ನ.8 ಚಂದ್ರಗ್ರಹಣ : ವಿವಿಧ ದೇಗುಲಗಳಲ್ಲಿ ದೇವರ ದರ್ಶನಕ್ಕೆ ನಿರ್ಬಂಧ

ಬೆಂಗಳೂರು: ನವೆಂಬರ್ 8ರಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜಾ, ದರ್ಶನ ಸಮಯವನ್ನು ಬದಲಾವಣೆ ಮಾಡಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ಈ ಬಗ್ಗೆ ಪ್ರಕಟಣೆ ಹೊರಡಿಸಿವೆ.

ತಿರುಪತಿ: ನವೆಂಬರ್ 8ರಂದು ಚಂದ್ರಗ್ರಹಣ ಸಂಭವಿಸಲಿದ್ದು, ಅಂದು ಬೆಳಗ್ಗೆ 8:40 ಬೆಳಗ್ಗೆಯಿಂದ 7:20 ಅವಧಿಯಲ್ಲಿ ದೇಗುಲಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಕಲ್ಯಾಣೋತ್ಸವ ಸೇರಿದಂತೆ ಎಲ್ಲಾ ವಿಶೇಷ ಸೇವೆ ಪೂಜೆಗಳು ಕೂಡಾ ನಡೆಸುವುದಿಲ್ಲ. ಗ್ರಹಣದ ದಿನಾಂಕದ ಎರಡು ದಿನಗಳ ಹಿಂದೆ ಮುಂದೆ ಯಾವುದೇ ವಿಶೇಷ ಸೇವೆ ಇರುವುದಿಲ್ಲ ಎಂದು ಟಿಟಿಡಿ ತಿಳಿಸಿದೆ.
ದೇವಿ ದರ್ಶನಕ್ಕೆ ನಿರ್ಬಂಧ
ಕೊಪ್ಪಳ: ಗ್ರಹಣ ಸ್ಪರ್ಶ ಸಮಯ ಮಧ್ಯಾಹ್ನ 2.39 ನಿಮಿಷದಿಂದ ಸಂಜೆ 06.19 ನಿಮಿಷದವರೆಗೆ ಇರುವುದರಿಂದ ಮಧ್ಯಾಹ್ನ 1 ರಿಂದ ರಾತ್ರಿ 8 ರವರೆಗೆ ಹುಲಿಗಿಯ ಹುಲಿಗೆಮ್ಮ ದೇವಿ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ನಿರ್ಬಂಧಿಸಲಾಗಿದೆ ಎಂದು ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ: ಚಂದ್ರ ಗ್ರಹಣ ಹಿನ್ನೆಲೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 8ರಂದು ಯಾವುದೇ ಕಾರ್ಯಕ್ರಮ ನೆರವೇರುವುದಿಲ್ಲ. ಅಲ್ಲದೇ ಭೋಜನ ಪ್ರಸಾದ ವಿತರಣೆ ಕೂಡ ಇರುವುದಿಲ್ಲ. ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತರಿಗೆ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಬೆಳಗ್ಗೆ 9 ರಿಂದ 11:30ರವರೆಗೆ ಭಕ್ತರಿಗೆ ದೇವರ ದರ್ಶನ ಅವಕಾಶವನ್ನು ಕಲ್ಪಿಸಲಾಗಿದೆ. ಗ್ರಹಣ ಸ್ಪರ್ಶ ಸಮಯವಾದ 2:39ರಿಂದ ಗ್ರಹಣ ಮೋಕ್ಷ ಸಮಯ 6:19ರತನಕ ಮತ್ತು ರಾತ್ರಿ 7:30 ರಿಂದ 9 ರತನಕ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

ಪ್ರತಿಕ್ರಿಯೆ ನೀಡಿ

Latest Articles