ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ಪ್ರಕಾಶನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಡಿಸೆಂಬರ್ 13 ರಿಂದ 16 ರ ವರೆಗೆ (ಪ್ರತಿದಿನ ಸಂಜೆ 6 ರಿಂದ 8) ವಿವಿಧ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಅವುಗಳ ವಿವರಗಳು ಈ ರೀತಿ ಇವೆ :
ಡಿಸೆಂಬರ್ 13, ಮಂಗಳವಾರ ಸಂಜೆ 6 ಗಂಟೆಗೆ–ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ–ಶ್ರೀ ರಾಮವಿಠಲಾಚಾರ್ ರಿಂದ “ವಿಷ್ಣುರಹಸ್ಯ” ವಿಷಯವಾಗಿ ಧಾರ್ಮಿಕ ಪ್ರವಚನ.
ಡಿಸೆಂಬರ್ 14, ಬುಧವಾರ ಸಂಜೆ 6 ಗಂಟೆಗೆ–ಮುತ್ಯಾಲನಗರದ ಶ್ರೀ ಗುರುರಾಜ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ–ಶ್ರೀ ರಾಮವಿಠಲಾಚಾರ್ ರಿಂದ “ವಿಷ್ಣು ರಹಸ್ಯ” ವಿಷಯವಾಗಿ ಪ್ರವಚನ.
ಡಿಸೆಂಬರ್ 15, ಗುರುವಾರ ಸಂಜೆ 6-30ಕ್ಕೆ–“ಹರಿನಾಮ ಸಂಕೀರ್ತನೆ” ಗಾಯನ : ಶ್ರೀಮತಿ ಚಾಂದಿನಿ ಗರ್ತಿಕೆರೆ, ಶ್ರೀ ಮೈಸೂರು ಸಂಜೀವ್ ಕುಮಾರ್ (ಪಿಟೀಲು), ಶ್ರೀ ಮುರಳಿ ನಾರಾಯಣರಾವ್ (ಮೃದಂಗ).
ಡಿಸೆಂಬರ್ 16, ಶುಕ್ರವಾರ ಸಂಜೆ 6 ಗಂಟೆಗೆ–ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘದ ಸದಸ್ಯರಿಂದ ಭಜನೆ, 7 ಗಂಟೆಗೆ–ಶ್ರೀ ರಾಮವಿಠಲಾಚಾರ್ ರಿಂದ “ವಿಷ್ಣು ರಹಸ್ಯ” ವಿಷಯವಾಗಿ ಧಾರ್ಮಿಕ ಪ್ರವಚನ.
ಕಾರ್ಯಕ್ರಮನಡೆಯುವಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 10ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ಪ್ರಕಾಶನಗರ, ಬೆಂಗಳೂರು.