ಗರುಡಾದ್ರಿ
ವರಾಹ ರೂಪಿ ಭಗವಂತನು ಭೂಧೇವಿಯನ್ನು ಹಿರಣಾಕ್ಷನಿಂದ ರಕ್ಷಿಸಿದನು. ಆಗ ಭೂಧೇವಿಯು ಭಗವಂತನನ್ನು ಇಲ್ಲೇ ನೆಲಸುವಂತೆ ಕೋರಿದಳು. ಇದಕ್ಕೆ ಒಪ್ಪಿದ ಭಗವಂತನು ಗರುಡನನ್ನು ಸ್ವಲ್ಪ ಭಾಗ ವೈಕುಂಟವನ್ನು ಇಲ್ಲಿಗೆ ತರುವಂತೆ ಹೇಳಿದನು. ಆಗ ಗರುಡನು ವೈಕುಂಟದ ಸಲ್ಪ ಬಾಗ ವನ್ನು ತಂದನು. ಈ ಭಾಗದ ಬೆಟ್ಟವನ್ನು ಗರುಡಾದ್ರಿ ಎಂದು ಕರೆಯಲಾಗುತ್ತದೆ. ವರಾಹ ದೇವರು ಈಗಲೂ ಪುಷ್ಕರಣಿಯ ಪಶ್ಚಿಮ ಭಾಗದಲ್ಲಿ ಇರುವರೆಂದು ಪ್ರತೀತಿ ಇದೆ.
ವೃಷಭಾದ್ರಿ
ವೃಷಭಾಷುರನೆಂಬ ರಾಕ್ಷಸನು ದೇವರನ್ನು ಕುರಿತು ತಪಸ್ಸು ಮಾಡುತ್ತ ಪ್ರತಿ ಹೂವಿನ ಜೊತೆಯಲ್ಲಿ ತನ್ನ ತಲೆಯನ್ನು ಕತ್ತರಿಸಿ ಅರ್ಪಿಸುತ್ತಿದ್ದನಂತೆ. ದೇವರ ಕೃಪೆಯಿಂದ ಆ ದಿನದ ತಪಸ್ಸು ಮುಗಿಯುತ್ತಿದ್ದಂತೆ ಅವನ ತಲೆ ಪುನಃ ಧೇಹಕ್ಕೆ ಸೇರುತ್ತಿತ್ತಂತೆ. ರಾಕ್ಷಸನು ಮರಣ ಹೊಂದಿದಾಗ ಈ ಬೆಟ್ಟವನ್ನು ನಾನು ಮೊಕ್ಷ ಪಡೆದುದರ ಜ್ಞಾಪಕಾರ್ತವಾಗಿ ನನ್ನ ಹೆಸರಿನಿಂದ ಕರಯಬೇಕೆಂದು ದೇವರನ್ನು ಪ್ರಾರ್ಥಿಸಿದನಂತೆ. ಭಗವಂತನ ಅನುಗ್ರಹದಿಂದ ಈ ಬೆಟ್ಟವನ್ನು ವೃಷಭಾದ್ರಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಅಂಜನಾದ್ರಿ
ಕೇಸರಿಯಂಬ ರಾಕ್ಷಸನು ತನಗೆ ಚಿರಂಜೀವಿ ಮಗನನ್ನು ಕರುಣಿಸ ಬೇಕೆಂದು ಭಗವಂತನನ್ನು ಕುರಿತು ತಪಸ್ಸು ಮಾಡಿದನು. ಆಗ ಶಿವನು ಪ್ರತಕ್ಷನಾಗಿ ನಿನಗೆ ಚಿರಂಜಿವಿ ಮಗನನ್ನು ಪಡೆಯುವ ಯೋಗವಿಲ್ಲ. ಆದರೆ ನಿನ್ನ ಮಗಳು ಅಂಜನಿಗೆ ಆ ಯೋಗವಿದೆಯಂದು ಹೇಳಿದನು. ಅಂಜನಿಯು ತಪಸ್ಸು ಮಾಡಿ ’ಹನುಮಾನ್ ‘ಎಂಬ ಮಗನನ್ನು ಪಡೆದಳು. ಹನುಮಂತನು ಶಿವನ ಅಂಶ. ಮಹಾಲಕ್ಷ್ಮಿಯು ಅವನಿಗೆ ಅಮರತ್ವವನ್ನು ಕರಣಿಸಿದಳು. ಈ ಭಾಗದ ಬೆಟ್ಟಕ್ಕೆ ಬ್ರಹ್ಮನು ಅಂಜನಾದ್ರಿ ಎಂದು ಹೆಸರಿಟ್ಟನು.
