ಸೂರ್ಯಗ್ರಹಣ 25.10.2022 ಆಚರಿಸಬೇಕಾದ ನಿಯಮಗಳು

 *ಶುಭ ಫಲ –   ಧನು, ಮಕರ, ವೃಷಭ, ಸಿಂಹ ರಾಶಿ
*ಮಿಶ್ರ ಫಲ –   ಕನ್ಯಾ,ಕುಂಭ, ಮೇಷ, ಮಿಥುನ ರಾಶಿ
*ಅಶುಭ ಫಲ–  ತುಲಾ, ಕರ್ಕ, ವೃಶ್ಚಿಕ, ಮೀನ  ರಾಶಿ
*ವಿಶೇಷ ಅಶುಭ ಫಲ – ತುಲಾ ರಾಶಿ, ಚಿತ್ತಾ ನಕ್ಷತ್ರ, ಸ್ವಾತಿ ನಕ್ಷತ್ರ 
Bangalore  : 5.12 pm
ಈ ಸಮಯದ ನಂತರ ಕೂಡಲೇ ಗ್ರಹಣಸ್ಪರ್ಶ ಸ್ನಾನ ಮಾಡುವುದು. ಗ್ರಹಣ ಮೋಕ್ಷ ನಂತರ ಅಂದರೆ 6.20ರ ನಂತರ ಸ್ನಾನ ಮಾಡುವುದು. ಆದರೆ ಫಲಾಹಾರ ಭೋಜನ ಇಲ್ಲ.
ಮಧ್ಯ ಕಾಲ: 05.47 PM
ಸೂರ್ಯಾಸ್ತ ಕಾಲ : 5.57 pm
( ಬೆಂಗಳೂರು )
ಮೋಕ್ಷ ಕಾಲ :6.20 pm
(ಸೂರ್ಯಾಸ್ತ ನಂತರ)
ಗ್ರಹಣದ ಒಟ್ಟು ಕಾಲ : 57 ನಿಮಿಷ
*ವೇಧಾರಂಭ : 25-10-2022, ಮಂಗಳವಾರ ಸೂರ್ಯೋದಯದಿಂದಲೇ ವೇಧಾರಂಭವಾಗುತ್ತದೆ.
 ಈ ಸಲದ ಗ್ರಹಣ ದೋಷ ಇರುವವರು ಹುರಳೀ ದಾನ  ಮಾಡಬೇಕು. ಶಕ್ತಿಯಿದ್ದವರು ಸುವರ್ಣ, ರಜತ ದಾನ ಮಾಡಿ. ಇಲ್ಲದವರು ಒಂದು ಬಟ್ಟಲಲ್ಲಿ ಅಥವಾ ದೊನ್ನೆಯಲ್ಲಿ ಹುರಳೀ ಯಥಾಶಕ್ತಿ ದಕ್ಷಿಣೆ ಸಹಿತ ದಾನ ಮಾಡಿ.

ಗ್ರಹಣ ಸಮಯದಲ್ಲಿ ಹಾಲು, ಮೊಸರು, ತರಕಾರಿ ಮುಂತಾದವುಗಳು ಹಾಳಾಗದಂತೆ ಅವುಗಳ ಮೇಲೆ ದರ್ಬೆ ಹಾಕಬೇಕು?

ಗ್ರಹಣ ಹಿಡಿಯುವ ದಿನ ಗ್ರಹಣ ಸ್ಪರ್ಶ ಸಮಯದಲ್ಲಿ ಮತ್ತು ಗ್ರಹಣ ಮೋಕ್ಷ ನಂತರ  ಸ್ನಾನ ಮಾಡಬೇಕು.

ಗ್ರಹಣದ ದಿನ   ಗ್ರಹಣ ಮೋಕ್ಷಾ ನಂತರ ಸ್ನಾನ ಮಾಡಿ ನಂತರ ತಯಾರಿಸಬೇಕು. ಆದರೆ ಈ ಸಲ ಗ್ರಹಣ ಮೋಕ್ಷಾನಂತರದಲ್ಲಿ ಸೂರ್ಯಾಸ್ತ ಆಗಿರುವುದರಿಂದ ಬರೀ ಸ್ನಾನ ಅಷ್ಟೇ. ಮಾರನೇ ದಿನ ಬೆಳಗ್ಗೆ ಸೂರ್ಯೋದಯ ನಂತರ ಸ್ನಾನ ಮಾಡಿ ಪೂಜೆ ಮಾಡಿ ಆಹಾರ ಸ್ವೀಕರಿಸಬಹುದು.

 ಗ್ರಹಣ ಸಮಯದಲ್ಲಿ ನಿದ್ದೆ, ಊಟ, ತಿಂಡಿ, ಮಲಮೂತ್ರ ವಿಸರ್ಜನೆ , ಮೈಥುನ ನಿಷಿದ್ಧ.  ಅದರಿಂದ ಅನಾರೋಗ್ಯವಾಗುತ್ತೆ. ಈ ಸಂದರ್ಭದಲ್ಲಿ ಗರ್ಭ ಧರಿಸಿದರೆ ಆ ಮಗುವಿಗೆ ಅಂಗವಿಕಲತೆಯಾಗುವ ಸಂದರ್ಭ ಬರಬಹುದು.
ಈ ದಿನ ಯಾವುದೇ ಆಹಾರ ಸ್ವೀಕರಿಸುವಂತಿಲ್ಲ. ಅಶಕ್ತರು, ಬಸುರಿ, ಬಾಣಂತಿಯರು, ಮತ್ತು ಎಂಟು ವರ್ಷದ ಒಳಗಿನ ಮಕ್ಕಳು  25.10.22 ಸೂರ್ಯ ಗ್ರಹಣದ ಮೂರು ಗಂಟೆ ಮುನ್ನ ಮಾಡಬಹುದು.    

Related Articles

ಪ್ರತಿಕ್ರಿಯೆ ನೀಡಿ

Latest Articles