ಬೆಂಗಳೂರು: ನಿರಂತರ ಕಲ್ಚರಲ್ ಅಂಡ್ ಚಾರಿಟಬಲ್ ಟ್ರಸ್ಟ್ (ರಿ) ಸಂಸ್ಥೆಯ, ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ಶಾಲೆಯ ಶ್ರೀ ಸೋಮಶೇಖರ್ ಚೂಡನಾಥ್ ಹಾಗೂ ಶ್ರೀಮತಿ ಸೌಮ್ಯ ಸೋಮಶೇಖರ್ ರವರ ಶಿಷ್ಯರಾದ ಕು. ಎಸ್. ನಿಮಿಷ ಮತ್ತು ಕು. ಎ. ಅಕ್ಷಯಾ ರವರ ಭರತನಾಟ್ಯ ರಂಗಪ್ರವೇಶವನ್ನು ನಗರದ ಮಲ್ಲೇಶ್ವರದ ಸೇವಾ ಸದನದಲ್ಲಿಅಕ್ಟೋಬರ್ 23, ಭಾನುವಾರ ಸಂಜೆ 5.30 ಕ್ಕೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಗುರುಗಳಾದ ಡಾ. ಸುಪರ್ಣಾ ವೆಂಕಟೇಶ್, ಡಾ. ವಿದ್ಯಾ ಶಿಮ್ಲಡ್ಕರ್, ಶ್ರೀಮತಿ ಲೀಲಾವತಿ ಉಪಾಧ್ಯಾಯ ಹಾಗೂ ಶ್ರೀಮತಿ ಶ್ರೀವಿದ್ಯಾ ಆನಂದ್ ರವರು ಭಾಗವಹಿಸಲಿದ್ದಾರೆ.
ಸೋಮಶೇಖರ್ ಚೂಡಾನಾಥ್ ಮತ್ತು ಸೌಮ್ಯ ಸೋಮಶೇಖರ್ ದಂಪತಿ ನಿರಂತರ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ಅನ್ನು 2012 ರಲ್ಲಿ ಸ್ಥಾಪಿಸಿ, ನಿರಂತರ ಸ್ಕೂಲ್ ಆಫ್ ಡ್ಯಾನ್ಸ್ ಯೆಂಬ ನೃತ್ಯ ಶಾಲೆಯನ್ನು ನಡೆಸುತ್ತಿದ್ದಾರೆ. 2015 ರಿಂದ ಸಂಸ್ಥೆಯ ಮೂಲಕ ಬೆಂಗಳೂರು ಮತ್ತು ಕೋಲಾರದ ಮಕ್ಕಳಿಗೆ ಭರತನಾಟ್ಯ ಶಿಕ್ಷಣವನ್ನು ನೀಡುತ್ತ ಅನೇಕ ವಿದ್ಯಾರ್ಥಿಗಳನ್ನು ತಯಾರುಮಾಡುತ್ತಿದ್ದಾರೆ. ಹಲವಾರು ಪ್ರತಿಭಾವಂತ ವಿಧ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ನಡೆಸುವ ಭರತನಾಟ್ಯ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊAದಿಗೆ ತೇರ್ಗಡೆಗೊಂಡು ತಮ್ಮ ನೃತ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. “ನಿರಂತರ ನೃತ್ಯೋತ್ಸವ”ಯೆಂಬ ಶೀರ್ಷಿಕೆಯಡಿ ನೃತ್ಯೋತ್ಸವವನ್ನು ಪ್ರಾರಂಭಿಸಿ ರಾಜ್ಯದ ಹಾಗೂ ದೇಶದ ಹಲವೆಡೆಗಳಿಂದ ಕಲಾವಿದರ ಕಾರ್ಯಕ್ರಮಗಳನ್ನು ಪಾಯೋಜಿಸುತ್ತಿದ್ದಾರೆ.