ನೀಲಾದ್ರಿ
ಶ್ರೀನಿವಾಸನಿಗೆ ಗೋಪಾಲಕನ ಏಟಿನಿಂದ ಗಾಯವಾಗಿ ರಕ್ತ ಬಂದಿತು. ಏಟು ಬಿದ್ದ ಜಾಗದಲ್ಲಿ ಕೂದಲು ಬೆಳೆಯಲ್ಲಿಲ್ಲ. ಇದನ್ನು ನೋಡಿದ ನೀಲಾದ್ರಿ ಎಂಬ ಗಂಧರ್ವಕನ್ಯೆ ಶ್ರೀನಿವಾಸನಂತಹ ಸುಂದರಿನಿಗೆ ಚೊಟ್ಟೆತಲೆ ಇರಬಾರದಂದೆಂ ಯೋಚಿಸಿ ತನ್ನ ತಲೆಯಿಂದ ಸ್ವಲ್ಪ ಕೂದಲನ್ನು ಕತ್ತರಿಸಿ ಶ್ರೀನಿವಾಸ ದೇವರ ತಲೆಯ ಮೇಲೆ ಏಟು ಬಿದ್ದ ಜಾಗದಲ್ಲಿ ಇಟ್ಟು ತನ್ನ ಗಂದರ್ವ ವಿದ್ಯೆಯಿಂದ ಅಲ್ಲಿ ಕೂದಲು ಬೆಳೆಯುವಂತೆ ಮಾಡುತ್ತಾಳೆ. ಇದರಿಂದ ಸಂತೋಷಗೊಂಡ ಶ್ರೀನಿವಾಸ ದೇವರು ಒಂದು ಬೆಟ್ಟಕ್ಕೆ ನೀಲಾದ್ರೀ ಎಂದು ಹೆಸರಿಡುತ್ತಾರೆ.
ಶೇಷಾದ್ರಿ
ಒಮ್ಮೆ ಆದಿಶೇಷ ಮತ್ತು ವಾಯು ದೇವರ ನಡುವೆ ಯಾರು ಉತ್ತಮರು ಬಲಿಷ್ಟರು ಎಂದು ಭಿನ್ನಾಭಿಪ್ರಾಯ ಉಂಟಾಯಿತು. ಸೋತವರು ವೈಕುಂಟಕ್ಕೆ ಹೋಗುವಹಾಗಿಲ್ಲ ಎಂದು ಷರತ್ತಾಯಿತು. ಈ ಸಮಯದಲ್ಲಿ ನಾರದರು ತಮ್ಮ ವೀಣೆಯಲ್ಲಿ ಒಂದು ಸುಮಧುರ ರಾಗ ನುಡಿಸಲು ಆದಿಶೇಷನು ತನ್ನ ಹೆಡೆಯನ್ನು ಬಿಚ್ಚಿ ಗಾನವನ್ನು ಕೇಳಿ ಆನಂದಿಸುತ್ತಿದ್ದನು. ಆಗ ವಾಯು ದೇವರು ಇದೇ ಸರಿಯಾದ ಸಮಯವೆಂದು ಜೋರಾಗಿ ಗಾಳಿ ಬೀಸಿದನು. ಇದರಿಂದ ಆದಿಶೇಷನು ನೆಲಕ್ಕೆ ಬಿದ್ದನು. ಇದರಿಂದ ಆದಿಶೇಷನು ಸೋತಂತಾಯಿತು. ಆದರೆ ಈ ಗೆಲಿವಿನಿಂದ ವಾಯುದೇವರಿಗೆ ಸಂತೋಷವಾಗಲಿಲ್ಲ. ಯಾಕೆಂದರೆ ಆದಿಶೇಷನು ಸೋತಿದ್ದರಿಂದ ವೈಕುಂಠಕ್ಕೆ ಹೋಗುವ ಹಾಗಿಲ್ಲ. ಇದರಿಂದ ಭಗವಂತನಿಗೆ ಅವನ ಹಾಸಿಗೆ ತಪ್ಪಿಸಿದಂತಾಯಿತು ಎಂದು