದ್ರಾಕ್ಷಿಯನ್ನು ಧರಿಸಬೇಕು.

ನಿಮ್ಮ ಅಥವಾ ಮಕ್ಕಳ ಜ್ಞಾಪಕಶಕ್ತಿ ದುರ್ಬಲ ಆಗಿದ್ದರೆ ನೀವು ತಪ್ಪದೇ ಗಣೇಶ ರುದ್ರಾಕ್ಷಿಯನ್ನು ಧರಿಸಬೇಕು. ಗಣೇಶ ರುದ್ರಾಕ್ಷಿ ನಿಮ್ಮ ಜ್ಞಾಪಕಶಕ್ತಿಯನ್ನು ವೃದ್ಧಿಸುತ್ತದೆ ಮತ್ತು ಯಾವುದೇ ಕೆಲಸವನ್ನು ಮಾಡುವಲ್ಲಿ ಏಕಾಗ್ರತೆಯನ್ನು ತರುತ್ತದೆ. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಗಮನ ಹರಿಸುವುದಕ್ಕೆ ಸಾಧ್ಯವಾಗುತ್ತದೆ.
ಗಣೇಶನು ಬುದ್ಧಿವಂತಿಕೆ ಮತ್ತು ವಿವೇಕದ ದೇವರು ಹೀಗಾಗಿ ಗಣೇಶ ರುದ್ರಾಕ್ಷಿ ಧಾರಣೆಯಿಂದ ಬುದ್ದಿವಂತಿಕೆ ಜಾಗೃತಗೊಂಡು ಮನುಷ್ಯನ ಆತ್ಮಸಾಕ್ಷಿಯನ್ನು ಹೆಚ್ಚಿಸುತ್ತದೆ.ಅದೇ ಸಮಯದಲ್ಲಿ ಇದು ಕುಂಡಲಿಯಲ್ಲಿ ಇರುವ ಬುಧಗ್ರಹದ ಶಕ್ತಿಯನ್ನು ಕೂಡ ಹೆಚ್ಚಿಸುತ್ತದೆ.ಗಣೇಶ ರುದ್ರಾಕ್ಷಿ ಧರಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಅಥವಾ ಮಾನಸಿಕ ಸಮಸ್ಯೆ ದೂರವಾಗುತ್ತದೆ. ಇನ್ನು ಗಣೇಶ ರುದ್ರಾಕ್ಷಿ ಧರಿಸುವುದರಿಂದ ಅಪಾರ ಲಾಭ ನಿಮಗೆ ಸಿಗುತ್ತದೆ. ಇಂತಹ ಗಣೇಶ ರುದ್ರಾಕ್ಷಿಯನ್ನು ಗಣೇಶ ಚತುರ್ಥಿ ದಿನದಂದು ಧರಿಸುವುದು ಉತ್ತಮ.
(ಸಂಗ್ರಹ)

Related Articles

ಪ್ರತಿಕ್ರಿಯೆ ನೀಡಿ

Latest Articles