ಭರತನಾಟ್ಯ, ಸಂಗೀತ 10 ರಂದು

ಬೆಂಗಳೂರು: ದಾಸ ಮಾರ್ಗ, ಭರತನಾಟ್ಯ, ಸಂಗೀತ, ಭಾರತೀಯ ಜನಪದ ನೃತ್ಯ ವೈಭವವನ್ನು ವೇದಾಂತ ಮಾಲ ಕಲಾ ಕುಟೀರ ಮತ್ತು ನಾಟ್ಯಶ್ರೀ ಕಲಾ ಕುಟೀರವು ತನ್ನ ದಶಮಾನೋತ್ಸವ ಪ್ರಯುಕ್ತ ಡಿಸೆಂಬರ್10 ರಂದು ಸಂಜೆ 4-00ಕ್ಕೆ ಆಯೋಜಿಸಿದೆ.

ಜಯನಗರದ 8ನೇ ಬ್ಲಾಕ್ ನಲ್ಲಿರುವ ಜೆ ಎಸ್ ಎಸ್ ಆಡಿಟೋರಿಯಂ ನಲ್ಲಿ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅಥಿತಿಗಳಾಗಿ ಗುರು ಕಲಮಂಡಲಮ್ ಉಷಾ ಧಾತಾರ್, ಗುರು ಕಲಾಯೋಗಿ ಪುಲಕೇಶಿ ಕಸ್ತೂರಿ, ಹಿರಿಯ ರಂಗಕರ್ಮಿ ಶ್ರೀಪತಿ ಮಂಜನ ಬೈಲು, ಕನ್ನಡ ಸಂಸ್ಕೃತಿ ಇಲಾಖೆಯ ಗೆಜೆಟೆಡ್ ಪ್ರಭಂದಕ ಮಂಜುನಾಥ್ ಆರಾಧ್ಯ, ಅಖಿಲ ಕರ್ನಾಟಕ ಮಾಧ್ವ ಮಹಾಸಭಾ ಸಂಘಟನಾ ಕಾರ್ಯದರ್ಶಿ ನ, ಶ್ರೀ, ಸುಧೀಂದ್ರ ರಾವ್, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುವರ್ಣ ಬಸವರಾಜ್ ಹಾಗೂ ನಾಟ್ಯ ಕುಸುಮಂಜಲಿ ಸಾoಸ್ಕೃತಿಕ ವೇದಿಕೆಯ ಶ್ರೀನಾಥ್ ಜೋಯಿಸ್ ಪಾಲ್ಗೊಳ್ಳತ್ತಿದ್ದಾರೆ, ಕಾರ್ಯಕ್ರಮದ ನೇತೃತ್ವವನ್ನು ಕಲಾ ಕುಟೀರ ಸoಸ್ಥಾಪಕ ಶ್ರೀನಿವಾಸ ಸಾಸ್ಥಾನ, ಕಲಾಕ್ಷೇತ್ರ ಬೆಂಗಳೂರು ಸಂಸ್ಥಾಪಕರಾದ ವನಿತಾ ಕುಮಾರ್,ವೇದಾಂತ ಮಾಲಾ ಕಲಾ ಕುಟೀರ ಗುರು ಮಾಲ ವೆಂಕಟೇಶ್ ಮತ್ತು ನಾಟ್ಯಶ್ರೀ ಕಲಾ ಕುಟೀರ ಗುರು ಲತಾ ಕಿರಣ್ ಅವರು ವಹಿಸಲಿದ್ದು, ದಾಸಪರಂಪರೆಯ ಸಂಗೀತ ಮತ್ತು ಜನಪದ ಗೀತೆಗಳ ನೃತ್ಯ ವೈಭವವನ್ನು ನಾಲ್ಕು ಸಂಸ್ಥೆಗಳ ವಿದ್ಯಾರ್ಥಿಗಳು ಪ್ರಸ್ತುತ ಪಡಿಸುವರು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

ಪ್ರತಿಕ್ರಿಯೆ ನೀಡಿ

Latest Articles