ಮಹತ್ತ್ವದ ಕೃತಿ ‘ಭಾರತೀಯ ಸಂಸ್ಕೃತಿ’

ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಪರಿಚಯಿಸುವ ಮಹತ್ತ್ವದ ಕೃತಿ. ಲೇಖಕರಾದ ಡಾ. ಎಸ್. ಶ್ರೀಕಂಠಶಾಸ್ತ್ರೀ ಅವರು ವಿಶ್ವವಿಖ್ಯಾತ ಇತಿಹಾಸಜ್ಞರಾಗಿದ್ದರು. ಈಗಲೂ ವಿದೇಶಗಳ ವಿಶ್ವವಿದ್ಯಾಲಯಗಳಲ್ಲಿ, ಅವರ ಸಂಶೋಧನಲೇಖನಗಳನ್ನು ಅಧ್ಯಯನ ಸಾಮಗ್ರಿಯಾಗಿ ಬಳಸಿಕೊಂಡು ಸಂಶೋಧನೆಗಳಲ್ಲಿ ತೊಡಗಿರುವವರು ಹಲವರಿದ್ದಾರೆ; ಶ್ರೀಕಂಠಶಾಸ್ತ್ರೀಯವರ ಬರಹಗಳಿಗೆ ಈಗಲೂ ಬಹು ಬೇಡಿಕೆಯಿದೆ. ‘ಭಾರತೀಯ ಸಂಸ್ಕೃತಿ’ ಶ್ರೀಕಂಠಶಾಸ್ತ್ರೀ ಅವರು ಕನ್ನಡದಲ್ಲಿಯೇ ಬರೆದಿರುವ ಮಹತ್ತ್ವದ ಗ್ರಂಥ. ಇದರಲ್ಲಿನ ಪ್ರತಿಯೊಂದು ವಾಕ್ಯವೂ ಅಧಿಕೃತವಾದದ್ದು; ಸಂಶೋಧನೆಗಳ ಫಲಿತವಾದದ್ದು. ಕೇವಲ ಭಾವನಾತ್ಮಕವಾದ ಸಂಗತಿಗಳು ಯಾವುದೂ ಇದರಲ್ಲಿಲ್ಲ. ಇಂಥ ಮಹತ್ತ್ವದ ಗ್ರಂಥವನ್ನು ನಾವೆಷ್ಟು ಜನ ಓದಿದ್ದೇವೆ? ಎಷ್ಟು ಜನರಿಗೆ ಓದಿಸಿದ್ದೇವೆ? – ಎನ್ನುವುದು ನಮಗೆ ನಾವೇ ಕೇಳಿಕೊಳ್ಳಬೇಕಾದ ಪ್ರಶ್ನೆ. *ಭಾರತೀಯ ಸಂಸ್ಕೃತಿ* ಗ್ರಂಥವನ್ನು ಖರೀದಿಸಲು, ಆಪ್ತರಿಗೆ ಪರಿಚಿತರಿಗೆ ಮನೆಮಕ್ಕಳಿಗೆ ಉಡುಗೊರೆಯಾಗಿ ಕೊಡಲು WhatsApp ಮಾಡಿ: 074836 81708

Related Articles

ಪ್ರತಿಕ್ರಿಯೆ ನೀಡಿ

Latest Articles