ಮಂಗಳ ದ್ರವ್ಯಗಳಲ್ಲಿ ಮತ್ತು ಷೊಡಶೋಪಚಾರ ಪೂಜೆಗಳಲ್ಲಿ ಈ ಗಂಧದ ಮಹತ್ವ ತುಂಬ ಇದೆ.
ಯಾವ ದೇವರ ಪೂಜೆ ಆದರೂ ಗಂಧವಿಲ್ದೇ ಪೂಜೆ ಮಾಡುವ ಹಾಗಿಲ್ಲ ಇದು ಶಾಸ್ತ್ರ ನಿಯಮ ಈ ಗಂಧವನ್ನು ಕೂರಡಿನಲ್ಲಿ ತೇದ ಗಂಧ ಮಾತ್ರ ಪೂಜೆಗೆ ಶ್ರೇಷ್ಠ. ಪೂರ್ವ ಜನ್ಮದ ಕರ್ಮ ವನ್ನು ತೇದು ಈ ಜನ್ಮದಲ್ಲಿ ನಿನ್ನ ಪೂಜೆಯಿಂದ ಈ ಗಂಧವನ್ನು ಹಚ್ಚುವ ಮೂಲಕ ನನ್ನನ್ನು ಅನುಗ್ರಹಿಸು ದೇವ ಎಂದು ಪ್ರಾರ್ಥನೆ ಮಾಡುವ ಸಂಕೇತವಾಗಿದೆ. ನಿತ್ಯ ಶ್ರೀಸೂಕ್ತವನ್ನು ಹೇಳುತ್ತ ಕೂರಡಿನಲ್ಲಿ ಗಂಧ ತೇದು ದೇವರಿಗೆ ಅರ್ಪಿಸಿದರೆ ಆ ಮನೆಯಲ್ಲಿ ದುಃಖ ದಾರಿದ್ರ್ಯ ನಾಶವಾಗಿ ಆ ಮಹಾಲಕ್ಷ್ಮಿಯ ಸಾನ್ನಿಧ್ಯ ನೆಲೆಸುವುದು. ಇದರಿಂದ ಅವರ ಜೀವನದಲ್ಲಿನ ಸುಖ, ಸಂತೋಷ, ನೆಮ್ಮದಿ, ಶಾಂತಿ ಲಭಿಸುವುದರಲ್ಲಿ ಸಂಶಯವಿಲ್ಲ.
1. ಗಣಪತಿಗೆ ರಕ್ತ ಚಂದನವನ್ನುಹೊಟ್ಟೆಗೆ ಹಚ್ಚುವುದರಿಂದ ಸಕಲ ಐಶ್ವರ್ಯ ಪ್ರಾಪ್ತಿ ಗ್ರಹಚಾರ ದೋಷ ಪರಿಹಾರ.
2 ಮಹಾಲಕ್ಷ್ಮಿಗೇ ಅರಿಶಿನ ಗಂಧವನ್ನು ಕಂಠಕ್ಕೆ ಹಚ್ಚುವುದರಿಂದ ಮನೆಯಲ್ಲಿ ಘರ್ಷಣೆಯು ಕಡಿಮೆಯಾಗಿ ವಾಕ್ಯ ಸಿದ್ಧಿ ಮತ್ತು ಸಾಲ ಬಾಧೆ ತಿರುವುದು.
3. ದುರ್ಗ ದೇವಿಗೆ ಕುಂಕುಮ ಗಂಧವನ್ನು ವಕ್ಷಸ್ಥಳದಲ್ಲಿ ಹಚ್ಚುವುದರಿಂದ ಆರೋಗ್ಯ ಮತ್ತು ಉದ್ಯೋಗ ಪ್ರಾಪ್ತಿ.
4 ಮಹಾವಿಷ್ಣುವಿಗೆ ಹಳದಿ ಗಂಧವನ್ನು ಪಾದಕ್ಕೆ ಹಚ್ಚುವುದರಿಂದ ಸಕಲ ಶನಿದೋಷ ಪರಿಹಾರ ಮತ್ತು ದಾಂಪತ್ಯ ಸುಖ ಲಭಿಸುವುದು.
5. ಪರಶಿವ ಅರಿಶಿನ ಕುಂಕುಮ ಮಿಶ್ರ ಮಾಡಿದ ಗಂಧವನ್ನು ಶಿವಲಿಂಗದಲ್ಲಿ ಬಿಲ್ವ ಪತ್ರ ಸಹಿತ ಹಣೆಗೆ ಹಚ್ಚುವುದರಿಂದ ಸಕಲ ಶಾಪ ಪಾಪ ಪರಿಹಾರ.
6 ಆಂಜನೇಯ ಕೇಸರಿ ಗಂಧವನ್ನು ಆಂಜನೇಯ ಬಾಲಕ್ಕೆ ಹಚ್ಚುವುದರಿಂದ ಸಕಲ ಶತ್ರು ಬಾಧೆ ಪರಿಹಾರ ಸಾಧ್ಯ.