ಬೆಂಗಳೂರು: ನಾಟ್ಯ ನಿನಾದ ಅಕಾಡೆಮಿಯ ವತಿಯಿಂದ ನವೆಂಬರ್ 6 ನೇ ತಾರೀಖು ಭಾನುವಾರ ಸಂಜೆ 6 ಗಂಟೆಗೆ ಜೆ.ಸಿ. ರಸ್ತೆಯಲ್ಲಿರುವ ನಯನ ರಂಗಮಂದಿರದಲ್ಲಿ ಕು. ನೃತ್ಯ ಕಾರ್ತಿಕ್ (ಭರತ ನಾಟ್ಯ ) ,

ಕು.ಐಶ್ವರ್ಯ ಪಿ.ಬಿ. (ಕೂಚಿಪುಡಿ), ಕು. ಧಾತ್ರಿ ಎಚ್. ( ಒಡಿಸ್ಸಿ ) ಹಾಗೂ ಕು. ಮಾಯಾ ಧನಂಜಯ್ (ವಿಶೇಷ ಅತಿಥಿ) ಅವರಿಂದ ಕಥಕ್ ಪ್ರದರ್ಶನ ಇರುತ್ತದೆ. ಈ ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಶ್ರೀಮತಿ ಶುಭ ಧನಂಜಯ್ ರವರು, (ಕಲಾತ್ಮಕ ನಿರ್ದೇಶಕರು, ನಾಟ್ಯಾಂತರಂಗ), ಆಗಮಿಸಲಿದ್ದಾರೆ. ಕೊನೆಯದಾಗಿ ನಾಟ್ಯ ನಿನಾದ ಅಕಾಡೆಮಿಯ ಶಿಷ್ಯವೃಂದದಿಂದ ಸಮೂಹ ನೃತ್ಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ನಾಟ್ಯ ನಿನಾದ ಅಕಾಡೆಮಿಯ ನಿರ್ದೇಶಕರಾದ ಶ್ರೀಮತಿ. ಧರಣಿ. ಟಿ. ಕಶ್ಯಪ್ ಅವರು ತಿಳಿಸಿದ್ದಾರೆ.
























