ಮುಧೋಳ: ತಾಲೂಕಿನ ಸುಕ್ಷೇತ್ರ ಮಾಚಕನೂರದಲ್ಲಿಡಿ.31ರಿಂದ ಜ.3ರವರಿಗೆ ಹೊಳೆಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಜರುಗಲಿದೆ.
31ಕ್ಕೆ ಬಾಳೆಕಂಬದ ಮಹಾಪೂಜೆ, ಜ.1ಕ್ಕೆ ಕಾರ್ತಿಕೋತ್ಸವ, ಜ.2ಕ್ಕೆ ರಥೋತ್ಸವ ನಡೆಯಲಿದೆ.
ಜ.3ಕ್ಕೆ ಜಂಗಿ ನಿಕಾಲಿ ಕುಸ್ತಿ, ಜನಮೆಚ್ಚಿದ ಜಮೀನ್ದಾರ್ ಎಂಬ ಸಾಮಾಜಿಕ ನಾಟಕ ಪ್ರದರ್ಶನ, ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.
























