ದೇಗುಲಕ್ಕೆ ಹೋದಾಗ ಪ್ರದಕ್ಷಿಣೆ ಎಂಬುದು ಅತೀ ಮುಖ್ಯ ಆಗಿರುತ್ತದೆ. ಪ್ರದಕ್ಷಿಣೆ ಏಕೆ ಹಾಕುತ್ತೇವೆ ಎಂಬುದು ಹೆಚ್ಚಿನ ಜನರಿಗೆ ತಿಳಿದಿಲ್ಲ ಭಗವಂತನ ಬಳಿ ನಿನ್ನ ಬಿಟ್ಟರೆ ನಮ್ಮನ್ನು ಕಾಯುವವರು ಯಾರೂ ಇಲ್ಲ ನೀನು ತೋರಿಸಿದ ಮಾರ್ಗದಲ್ಲಿ ನಡೆಯುತ್ತೇವೆ ಎಂಬುದು ಈ ಪ್ರದಕ್ಷಿಣೆಯ ಅರ್ಥ ಆಗಿದೆ.
ದೇವಸ್ಥಾನದಲ್ಲಿ 5 ಬಾರಿ ಪ್ರದಕ್ಷಿಣೆ ಮಾಡಿದರೆ ಜಯ ಸಿಗುತ್ತದೆ ಹಾಗೆಯೇ 7 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಶತ್ರುಗಳನ್ನು ಪರಾಜಯ ಮಾಡಬಹುದು. 9 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಸಂತಾನ ಪ್ರಾಪ್ತಿ ಆಗುತ್ತದೆ. 11 ಬಾರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಆಯುಷ್ಯ ವೃದ್ಧಿ ಆಗುತ್ತದೆ.
ದೇವಸ್ಥಾನಕ್ಕೆ 13 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಪ್ರಾರ್ಥನೆ ಸಿದ್ಧಿ ಆಗುತ್ತದೆ. 15 ಬಾರಿ ಪ್ರದಕ್ಷಿಣೆ ಹಾಕುವುದರಿಂದ ಧನ ಪ್ರಾಪ್ತಿ, 17 ಬಾರಿ ಪ್ರದಕ್ಷಿಣೆ ಮಾಡಿದರೆ ಧನ ವೃದ್ಧಿ , 19 ಬಾರಿ ಪ್ರದಕ್ಷಿಸಿದರೆ ರೋಗ ನಿವಾರಣೆ ಆಗುತ್ತದೆ.
ದೇವಸ್ಥಾನಕ್ಕೆ ಬೆಳಗಿನ ಜಾವ ಪ್ರದಕ್ಷಿಣೆ ಹಾಕಿದರೆ ರೋಗ ನಿವಾರಣೆ ಆಗುತ್ತದೆ ಮಧ್ಯಾಹ್ನ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ಸಿದ್ಧಿ, ಸಂಜೆ ವೇಳೆ ಪ್ರದಕ್ಷಿಣೆ ಮಾಡುವುದರಿಂದ ಪಾಪ ದೂರ ಆಗುತ್ತದೆ. ರಾತ್ರಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿದರೆ ಮೋಕ್ಷ ಸಿದ್ಧಿ ಆಗುತ್ತದೆ.
ಪ್ರದಕ್ಷಿಣೆ ಎಂದರೆ ಗರ್ಭಗುಡಿಯನ್ನು ದಕ್ಷಿಣಾಭಿಮುಖವಾಗಿ ಸುತ್ತಿ ಬರುವುದು ಎಂದು ಅರ್ಥ. ತಾನು ಹಿಂದಿನ ಜನ್ಮದಲ್ಲಿ ಮಾಡಿದ ಪಾಪಗಳು ಪದೇ ಪದೇ ದೇವರನ್ನು ಪ್ರದಕ್ಷಿಣೆ ಮಾಡುವುದರಿಂದ ನಾಶ ಆಗಲಿ ಎಂಬ ಭಾವನೆ. ಒಂದನೆಯ ಪ್ರದಕ್ಷಿಣೆಯಿಂದ ಎಲ್ಲಾ ಪಾಪ ನಾಶ ಎರಡನೆಯ ಪ್ರದಕ್ಷಿಣೆಯಿಂದ ಪ್ರಾಪಂಚಿಕ ಆಧ್ಯಾತ್ಮಿಕ ಲಾಭ ಮೂರನೇ ಪ್ರದಕ್ಷಿಣೆ ಮೋಕ್ಷದ ದಾರಿ ಪ್ರಾಪ್ತಿ ಆಗುತ್ತದೆ.
ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು?
ಗಣಪತಿಗೆ 1 ಬಾರಿ, ಸೂರ್ಯನಿಗೆ 2 ಬಾರಿ ಪ್ರದಕ್ಷಿಣೆ ಹಾಕಬೇಕು, ಯಾವುದೇ ದೇವಿ ಮತ್ತು ವಿಷ್ಣುವಿಗೆ 4 ಬಾರಿ ಪ್ರದಕ್ಷಿಣೆ ಹಾಕಬೇಕು.
ತನ್ನ ದೇಹವೇ ದೇವಾಲಯ ಒಳಗಿರುವ ಆತ್ಮನೇ ಪರಮಾತ್ಮ ಎಂದು ಭಾವಿಸಿದಾಗ ನಿಂತಲ್ಲೇ ಕೈ ಮುಗಿದು ಕೊಂಡು ಮೂರು ಸುತ್ತು ಬರುವುದು ವಾಡಿಕೆ.
ಪ್ರದಕ್ಷಿಣೆ ಹಾಕುವಾಗ ಮನಸಿನಲ್ಲಿ ಚಂಚಲ ಸ್ವಭಾವ ಇರಬಾರದು ಯಾರ ಜೊತೆಗೆ ಮಾತನಾಡಲು ಸಹ ಹೋಗಬಾರದು, ಏಕಾಗ್ರತೆ ಹೆಚ್ಚಿಸಿಕೊಂಡು ಭಗವಂತನ ಸ್ಮರಣೆ ಮಾಡುತ್ತಾ ನಿಧಾನವಾಗಿ ಪ್ರದಕ್ಷಿಣೆ ಮಾಡಬೇಕು.