ಸೊಸೆಯಲ್ಲಿ ಬಯಸುವ
ಸಂಸ್ಕಾರವನ್ನು ಮೊದಲು
ಮನೆಯ ಮಗಳಿಗೆ ನೀಡಿರಿ
ಅಳಿಯನಲ್ಲಿ ಬಯಸುವ
ಸಂಸ್ಕಾರವನ್ನು ಮೊದಲು
ಮನೆಯ ಮಗನಿಗೆ ನೀಡಿರಿ
ಅತ್ತೆಯಲ್ಲಿ ತಾಯಿಯಂತಾ
ಮಮತೆ ವಾತ್ಸಲ್ಯಬೇಕಾದರೆ
ಹಡೆದ ಅವ್ವನಂತೆ ಕಾಣಿರಿ
ಸೊಸೆಯಲ್ಲಿ ಮಗಳಂತಾ
ಸ್ನೇಹ ಪ್ರೀತಿ ಬೇಕಾದರೆ
ಕಂದಮ್ಮನೆಂದು ಕ್ಷಮಿಸಿಬಿಡಿ
ಕ್ಷಣಮಾತ್ರದ ಈ ಬದುಕಲಿ
ಅರಿಷಡ್ವರ್ಗಗಳ ಮೆಟ್ಟಿ ನಿಂತು
ಜೀವನವನ್ನು ಸುಂದರವಾಗಿಸಿ
ಸಂಸಾರ ನೌಕೆ ದಡಸೇರಲು
ಬಾಗುವುದಾದರೆ ಮಹಾದೇವ
ಇರುವನೆಂದು ಬಾಗಿಬಿಡಿ.
ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ ಚ. ಕಿತ್ತೂರು