ಮರುಗಿದನು. ವಾಯುದೇವರು ಆದಿಶೇಷನನ್ನು ವೈಕುಂಟಕ್ಕೆ ಹೋಗು ಎಂದು ಎಷ್ಟು ಕೇಳಿಕೊಂಡರು ಆಧಿಶೇಷ ಒಪ್ಪಲಿಲ್ಲ. ಇದೆಲ್ಲ ನಡೆದದ್ದು ದೇವರ ಇಛ್ಛೆಯಂತೆ ಎಂದನು. ಆಗ ಆದಿಶೇಷನು ಒಂದು ಬೆಟ್ಟದ ರೂಪವನ್ನು ತಾಳುವುದೆಂದು. ಅಲ್ಲಿ ಭಗವಂತನು ಕಲಿಯುಗ ಮುಗಿಯವರೆಗೆ ಅಲ್ಲಿ ನೆಲಸುವುದೆಂದು ತೀರ್ಮಾನವಾಯಿತು. ಈ ಬೆಟ್ಟವನ್ನೇ ಶೇಷಾಚಲ ಅಥವ ಶೇಷಾದ್ರಿ ಎಂದು ಕರೆಯುತ್ತಾರೆ.
ವೆಂಕಟಾದ್ರಿ
ಸಂಸ್ಕೃತದಲ್ಲಿ’ ವೆನ್ ‘ಅಂದರೆ ಪಾಪ ಮತ್ತು ‘ಕಟ್’ ಅಂದರೆ ಹೋಗಲಾಡಿಸುವುದು ಅರ್ಥ. ಅಂದರೆ ವೆಂಕಟಾದ್ರಿ ಅಂದರೆ ಪಾಪವನ್ನು ಹೋಗಲಾಗಿಸುವುದು ಎಂದು ಅರ್ಥ. ಮಾಧವ ಎಂಬ ಕುಷ್ಟರೋಗಿ ತಿರುಪತಿಗೆ ಹೋಗುತ್ತಿದ್ದ ಭಕ್ತರ ಜೊತೆಯಲ್ಲಿ ಹೋಗುತ್ತಿದ್ದನು. ಆ ಭಕ್ತರು ‘ ಗೋವಿಂದ,ಗೋವಿಂದ’ ಎಂದು ಹೇಳುತ್ತಿದ್ದರು. ಈ ‘ಗೋವಿಂದ’ ನಾಮವನ್ನು ಕೇಳುತಿದ್ದಂತೆ ಕುಷ್ಟರೋಗಿಯ ರೋಗವು ವಾಸಿಯಾಯಿತು. ಆಗ ಬ್ರಹ್ಮನು ಮಾಧವನ ಬಳಿ ಬಂದು ನಿನ್ನ ಮೂಲಕ ಪ್ರಪಂಚಕ್ಕೆ ಈ ಬೆಟ್ಟದ ಯಾತ್ರೆಯಿಂದ ಪಾಪ ವಿಮೋಚನೆಯಾಗುತ್ತದೆ ಎಂದು ತಿಳಿಯಲಿ ಎಂದನು. ಇವತ್ತಿನಿಂದ ಈ ಬೆಟ್ಟವನ್ನು ವೆಂಕಾಟಾದ್ರಿ ಎಂದು ಕರೆಯಲಿ ಎಂದು ಬ್ರಹ್ಮನು ಹೇಳಿದನು.
ನಾರಯಣಾದ್ರಿ
ನಾರಯಣ ಋಷಿಗಳಿಗೆ ಮರ್ಯಾದೆ ಸೂಚಿಸಲು ಈ ಭಾಗದ ಬೆಟ್ಟವನ್ನು ನಾರಯಣಾದ್ರಿ ಎಂದು ಕರೆಯಲಾಗುತ್ತದೆ. ಇದನ್ನು ಬೇರೆ ಬೇರೆ ಹೆಸರಿನಿಂದಲೂ ಕರೆಯುತ್ತಾರೆ.
ಸಂಗ್ರಹ: ಎಚ್ ಎಸ್ ರಂಗರಾಜನ್