ಮೈಸೂರಿನ ಅಜ್ಜನ ಮನೆ ಕಲಾಪ್ರಪಂಚ ಏರ್ಪಡಿಸಿದ್ದ ಹರಿದಾಸ ಸ್ಮರಣೆ ದಾಸರ ಪದಗಳ ಗಾಯನ ಸ್ಪರ್ಧೆಯ ಉದ್ಘಾಟನೆ ಗಣಪತಿ ಪೂಜೆ ನಂತರ ವೇದಘೋಷದ ಜತೆಜತೆಗೆ ಸ್ಪರ್ಧೆಗೆ ಬಂದಿದ್ದ ತೀರ್ಪು ಗಾರರಿಂದಲೇ ದೀಪ ಬೆಳಗುಸುವಿಕೆ, ನಂತರ ವೇದಿಕೆ ಯಲ್ಲೇ ಅವರಿಗೆ ಅರಿಶಿನ ಕುಂಕುಮ ತಾಂಬೂಲ ನೀಡಿದ್ದಲ್ಲದೆ ಸ್ಪರ್ಧೆಗೆ ಮಕ್ಕಳ ಜತೆ ಬಂದಿದ್ದ ತಾಯಂದಿರಿಗೂ ತಾಂಬೂಲ ನೀಡಿ ಚಾಲನೆ ನೀಡಲಾಯಿತು. ಯಾವುದೇ ಭಾಷಣವಿಲ್ಲದೆ ಹಿಂದೂ ಸಂಸ್ಕೃತಿಗೆ ಆದ್ಯತೆ ನೀಡಿ ಕಾರ್ಯಕ್ರಮ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.
ನಗರದ ನಾದಬ್ರಹ್ಮ ಸಂಗೀತಾ ಸಭಾದಲ್ಲಿ ಅಜ್ಜನ ಮನೆ ಕಲಾಪ್ರಪಂಚದ ವತಿಯಿಂದ ಸೋಮವಾರ ನಡೆದ ಹರಿದಾಸ ಸ್ಮರಣೆ (ದಾಸರ ಗೀತೆಗಳ ಗಾಯನ) ರಾಜ್ಯ ಮಟ್ಟದ ಸ್ಪರ್ಧೆ ನಡೆಯಿತು. ಮೇಧಾ ಉಡುಪ (ಪ್ರಥಮ) ಆರ್ಣ. ಎಸ್. (ದ್ವಿತೀಯ), ನಿರಾಮಯ ವಿ. ರಾವ್ (ತೃತೀಯ) ಬಹುಮಾನ ಪಡೆದರು. ವಿಜೇತರೊಂದಿಗೆ ತೀರ್ಪುಗಾರರಾಗಿದ್ದ ವಿದುಷಿ ಡಾ. ನಾಗವಲ್ಲಿ ನಾಗರಾಜ್, ವಿದುಷಿ ಡಾ. ತುಳಸಿ ರಾಮಚಂದ್ರಘಿ, ವಿದ್ವಾನ್ ರಾಜಪ್ಪ ಇದ್ದಾರೆ.